Headlines

ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ಏನಿದರ ವಿಶೇಷತೆ?

ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ಏನಿದರ ವಿಶೇಷತೆ?

ಹೊಸಪೇಟೆಯ ದರೋಜಿ ಕರಡಿಧಾಮದಲ್ಲಿ ವಿಶೇಷ 'ಸ್ಕಾಪ್ಸ್ ಗೂಬೆ' ಪತ್ತೆ; ಏನಿದರ ವಿಶೇಷತೆ?
ಹೊಸಪೇಟೆಯ ದರೋಜಿ ಕರಡಿಧಾಮದ ಬಳಿ ಇದೇ ಮೊದಲ ಬಾರಿಗೆ ‘ಭಾರತೀಯ ಸ್ಕಾಪ್ಸ್ ಗೂಬೆ’ ಎಂಬ ವಿಶಿಷ್ಟ ನಿಶಾಚರಿ ಪತ್ತೆಯಾಗಿದೆ. ಛದ್ಮವೇಷಧಾರಿಯಾದ ಈ ಗೂಬೆಯನ್ನು ಅದರ ವಿಶಿಷ್ಟ ಸದ್ದಿನಿಂದ ಪಕ್ಷಿ ಪ್ರೇಮಿಗಳು ಗುರುತಿಸಿದ್ದು, ಈ ಭಾಗದಲ್ಲಿ ಈ ಪ್ರಭೇದದ ಗೋಚರತೆ ಅಚ್ಚರಿಗೆ ಕಾರಣವಾಗಿದೆ.
ವಿಶಿಷ್ಟ ಕಿವಿಯಂತಹ ಗರಿ, ಛದ್ಮವೇಷಧಾರಿಯಾದ ನಿಶಾಚರಿ ‘ ಭಾರತೀಯ ಸ್ಕಾಪ್ಸ್ ಗೂಬೆ’ ಇದೇ ಮೊದಲ ಬಾರಿ ದರೋಜಿ ಕರಡಿಧಾಮ ಬಳಿ ಪತ್ತೆಯಾಗಿದೆ.

ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಬಳಿ ಪತ್ತೆಯಾಗಿರುವ ಈ ಗೂಬೆಯು, ಗಾತ್ರದಲ್ಲಿ ಚಿಕ್ಕದಾಗಿದೆ. 9ರಿಂದ 10 ಇಂಚು ಉದ್ದವಿರುವ ಈ ಗೂಬೆಯೂ ಬೂದು ಬಣ್ಣದ್ದಾಗಿದೆ. ಕಣ್ಣು ಕಡು ಬಣ್ಣವಿದೆ. ದೇಹದ ಬಣ್ಣ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಹಗಲಿನಲ್ಲಿ ಇದನ್ನು ಪತ್ತೆ ಹಚ್ಚುವುದು ಕಷ್ಟ.

ಇದನ್ನೂ ಓದಿ: 7 ಬಾರಿ ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ, ಯಾರಿಗೆ ಹೆಚ್ಚು ಕಾಡುತ್ತೆ ಹಾವಿನ ಭಯ?

ಸ್ಕಾಪ್ಸ್ ಗೂಬೆ ವಟ ವಟ ಸದ್ದಿನಿಂದ ಹಿಂಬಾಲಿಸಿದ ಪಕ್ಷಿ ಪ್ರೇಮಿಗಳಾದ ಸಾಚಿರಾಯ್ ಮತ್ತು ಶ್ರೀಧರ್, ಪೆರುಮಾಳ್ ಪಂಪಯ್ಯ ಸ್ವಾಮ ಗುರುತಿಸಿದ್ದಾರೆ. ಈ ಪ್ರಬೇಧವೇ ಈ ಭಾಗದಲ್ಲಿ ಹೊಸದಾಗಿ ಗೋಚರಿಸಿರುವುದು ಅಚ್ಚರಿ ಸಂಗತಿಯಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ, ಪರಿಸರವಾದಿ ಪಂಪಯ್ಯಸ್ವಾಮಿ ಮಳೇಮಠ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವಿನೊಂದಿಗೆ ಕಾದಾಡಿ ಪ್ರಾಣಬಿಟ್ಟ ಸಾಕುನಾಯಿ: ವೀಡಿಯೋ

Source link

Leave a Reply

Your email address will not be published. Required fields are marked *