Headlines

ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?


ಸಿನಿಮಾ ರಂಗದಿಂದ ದೂರವಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

ಶ್ರೀಲೀಲಾ (Sreeleela), ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ತೆಲುಗಿನಲ್ಲಂತೂ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸಹ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಗಲೇ ಮೂರು ಸಿನಿಮಾಕ್ಕೆ ಎಸ್ ಹೇಳಿದ್ದು, ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸ್ಟಾರ್ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಯಶಸ್ವಿ ನಟಿ ಆಗಿರುವ ಶ್ರೀಲೀಲಾ, ಕೆಲ ವರ್ಷಗಳ ಹಿಂದೆ ನಟನೆಯನ್ನು ತ್ಯಜಿಸಿ, ಚಿತ್ರರಂಗದಿಂದಲೇ ದೂರಾಗುವ ನಿರ್ಧಾರ ಮಾಡಿದ್ದರಂತೆ.

ಶ್ರೀಲೀಲಾ, ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ತೆಲುಗಿನ ಖ್ಯಾತ ನಿರೂಪಕಿ ಸುಮಾ ಕನಕಲ ಅವರೊಟ್ಟಿಗೆ ತಮಾಷೆಯ ಸಂದರ್ಶನದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದೇ ಸಂದರ್ಶನದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಮತ್ತೊಬ್ಬ ನಾಯಕ ನಟಿ ರಾಶಿ ಖನ್ನಾ ಸಹ ಭಾಗಿ ಆಗಿದ್ದರು.

ಕಾರ್ಯಕ್ರಮದಲ್ಲಿ ಟ್ರೋಲ್‌ಗಳ ಬಗ್ಗೆ ನಿರೂಪಕಿ ಸುಮಾ ಕನಕಲ ಅವರು ಶ್ರೀಲೀಲಾಗೆ ಪ್ರಶ್ನೆ ಕೇಳಿದರು. ಅದಕ್ಕೆ ಶ್ರೀಲೀಲಾ, ‘”ನಾನು ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ಶುರುವಾದ ಟ್ರೋಲ್‌ಗಳ ಬಗ್ಗೆ ಬಹಳ ಭಯವಾಗುತ್ತಿತ್ತು, ಟ್ರೋಲ್‌ಗಳು ತುಂಬಾ ಕೆಟ್ಟದಾಗಿ ಅನಿಸುತ್ತಿದ್ದವು. ಈಗ ಹಾಗಿಲ್ಲ, ಟ್ರೋಲ್‌ಗಳು, ಅವರ ನಿಂದನೆ, ವ್ಯಂಗ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ನಟಿ.

ಇದನ್ನೂ ಓದಿ:ನಟಿ ರಾಶಿ ಖನ್ನಾ ಜೊತೆಗೆ ಶ್ರೀಲೀಲಾ ಸಖತ್ ಮಸ್ತಿ: ವಿಡಿಯೋ ನೋಡಿ

ಅದೇ ಸಂದರ್ಶನದಲ್ಲಿ ಮುಂದುವರಿದು ಮಾತನಾಡಿ, ‘ಇತ್ತೀಚೆಗೆ ಜನ ತುಸು ಬುದ್ಧಿವಂತರು ಸಂವೇದನಾಶೀಲರು ಆಗಿದ್ದಾರೆ. ಬಹಳ ಒರಟಾಗಿ ಕಮೆಂಟ್ ಮಾಡುವಂತೆ. ಆದರೆ ಈಗ ನೆಗೆಟಿವಿ ಇದೆಯೆಂದರೆ ತುಸು ಯೋಚಿಸುತ್ತಾರೆ, ಸರಿಯಾ? ತಪ್ಪಾ? ಅವಲೋಕಿಸುತ್ತಾರೆ’ ಎಂದು ಶ್ರೀಲೀಲಾ. ಅದೇ ಸಂದರ್ಶನದಲ್ಲಿ ಇದ್ದ ರಾಶಿ ಖನ್ನಾ, ಟ್ರೋಲ್ ಬಗ್ಗೆ ಮಾತನಾಡಿ, ‘ನನಗೆ ಟ್ರೋಲ್‌ಗಳು ಮಾನಸಿಕವಾಗಿ ಹಿಂಸೆ ನೀಡುತ್ತವೆ. ಏಕೆಂದರೆ ನಿಜ ಗೊತ್ತಿಲ್ಲದೇ ಅವರ ನಿರ್ಧಾರಗಳನ್ನು ಪ್ರಕಟಿಸುತ್ತಾರೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ನನಗೆ ಅದರ ಬಗ್ಗೆ ಬೇಸರ ಇದೆ’

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ನಟ ಧನುಷ್ ಜೊತೆಗೆ ಒಬ್ಬರು ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಹೊಸದೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ರವಿತೇಜ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೊಸ ಸಿನಿಮಾವನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *