
ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಈಗ ಅವರು ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿ. ತೆಲುಗಿನಲ್ಲಿ ಬಹಳ ಬೇಗ ಸ್ಟಾರ್ ನಟಿ ಎನಿಸಿಕೊಂಡ ಶ್ರೀಲೀಲಾ, ಇದೀಗ ಬಾಲಿವುಡ್ ಮತ್ತು ತಮಿಳು ಚಿತ್ರರಂಗಗಳಲ್ಲಿಯೂ ಮಿಂಚುತ್ತಿದ್ದಾರೆ. ಶ್ರೀಲೀಲಾ ನಟಿಸಿರುವ ಮೊದಲ ಹಿಂದಿ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಈಗ ಒಳ್ಳೆಯ ಆಫರ್ಗಳು ಬರುತ್ತಿವೆ. ಇಷ್ಟೆಲ್ಲಾ ಆದರೂ ಕನ್ನಡ ಚಿತ್ರರಂಗವನ್ನು ಶ್ರೀಲೀಲಾ ಮರೆತಿಲ್ಲ. ಇದೀಗ ಕನ್ನಡದ ಸಿನಿಮಾಗಳಿಗೆ ಸಂಬಂಧಿಸಿದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು ಶ್ರೀಲೀಲಾ, ಈ ವೇಳೆ ನಟಿ ರಮ್ಯಾ ಬಗ್ಗೆ ಹೆಮ್ಮೆಯಿಂದ.
ಚಿತ್ತಾರ ಫಿಲಂ ಅವಾರ್ಡ್ಸ್ ನಲ್ಲಿ ನಟಿ ಶ್ರೀಲೀಲಾಗೆ ಪ್ರಶಸ್ತಿ ನೀಡಲಾಯ್ತು. ಈ ಪ್ರಶಸ್ತಿಯನ್ನು ವಿತರಿಸಿದ್ದು ನಟಿ ರಮ್ಯಾ. ಈ ವೇಳೆ ಮಾತನಾಡಿದ ಶ್ರೀಲೀಲಾ, ‘ಈ ಪ್ರಶಸ್ತಿಯನ್ನು ಕ್ವೀನ್ ರಮ್ಯಾ ಅವರಿಂದ ಪಡೆದುಕೊಂಡಿರುವುದು ನಿಜಕ್ಕೂ ನನ್ನ ಪಾಲಿಗೆ ಹೆಮ್ಮೆಯ ವಿಷಯ. ನಾನು ರಮ್ಯಾ ಅವರ ಬಹಳ ದೊಡ್ಡ ಅಭಿಮಾನಿ’ ಎಂದರು. ಇದಕ್ಕೆ ರಮ್ಯಾ ಸಹ ಶ್ರೀಲೀಲಾಗೆ ಧನ್ಯವಾದ ಹೇಳಿದರು.
ಇದನ್ನೂ ಓದಿ:ಸಿನಿಮಾ ರಂಗದಿಂದ ದೂರವಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?
‘ಎಲ್ಲರಿಗೂ ನಮಸ್ಕಾರ, ಬಹಳ ಅವಧಿಯ ಬಳಿಕ ಚಿತ್ರರಂಗದ ಎಲ್ಲರೂ ಒಟ್ಟಾಗಿ ಸೇರಿದ್ದೀವಿ ಅನಿಸುತ್ತಿದೆ. ನಾನು ತುಂಬಾ ಇಷ್ಟಪಡುವ ರಮ್ಯಾ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ನನಗೆ ಪ್ರೀತಿ ಕೊಟ್ಟಿರುವ ಮತ್ತು ಪ್ರೀತಿ ಕೊಡುತ್ತಿರುವ ಎಲ್ಲರಿಗೂ ಈ ಪ್ರಶಸ್ತಿಯನ್ನು ಡೆಡಿಕೇಟ್ ಮಾಡುತ್ತೀನಿ. ಹೀಗೆ ನನ್ನ ಮೇಲೆ ಹಾಗೂ ನಾನು ಮಾಡುವ ಸಿನಿಮಾ ಮೇಲೆ ನಿಮ್ಮ ಪ್ರೀತಿ ಹೀಗೆಯೇ ಇರಲಿ’ ನಟಿ ಶ್ರೀಲೀಲಾ. ಶ್ರೀಲೀಲಾ ಮಾತ್ರವೇ ಅಲ್ಲದೆ ಹಲವಾರು ಮಂದಿಗೆ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಟಿ ರಮ್ಯಾ ಅವರಿಗೆ ಪ್ರಶಸ್ತಿ ದೊರೆತಿದ್ದು ಆ ಪ್ರಶಸ್ತಿಯನ್ನು ಅವರು ಡಾ ರಾಜ್ ಕುಮಾರ್ ಕುಟುಂಬ ಸೇರಿದಂತೆ, ತಮ್ಮ ಸಿನಿಮಾ ವೃತ್ತಿ ಜೀವನಕ್ಕೆ ಸಹಾಯ ಮಾಡಿದ ಅನೇಕರಿಗೆ ಡೆಡಿಕೇಟ್ ಮಾಡಿದರು.
ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಹಿಂದಿಯಲ್ಲಿ ಮೂರು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಒಂದು ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಸಾಯಿ ಪಲ್ಲವಿ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ಶ್ರೀಲೀಲಾ ಸಹ ನಾಯಕಿ. ತೆಲುಗಿನಲ್ಲಿ ಪ್ರಸ್ತುತ ಎರಡು ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ