Headlines

ಜನರನ್ನು ನಗಿಸುವುದೇ ‘ಜಿಎಸ್​ಟಿ’ ಉದ್ದೇಶ: ಸೃಜನ್ ಲೋಕೇಶ್

ಜನರನ್ನು ನಗಿಸುವುದೇ ‘ಜಿಎಸ್​ಟಿ’ ಉದ್ದೇಶ: ಸೃಜನ್ ಲೋಕೇಶ್


‘ಮಜಾ ಟಾಕೀಸ್’ ಚಿತ್ರದ ಮೂಲಕ ನಕ್ಕು ನಗಿಸಿದೆ ಸೃಜನ್ ಲೋಕೇಶ್ (ಸೃಜನ್ ಲೋಕೇಶ್) ಅವರು ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ನಿರ್ದೇಶನದಲ್ಲಿ ‘ಜಿಎಸ್ಟಿ’ ಸಿನಿಮಾ (GST ಚಲನಚಿತ್ರ) ಮೂಡಿಬಂದಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನೇ ಬರೆದ ಕಥೆ. ನಿರ್ದೇಶನ ಮಾಡುವುದು ಚಾಲೆಂಜಿಂಗ್ ಆಗಿದೆ. ಸಿನಿಮಾ ನೋಡಿದಾಗ ಸಮಾಧಾನವಾಗುತ್ತದೆ. ಜನರನ್ನು ನಗಿಸಬೇಕು ಎಂಬುದು ನನ್ನ ಉದ್ದೇಶ. ಜನರು ನಗದೇ ಇದ್ದರೆ ನಾನು ನನ್ನ ಕೆಲಸಕ್ಕೆ ಸರಿಯಾಗಿ ನ್ಯಾಯ ಕೊಟ್ಟಿಲ್ಲ ಎಂದಾಗುತ್ತದೆ. ಜನರು ಖಂಡಿತಾ ನನ್ನ ಸಿನಿಮಾ ನೋಡಿ ಖುಷಿಪಡುತ್ತಾರೆ ಎಂಬ ನಿರೀಕ್ಷೆ ನನಗೆ ಇದೆ. 2 ಗಂಟೆ 10 ನಿಮಿಷ ಇದೆ. ನಮ್ಮ ಸಿನಿಮಾವನ್ನು ನಾವೇ ಅದ್ಭುತವಾಗಿದೆ ಅಂತ ಹೇಳುವುದು ಸರಿಯಲ್ಲ. ಜನರು ಸಿನಿಮಾ ನೋಡಲಿ. ಚೆನ್ನಾಗಿದ್ದರೆ ಹೊಗಳಲಿ. ಚೆನ್ನಾಗಿಲ್ಲ ಎಂದರೆ ತಿದ್ದಿಕೊಳ್ಳುತ್ತೇವೆ’ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *