Headlines

ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?

ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?


ವಿದೇಶಿ ಮಹಿಳೆ (ವಿದೇಶಿ ಮಹಿಳೆ) ಮುಂದೆ ಒಬ್ಬ ವ್ಯಕ್ತಿ ವಿಕೃತ ವರ್ತನೆ ತೋರಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದೇಶದಿಂದ ಬರುವ ಮಹಿಳೆಯರು ಒಂದು ದೇಶದ ಆಚರಣೆ, ಸಂಸ್ಕೃತಿ, ಇದರೊಂದಿಗೆ ಅಲ್ಲಿನ ಜನರ ನಡವಳಿಕೆಗಳನ್ನು ನೋಡುತ್ತಾರೆ. ಆದರೆ ಇಂಥಹ ವ್ಯಕ್ತಿಗಳಿಂದ ದೇಶದ ಸಂಸ್ಕೃತಿಗೆ ಅವಮಾನ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆಟೋದಲ್ಲಿದ್ದ ಒಂಟಿ ವಿದೇಶಿ ಮಹಿಳೆಯ ಮುಂದೆ ಪ್ಯಾಂಟ್ ಜಾರಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ನಡೆದಿರುವುದು ಶ್ರೀಲಂಕಾದಲ್ಲಿ. ಇದೀಗ ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ಶ್ರೀಲಂಕಾಕ್ಕೆ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಮೋಲ್ಸ್ ಎಂಬ ನ್ಯೂಜಿಲೆಂಡ್ ಮಹಿಳೆ, ಆಟೋ ರಿಕ್ಷಾದಲ್ಲಿ ಶ್ರೀಲಂಕಾದ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರುಗಂ ಕೊಳ್ಳಿ ಮತ್ತು ಪಾಸಿಕುಡ ಕರಾವಳಿ ರಸ್ತೆಯಲ್ಲಿ ಸ್ವಲ್ಪ ಹೊತ್ತು ನಿಂತಿದ್ದರು. ಇದನ್ನು ನೋಡಿ ಒಬ್ಬ ವ್ಯಕ್ತಿ ಸೂಟ್ಕರ್ ನಲ್ಲಿ ಬಂದು, ಮಹಿಳೆಯ ಬಳಿ ಮಾತನಾಡಿದ್ದಾನೆ. ಮೋಲ್ಸ್ ಕೂಡ ಆ ವ್ಯಕ್ತಿಯ ಜೊತೆಗೆ ಮಾತನಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದಾನೆ. “ನೀನು ಎಲ್ಲಿಗೆ ಹೋಗುತ್ತೀಯಾ, ಸೆಕ್ಸ್ ಮಾಡುವ ಬರ್ತೀಯಾ” ಎಂದೆಲ್ಲ ಕೇಳಿದ್ದಾನೆ. ನಂತರ ಪ್ಯಾಂಟ್ ಜಾರಿಸಿ, ತನ್ನ ಗುಪ್ತಾಂಗವನ್ನು ಮೋಲ್ಸ್‌ಗೆ ತೋರಿಸಿದ್ದಾನೆ.

ಇದನ್ನೂ ಓದಿ: ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಇದರಿಂದ ಭಯಗೊಂಡ ಮೋಲ್ಸ್, ಆಟೋ ಡ್ರೈವರ್‌ಗೆ ತಕ್ಷಣ ಇಲ್ಲಿಂದ ಹೋಗುವಂತೆ ಹೇಳಿದ್ದಾರೆ. ಈ ಇಡೀ ಘಟನೆ ಚಾಲಕನ ಸೀಟಿನಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.ಮೋಲ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಈ ರೀತಿ ಬರೆದಿದ್ದಾರೆ. ”ಇಂಥಹ ಕೆಟ್ಟ ಅನುಭವ ನನಗೆ ಆಗಿಲ್ಲ. ಈ ದೃಶ್ಯವನ್ನು ನೋಡಿದ್ರೆ ನಿಮಗೂ ಭಯವಾಗುತ್ತದೆ. ಆದರೆ ಒಂಟಿಯಾಗಿ ಪ್ರಯಾಣಿಸುವುದು ರೋಮಾಂಚನಕಾರಿ ವಿಚಾರ, ಅದು ಎಲ್ಲ ಸಮಯದಲ್ಲೂ ಒಳ್ಳೆಯದಲ್ಲ ಎಂಬುದು ನನಗೆ ಅರ್ಥವಾಗಿದೆ. ಈ ಬಾರಿ ಇಂತಹ ಅನುಭವಗಳು ಆಗಬಹುದು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:01 pm, ಬುಧವಾರ, 19 ನವೆಂಬರ್ 25





Source link

Leave a Reply

Your email address will not be published. Required fields are marked *