ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು

ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು


ನವದೆಹಲಿ, ಫೆಬ್ರುವರಿ 15: ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು (ಶ್ರೀಧರ್ ವೆಂಬು) ಅವರು ಜಾಗತಿಕ ಟೆಕ್ ದೈತ್ಯ ಕಂಪನಿಗಳನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ. ಗೂಗಲ್ ಸಂಸ್ಥೆ ಒಂದೇ ದಿನದಲ್ಲಿ 32 ಬಿಲಿಯನ್ ಡಾಲರ್‌ನಷ್ಟು (3 ಲಕ್ಷ ಕೋಟಿ ರೂ) ಫಂಡ್ ಸೃಷ್ಟಿಸಿಕೊಂಡಿರುವುದನ್ನು ಉಲ್ಲೇಖಿಸುತ್ತಾ, ವೆಂಬು ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 17ನೇ ಶತಮಾನದಲ್ಲಿ ಆರಂಭವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 19ನೇ ಶತಮಾನದ ಮಧ್ಯ ಭಾಗದವರೆಗೂ ಅಸ್ತಿತ್ವದಲ್ಲಿದೆ. 200ಕ್ಕೂ ಹೆಚ್ಚು ವರ್ಷ ಕಾಲ ಜಗತ್ತಿನ ಹಲವು ಭಾಗಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿತ್ತು. ಈಗಿನ ಟೆಕ್ ಕಂಪನಿಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿರುವುದು ಕುತೂಹಲದ ಸಂಗತಿ.

ಗೂಗಲ್ ಕಂಪನಿಯ ಅಗಾಧ ಫಂಡ್ ಎತ್ತುವಳಿ ಸಾಮರ್ಥ್ಯದ ಬಗ್ಗೆ ಅವಿರಳ್ ಭಟ್ನಾಗರ್ ಅವರು ಹಾಕಿದ ಎಕ್ಸ್ ಪೋಸ್ಟ್‌ಗೆ ಶ್ರೀಧರ್ ವೆಂಬು ಪ್ರತಿಕ್ರಿಯೆಯಾಗಿ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

‘ಗೂಗಲ್ 1 ದಿನದಲ್ಲಿ 32 ಬಿಲಿಯನ್ ಸಾಲ ಪಡೆದಿದೆ. ಭಾರತದಂತಹ ಸಾರ್ವಭೌಮ ಸರ್ಕಾರಕ್ಕೆ ಇಷ್ಟು ಸಾಲ 100 ದಿನ. ಗೂಗಲ್ 1 ಬಿಲಿಯನ್ ಡಾಲರ್ ಮೌಲ್ಯದ 100 ವರ್ಷದ ಬಾಂಡ್ ಅನ್ನು ವಿತರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಭಾರತದ ಅತ್ಯಂತ ಸುದೀರ್ಘ ಬಾಂಡ್ 40 ವರ್ಷದ್ದು. ದೊಡ್ಡ ಟೆಕ್ ಕಂಪನಿಗಳು ಈಗ ಫಂಡ್ ರೈಸಿಂಗ್ ಅಗಾಧತೆಯಲ್ಲಿ ಮತ್ತು ಅವಧಿಯಲ್ಲಿ ಸಾರ್ವಭೌಮ ರಾಷ್ಟ್ರಗಳಂತೆ ಕಾರ್ಯನಿರ್ವಹಿಸುತ್ತಿವೆ’ ಎಂದು ಹೂಡಿಕೆದಾರರೂ ಆಗಿರುವ ಅವಿರಾಳ್ ಭಟ್ನಾಗರ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜೋಹೋ ಕಾರ್ಪೊರೇಶನ್‌ನ ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು ಈಗಿನ ಟೆಕ್ ಕಂಪನಿಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರೆ 13 ಎಐ ಕಂಪನಿಗಳೊಂದಿಗೆ ಮುಖೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಗೂಗಲ್, ಮೈಕ್ರೋಸಾಫ್ಟ್, ಆಯಪಲ್, ಮೆಟಾ, ಎನ್ ವಿಡಿಯಾ, ಅಮೇಜಾನ್ ಮತ್ತು ಟೆಸ್ಲಾ ಕಂಪನಿಗಳಿಗೆ ಬಿಗ್ ಟೆಕ್ ಅಥವಾ ಮ್ಯಾಗ್ನಿಫಿಕೆಂಟ್ ಸೆವೆನ್ ಕಂಪನಿಗಳು ಬರುತ್ತವೆ. ಈ ಒಂದೊಂದು ಕಂಪನಿಯ ಮಾರುಕಟ್ಟೆ ಮೌಲ್ಯವು ದೊಡ್ಡ ದೇಶದ ಜಿಡಿಪಿಗೆ ಸಮವಾಗಿದೆ. ಆಯಪಲ್ಗಿಂತ ಕಂಪನಿಯ ಮೌಲ್ಯವು ಇಟಲಿ ಹೆಚ್ಚಿನದ್ದಾಗಿದೆ. ಇವುಗಳ ಏಕಸ್ವಾಮ್ಯ ಎದ್ದು ಕಾಣುವಂತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:19 pm, ಭಾನುವಾರ, 15 ಫೆಬ್ರವರಿ 26





Source link

Leave a Reply

Your email address will not be published. Required fields are marked *