ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ

ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ

ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ

ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ ನಡೆದಿದೆ. ಗಣಹೋಮ ಸೇರಿದಂತೆ ವಿಶೇಷ ಪೂಜೆ ಮಾಡಲಾಗಿದೆ. ಕ್ರೀಡಾಂಗಣ, ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೂಜೆ ಮಾಡಲಾಗಿದೆ.

ಮಾರ್ಚ್ 28 ರಿಂದ ಐಪಿಎಲ್ ಟೂರ್ನಿ 2026ರ ಪಂದ್ಯಗಳು ಆರಂಭಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡಯಲಿದೆ. ಮೊದಲ ಪಂದದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೋರಾಟ ನಡೆಸಲಿದೆ. ಪಂದ್ಯ ಆರಂಭಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಗೇಟ್‌ಗಳಿಗೆ ವಿಶೇಷ ಪೂಜೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಣಹೋಮ ಸೇರಿದಂತೆ ವಿಶೇಷ ಪೂಜೆ ಮಾಡಲಾಗಿದೆ. ಕ್ರೀಡಾಂಗಣದ ಒಳಗಡೆ ಹಾಗೂ ಕ್ರೀಡಾಂಗಣ ಪ್ರಮುಖ ಗೇಟ್‌ಗಳಿಗೆ ಪೂಜೆ ಮಾಡಲಾಗಿದೆ. ಪಂಚ ಅರ್ಚಕರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಶನಿವಾರದಿಂದ ಪಂದ್ಯಗಳು ಆರಂಭಗೊಳ್ಳುತ್ತಿರುವ ಕಾರಣ ಇಂದು (ಮಾ.25) ಪೂಜೆ ನಡೆದಿದೆ

2025ರ ಐಪಿಎಲ್ ಟೂರ್ನಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ ದುರ್ಘಟನೆ ನಡೆದಿತ್ತು. ಇದು ಬೆಂಗಳೂರು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕಪ್ಪು ಚುಕ್ಕೆ ತಂದಿತ್ತು. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನವೇ ದುರ್ಘಟನೆಗಳು ನಡೆಯದಂತೆ, ಎಲ್ಲಾ ಪಂದ್ಯದಳು ಸೂಸೂತ್ರವಾಗಿ ಹಾಗೂ ಯಶಸ್ವಿಯಾಗಿ ನಡೆಯಲು ವಿಶೇಷ ಪೂಜೆ ಮೂಲಕ ಪ್ರಾರ್ಥನೆ ಮಾಡಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಬಳಿಕ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಿಸಿಸಿಐ ಕಪ್ಪು ಪಟ್ಟಿಗೆ ಸೇರಿತ್ತು. ಬೆಂಗಳೂರಿನಲ್ಲಿ ಆಯೋಜನೆಗೊಳ್ಳಬೇಕಿದ್ದ ಪಂದ್ಯಗಳು ಕೈತಪ್ಪಿಹೋಗಿತ್ತು. ಈ ದುರ್ಘಟನೆ ಬಳಿಕ ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಆಡಳಿತ ಮಂಡಳಿ ಮತ್ತೆ ಕ್ರಿಕೆಟ್ ತರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ವಿಶೇಷ ಪೂಜೆ ಮೂಲಕ ಚಿನ್ನಸ್ವಾಮಿಯ ಯಶಸ್ಸಿಗೆ ಪ್ರಾರ್ಥಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿ ಪಂದ್ಯಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದಡೆ ಅಭಿಮಾನಿಗಳ ನಿಯಂತ್ರಿಸುವುದರ ಜೊತೆ ಹಲವು ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇನ್ನು ಪಂದ್ಯದ ದಿನ ಸಂಚಾರ ಮಾರ್ಗದಲ್ಲೂ ಕೆಲ ಬದಲಾವಣೆ ಮಾಡಲಾಗುತ್ತದೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭಾರಿ ಭದ್ರತೆ

Source link

Leave a Reply

Your email address will not be published. Required fields are marked *