ಶ್ರೀಲೀಲಾ (Sreeleela) ಬೇಡಿಕೆಯ ನಟಿ ಇಂದು ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಳಿಕ ತೆಲುಗಿಗೆ ಹೋಗಿ ಅಲ್ಲಿ ಬಹುಬೇಗ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್ ಗೆ ಹೆಜ್ಜೆ ಇಟ್ಟಿದ್ದೇ ತಡ ಒಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ಬಾಚಿಕೊಂಡಿದ್ದಾರೆ. ಇದೀಗ ತಮಿಳಿನಲ್ಲೂ ನಟಿಗೆ ಬಲು ಬೇಡಿಕೆ ಇದೆ. ಅದ್ಭುತ ನೃತ್ಯ ಪ್ರತಿಭೆ ಸೌಂದರ್ಯದ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಶ್ರೀಲೀಲಾ ಕೇವಲ ನಟಿ, ಒಳ್ಳೆಯ ವಿದ್ಯಾರ್ಥಿ ಸಹ. ಇದೀಗ ಶ್ರೀಲೀಲಾ ತಮ್ಮ ವಿದ್ಯಾರ್ಥಿ ಜೀವನ ಮುಗಿಸಿ ವೈದ್ಯರಿದ್ದಾರೆ.
ಬಾಲ್ಯದಿಂದಲೂ ಅತ್ಯುತ್ತಮ ವಿದ್ಯಾರ್ಥಿನಿ ಆಗಿರುವ ಶ್ರೀಲೀಲಾ, ಸಿನಿಮಾ, ನೃತ್ಯ ಕಾರ್ಯಕ್ರಮಗಳ ನಡುವೆಯೇ ಎಂಬಿಬಿಎಸ್ ಮುಗಿಸಿದ್ದಾರೆ. ಶ್ರೀಲೀಲಾ ನಿನ್ನೆಯಷ್ಟೆ ತಮ್ಮ ವೈದ್ಯ ಪದವಿಯನ್ನು ಗಳಿಸಿದ್ದಾರೆ. ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ನಡೆಯುತ್ತಿರುವ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕರಿಸಿದ್ದಾರೆ.
ನಟಿ #ಶ್ರೀಲೀಲಾ ಅಧಿಕೃತವಾಗಿ ಪದವಿ ಪಡೆದಿದ್ದಾರೆ, ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ್ದಾರೆ ❤️
ಇಷ್ಟು ಚಿಕ್ಕ ವಯಸ್ಸಿನಲ್ಲೇ ಶೈಕ್ಷಣಿಕ ಮತ್ತು ಸಿನಿಮಾ ಎರಡನ್ನೂ ಯಶಸ್ವಿಯಾಗಿ ಸಮತೋಲನಗೊಳಿಸಿದ ಸಮರ್ಪಣೆಗೆ ಸ್ಪೂರ್ತಿದಾಯಕ ಉದಾಹರಣೆ. pic.twitter.com/biGo6TC3O0
– ರಮೇಶ್ ಬಾಲಾ (@rameshlaus) ಫೆಬ್ರವರಿ 11, 2026
ಶ್ರೀಲೀಲಾ ವೈದ್ಯಕೀಯ ಪದವಿ ಸ್ವೀಕಾರ ಮಾಡುತ್ತಿರುವ ಹಲವು ಚಿತ್ರಗಳು, ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಶ್ರೀಲೀಲಾ ಅವರು ಪದವಿಯಿಂದ ಪದವಿ ಸ್ವೀಕಾರ ಮಾಡಿರುವ ವಿಡಿಯೋ, ಅದರ ಬಳಿಕ ಸಾಮೂಹಿಕವಾಗಿ ವೈದ್ಯ ಪ್ರತಿಜ್ಞೆ ಸ್ವೀಕಾರ ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ ನೀವು ಬೋಧಿಸಿದ ಬಳಿಕ ‘ಗಳು ಇದೀಗ ಅಧಿಕೃತವಾಗಿ ವೈದ್ಯರು’ ಎಂಬ ಘೋಷಣೆ ಬಂದ ಕೂಡಲೇ ಖುಷಿಯಾಗಿ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:’ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ
ಸಿನಿಮಾ ನಟ-ನಟಿಯರು ಅಲ್ಪ ಜ್ಞಾನಿಗಳು, ಒಳ್ಳೆಯ ಓದಿನ ಹಿನ್ನೆಲೆ ಇಲ್ಲದವರು ಬಹಳ ಕಡಿಮೆ. ಆದರೆ ಕೆಲವು ನಟ-ನಟಿಯರು ಚೆನ್ನಾಗಿ ಓದಿದ ಹಿನ್ನೆಲೆ ಉಳ್ಳವರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಸಹ ವೈದ್ಯೆ ಆಗಿದ್ದಾರೆ. ಇದೀಗ ಶ್ರೀಲೀಲಾ ಸಹ ವೈದ್ಯೆ ಆಗಿದ್ದಾರೆ. ಸಾಕಷ್ಟು ಪದವಿಧರರು ಸಹ ಚಿತ್ರರಂಗದಲ್ಲಿ ಇದ್ದಾರೆ.
ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಶ್ರೀಲೀಲಾ ಪ್ರಸ್ತುತ ತೆಲುಗಿನ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ನಟನೆಯ ಸಿನಿಮಾ ಹಾಗೂ ಪ್ರದೀಪ್ ರಂಗನಾಥನ್ ನಟನೆಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ‘ಆಶಿಖಿ 3’, ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾ ಜೊತೆಗೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಒಟ್ಟಾರೆ ಶ್ರೀಲೀಲಾ ಸಖತ್ ಬ್ಯೂಸಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ