Headlines

ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು

ನನ್ನ ಸಿನಿಮಾ ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ: ಸೃಜನ್ ಲೋಕೇಶ್ ಪ್ರಾಮಾಣಿಕ ಮಾತು


ನಟ, ನಿರೂಪಕ ಸೃಜನ್ ಲೋಕೇಶ್ ಅವರು ‘ಜಿಎಸ್ಟಿ’ (GST) ಸಿನಿಮಾಗೆ ನಿರ್ದೇಶನ ಮಾಡಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಮಾಣಿಕವಾಗಿ ತಿಳಿಸಿದ್ದಾರೆ. ‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಇದು ನನ್ನ ಕನಸಿನಲ್ಲಿ ಬಂದ ಕಥೆ. ನನ್ನ ಸಿನಿಮಾ ಬಗ್ಗೆ ನಾನು ಮಾತನಾಡುವುದು ತಪ್ಪುತ್ತದೆ. ಜನರು ನೋಡಿ ಅಭಿಪ್ರಾಯ ತಿಳಿಸಬೇಕು. ಅತಿ ಆತ್ಮವಿಶ್ವಾಸದಿಂದ ಎಲ್ಲರೂ ಹೇಳಿಕೊಳ್ಳುತ್ತಾರೆ. 650ಕ್ಕೂ ಹೆಚ್ಚು ಸಿನಿಮಾ ನಾನು ಪ್ರಚಾರ ಮಾಡಿದ್ದೇನೆ. ಯಾರಿಗೂ ಗೊತ್ತಿಲ್ಲದೇ ಇರುವ ಸಿನಿಮಾ ಲ್ಯಾಂಡ್ ಮಾರ್ಕ್ ಆಗಿದೆ. ಭಾರಿ ನಿರೀಕ್ಷೆ ಇದ್ದ ಸಿನಿಮಾಗಳು ಸಾಧಾರಣ ಆಗಿರುವುದನ್ನು ನೋಡಿದ್ದೇನೆ. ನನ್ನ ಸಿನಿಮಾ ಅತ್ಯುತ್ತಮ, ಗ್ರೇಟ್ ಅಂತ ನಾನು ದೇವರಾಣೆಗೂ ಹೇಳಲ್ಲ. ಪ್ರಮಾಣಿಕವಾಗಿ, ನಿಷ್ಠೆಯಿಂದ ಒಂದು ಸಿನಿಮಾ ಮಾಡಿದ್ದೇನೆ. ಜನರು ನೋಡಿ ನಗಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದ್ದೇನೆ’ ಎಂದ ಸೃಜನ್ ಲೋಕೇಶ್ (ಸೃಜನ್ ಲೋಕೇಶ್) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *