
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ‘ಶ್ರೀ ರಾಘವೇಂದ್ರ ಮಹಾತ್ಮೆ’ ಸೀರಿಯಲ್ನಲ್ಲಿ, ರಾಯ ಅಮ್ಮ ಗೋಪಿಕಾಂಬ ಪಾತ್ರವನ್ನು ನೋಡಿದರೆ, ಎಂಥವರಿಗೂ ಒಂದು ಕ್ಷಣ, ಕೈ ಎತ್ತಿ ನಮಸ್ಕಾರ ಮಾಡುವ ಹಂಬಲವಾಗುತ್ತದೆ. ಅದೆಂಥ ತೇಜಸ್ಸು, ಅದೆಂಥ ವರ್ಚಸ್ಸು, ಬಹುಶಃ ರಾಯರ ಅಮ್ಮನೂ ಇದೇ ತೇಜಸ್ಸು ಹೊಂದಿರಬಹುದು ಎನ್ನುವ ಭಾವನೆ ಮೂಡುವುದು ಸಹಜ.