ಶಿರಸಿ, (ಜನವರಿ 11): ವರದಾ-ಬೇಡ್ತಿ ನದಿ ಜೋಡಣೆ ವಿವಾದ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವ್ಯಾಪಕ ವಿರೋಧದ ನಡುವೆಯೂ ಬೇಡ್ತಿ ಹಾಗೂ ವರದಾ ನದಿಗಳ ಜೋಡಣೆಗೆ ವಿಸ್ತೃತ ಯೋಜನೆ ವರದಿ (ಡಿಪಿಆರ್) ಪ್ರಸ್ತುತ ರಾಜ್ಯ ಸರ್ಕಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದರಲ್ಲೇ ಉತ್ತರ ಕನ್ನಡದ ಜನರ, ಮುಖ್ಯವಾಗಿ ಯಲ್ಲಾಪುರ- ಭಾಗದ ಜನರ ತೀವ್ರ ವಿರೋಧವಾಗಿದೆ. ಯೋಜನೆ ವಿರೋಧಿಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಇಂದು (ಜನವರಿ 11) ಜನಜಾಗೃತಿ ಸಮಾವೇಶ ನಡೆದಿದ್ದು, ಹೋರಾಟ ತೀವ್ರಗತಿಯಲ್ಲಿದೆ. ಈ ಯೋಜನೆ ಜಿಲ್ಲೆಗೆ ಮಾರಕ ಎಂದು ಒಕ್ಕೊರಲಿನಿಂದ ಖಂಡಿಸಿ, ಕೈ ಬಿಡುವಂತೆ ಒತ್ತಾಯಿಸಲಾಗಿದೆ.
ಇನ್ನು ಇಂದು ಸಮಾವೇಶದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸ್ವಾಮೀಜಿ ಈ ಯೋಜನೆ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.