ನಟ ಶ್ರೀರಾಮ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆದರು. ಈಗ ಅವರು ಹಿರಿತೆರೆಯಲ್ಲಿ ಬ್ಯೂಸಿ ಆಗಿದ್ದಾರೆ. ‘ಪ್ರೇಮದಲಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟೀಸರ್ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆಯುತ್ತಿದೆ. ಒಂದು ಸುಂದರ ಪ್ರೇಮಕಥೆ ಜೊತೆಗೆ ಹಳ್ಳಿ ಜೀವನವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ.
ಈ ಮೊದಲು ‘ಅಕ್ಷಿ’ ಹೆಸರನ್ನು ಮಾಡಿ ಅವಾರ್ಡ್ ಗೆದ್ದ ಮನೋಜ್ ಕುಮಾರ್ ಅವರು, ‘ಪ್ರೇಮದಲಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀರಾಮ್ ಹೀರೋ ಆದರೆ, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಸಿನಿಮಾದ ಟೀಸರ್ ಅಲ್ಲಿ ಹಳ್ಳಿ ಜೀವನ, ಹಳ್ಳಿಯಲ್ಲಿ ಸಂಬಂಧಗಳಿಗೆ ಕೊಡೋ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಒಂದು ಸೊಗಸಾದ ಪ್ರೇಮ ಕಥೆಯನ್ನು ಕೂಡ ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಈ ಚಿತ್ರದ ಚಿತ್ರೀಕರಣ ನಡೆದಿದ್ದು ಹಾಸನದ ಭಾಗದಂತೆ. ಅಲ್ಲಿನ ಮಳೆಗಾಲದ ಸುಂದರ ಪರಿಸವರನ್ನು ಸೆರೆಹಿಡಿಯಲಾಗಿದೆ. ರಂಗಾಯಣ ರಘು ಅವರಿಗೆ ಹಳ್ಳಿ ಜೀವನ ಎಂದರೆ ಸಖತ್ ಇಷ್ಟ. ಈ ಸಿನಿಮಾ ಸಿಕ್ಕಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇನ್ನು, ಶ್ರೀರಾಮ್ ಅವರು, ಈ ಚಿತ್ರಕ್ಕಾಗಿ ಒಂದು ತಿಂಗಳು ಆಳಾಗಿ ಕೆಲಸ ಮಾಡಿದರು. ಹೀಗೆ ಕೆಲಸ ಕಲಿತರು.
‘ಪ್ರೇಮದಲಿ’ ಚಿತ್ರವನ್ನು ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ನಿರ್ಮಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ರಿಲೀಸ್ ಗಾಗಿ ಪ್ಲ್ಯಾನಿಂಗ್ ನಡೆಯುತ್ತಿದೆ. ಒಳ್ಳೆಯ ಸಂದರ್ಭವನ್ನು ನೋಡಿ ಚಿತ್ರ ತೆರೆಗೆ ತರುವ ಆಲೋಚನೆ ನಿರ್ಮಾಪಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 1:04 pm, ಮಂಗಳವಾರ, 3 ಮಾರ್ಚ್ 26