Headlines

ಶ್ರೀಲೀಲಾ ಸಿನಿಮಾಗಳಲ್ಲಿ ತಾಯಿಯದ್ದೇ ಕಾರುಬಾರು: ನಟಿ ಹೇಳಿದ್ದೇನು?

ಶ್ರೀಲೀಲಾ ಸಿನಿಮಾಗಳಲ್ಲಿ ತಾಯಿಯದ್ದೇ ಕಾರುಬಾರು: ನಟಿ ಹೇಳಿದ್ದೇನು?


ಕನ್ನಡದ ಹುಡುಗಿ ಶ್ರೀಲೀಲಾ (Sreeleela) ಪರ ಭಾಷೆಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ನಟಿಯ ಸೌಂದರ್ಯ, ನಟನಾ ಪ್ರತಿಭೆ ಮತ್ತು ಡ್ಯಾನ್ಸ್ ತೆಲುಗು ಚಿತ್ರಂತೂ ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸಿದ್ದಾರೆ. ಇದೀಗ ಬಾಲಿವುಡ್‌ಗೆ ಸಹ ಕಾಲಿಟ್ಟಿದ್ದು ಅಲ್ಲಿಯೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದೆ. ಆದರೆ ಶ್ರೀಲೀಲಾ ಅವರ ವೃತ್ತಿಯ ಬಗ್ಗೆ ಅವರ ತಾಯಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾ ಸೆಟ್‌ಗಳಲ್ಲಿ ಮಗಳ ಬಗ್ಗೆ ಕಠಿಣ ನಿಯಮಗಳು ಹಾಕುತ್ತಾರೆ ನಿರ್ಮಾಪಕರಿಗೆ ಕಿರಿ ಕಿರಿ ತರುತ್ತಿದೆ ಎಂದು ಇತ್ತೀಚೆಗೆ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು. ಅದರ ಬಗ್ಗೆ ಶ್ರೀಲೀಲಾ ಮಾತನಾಡಿದ್ದಾರೆ.

ಶ್ರೀಲೀಲಾ ತಾಯಿ ಸ್ವರ್ಣಲತಾ ವೃತ್ತಿಯಲ್ಲಿ ವೈದ್ಯೆ. ಆದರೆ ಶ್ರೀಲೀಲಾ ಸಿನಿಮಾ ರಂಗದಲ್ಲಿ ಬ್ಯೂಸಿ ಆದ ಬಳಿಕ ಅವರ ಕೇರ್ ಟೇಕರ್ ಆಗಿ ಮಗಳ ಜೊತೆಯಲ್ಲಿಯೇ ಇರುತ್ತಾರೆ ಸ್ವರ್ಣಲತಾ. ಶ್ರೀಲೀಲಾ ಅವರ ಸಿನಿಮಾಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಸಂಭಾವನೆ ವಿಷಯವನ್ನು ತಾಯಿಯೇ ನೋಡಿಕೊಳ್ಳುತ್ತಾರೆ. ಮಗಳು ಸಿನಿಮಾ ಶೂಟಿಂಗ್ ಗೆ ಹೋದರೆ, ಖಾಸಗಿ ಕಾರ್ಯಕ್ರಮಕ್ಕೆ ಹೋದರೆ, ಸಿನಿಮಾ ಪ್ರೊಮೋಷನ್ ಎಲ್ಲಿಯೇ ಹೋದರೂ ತಾಯಿ ಸ್ವರ್ಣಲತಾ ಜೊತೆಗಿರುತ್ತಾರೆ.

ಇತ್ತೀಚೆಗೆ ಸಂದರ್ಶನದಲ್ಲಿ ಉತ್ತರ ಈ ಬಗ್ಗೆ ಶ್ರೀಲೀಲಾಗೆ ಎದುರಾಯ್ತು, ಪ್ರಶ್ನೆಗೆ ಉತ್ತರಿಸಿದ ನಟಿ ಶ್ರೀಲೀಲಾ, ‘ನನ್ನ ಜೀವನದಲ್ಲಿ ತಾಯಿಗೆ ವಿಶೇಷ ಮಹತ್ವ. ನಾನಿಂದು ಈ ಸ್ಥಾನದಲ್ಲಿ ಇರಲು ತಾಯಿಯೇ ಕಾರಣ. ನನ್ನ ಸಿನಿಮಾ ಬಗ್ಗೆ ಆಸಕ್ತಿ ವಹಿಸುತ್ತಾರೆ ತಾಯಿ. ಆದರೆ ಕತೆಯ ಆಯ್ಕೆ ಬೇರೆ ವಿಷಯಗಳಲ್ಲಿ ನನಗೂ ಆಯ್ಕೆಯ ಸ್ವಾತಂತ್ರ್ಯವಿಲ್ಲ. ಇಬ್ಬರೂ ಸೇರಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಜೊತೆಗೆ, ನನ್ನ ತಾಯಿ ನನಗೆ ಒಳ್ಳೆಯದನ್ನೇ ಬಯಸುತ್ತಾರೆ ಹೀಗಿರುವಾಗ ಅವರು ಮಾಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ನನಗೆ ಅನಿಸುತ್ತದೆ’ ನಟಿ.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಜೊತೆ ಶ್ರೀಲೀಲಾ, ಆದರೆ ಸಿನಿಮಾಕ್ಕಾಗಿ ಅಲ್ಲ

ಶ್ರೀಲೀಲಾ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಹಿಂದಿಯಲ್ಲಿ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಸಿನಿಮಾದ ಜೊತೆಗೆ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ತೆಲುಗಿನಲ್ಲಿ ರವಿತೇಜ ಜೊತೆಗೆ ‘ಮಾಸ್ ಜಾತರ’ ಸಿನಿಮಾದಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ‘ಗಬ್ಬರ್ ಸಿಂಗ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಪರಾಶಕ್ತಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಶ್ರೀಲೀಲಾ ವೈದ್ಯಕೀಯ ಕೋರ್ಸ್ ಅನ್ನು ಸಹ ಮುಗಿಸಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಎಂಬಿಬಿಎಸ್ ಸಹ ಮುಗಿಸಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಮಗಳು ವೈದ್ಯೆ ಆಗಬೇಕು ಎಂಬುದು ಅವರ ತಾಯಿ ಪುಷ್ಪಲತಾ ಅವರ ಕನಸಾಗಿತ್ತಂತೆ.

ಅಂದಹಾಗೆ ಪುಷ್ಪಲತಾ ಅವರು ಸಿಂಗಲ್ ಮದರ್. ಪತಿಯ ನೆರವು ಇಲ್ಲದೇ ಶ್ರೀಲೀಲಾ ಅವರನ್ನು ಸಾಕಿ ವೈದ್ಯೆಯನ್ನಾಗಿ ಈಗ ಭಾರತದ ಟಾಪ್ ನಟಿಯರಲ್ಲಿ ಒಬ್ಬರು ಮಾಡಿದ್ದಾರೆ. ಶ್ರೀಲೀಲಾಗೆ ಒಬ್ಬ ಸಹೋದರ ಸಹ ಇದ್ದಾನೆ. ಆತನೂ ಸಹ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *