Headlines

ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ: ಎಷ್ಟು ವರ್ಷ ಕಾಯಬೇಕು?

ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ: ಎಷ್ಟು ವರ್ಷ ಕಾಯಬೇಕು?


ರಾಜಮೌಳಿ (ರಾಜಮೌಳಿ) ನಿರ್ದೇಶಿಸುತ್ತಿರುವ ಹೊಸ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಗ್ಲೋಬ್ ಟ್ರೋಟರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಹೆಸರು ಇಂದು (ನವೆಂಬರ್ 15) ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹಿರಂಗಗೊಳ್ಳಲಿದೆ. ಇದೆ, ಸಿನಿಮಾದ ಮೊದಲ ಟೀಸರ್ ಸಹ ಇಂದು ಬಿಡುಗಡೆ ಆಗಲಿದೆ. ಇವುಗಳ ಜೊತೆಗೆ ಸಿನಿಮಾ ಬಿಡುಗಡೆ ದಿನಾಂಕವನ್ನೂ ಸಹ ರಾಜಮೌಳಿ ಘೋಷಿಸಲಿದ್ದಾರೆ. ಆದರೆ ಅವರು ಘೋಷಣೆ ಮಾಡುವ ಮುನ್ನವೇ ಕೆಲ ಮೂಲಗಳಿಂದ ಸಿನಿಮಾದ ಬಿಡುಗಡೆ ದಿನಾಂಕ ಲೀಕ್ ಆಗಿದೆ.

ಸಿನಿಮಾ ಪ್ರೇಮಿಗಳಿಗೆ ತಿಳಿದಿರುವಂತೆ ರಾಜಮೌಳಿ ಸಿನಿಮಾ ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಬಿಡುಗಡೆಗೂ ಸಹ. ‘ಆರ್ ಆರ್ ಆರ್’ ಸಿನಿಮಾವನ್ನು 2017 ರಲ್ಲಿ ಘೋಷಿಸಲಾಯಿತು. ಆದರೆ ಆ ಸಿನಿಮಾ ಬಿಡುಗಡೆ ಆಗಿದ್ದು 2022 ರಲ್ಲಿ. ‘ಬಾಹುಬಲಿ’ ಸಿನಿಮಾಗಳಿಗೂ ಸಹ ಪ್ರತಿ ಸಿನಿಮಾಕ್ಕೂ ಎರಡು ವರ್ಷ ಹೆಚ್ಚು ಸಮಯ ತೆಗೆದುಕೊಂಡರು. ಈಗ ‘ಗ್ಲೋಬ್ ಟ್ರೋಟರ್’ ಸಿನಿಮಾವನ್ನು ತಮ್ಮ ಈ ಹಿಂದಿನ ಸಿನಿಮಾಗಳಿಂತಲೂ ಹೆಚ್ಚು ಅದ್ಧೂರಿಯಾಗಿಯೂ, ಹೆಚ್ಚು ಜತನದಿಂದ ಕಟ್ಟುತ್ತಿದ್ದಾರೆ. ಇಲ್ಲ ತಮ್ಮ ಈ ಹಿಂದಿನ ಸಿನಿಮಾಗಳಿಗೂ ಹೆಚ್ಚಿನ ಸಮಯ ಈ ಸಿನಿಮಾ ತೆಗೆದುಕೊಳ್ಳಲಿದೆ.

ಇದನ್ನೂ ಓದಿ:ರಾಜಮೌಳಿಗೆ ಕಾಡುತ್ತಿದೆ ಆ ಭಯ, ಅಭಿಮಾನಿಗಳು ಮನವಿ ಮಾಡಿದ್ದಾರೆ

‘ಗ್ಲೋಬ್ ಟ್ರೋಟರ್’ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿ ಒಂದು ವರ್ಷ ಆಗುತ್ತಾ ಬಂದಿದೆ. ಇದೇ ವರ್ಷದ ಜನವರಿ ತಿಂಗಳಲ್ಲಿ ಸಿನಿಮಾದ ಮುಹೂರ್ತ ನಡೆದಿತ್ತು. ಮುಹೂರ್ತಕ್ಕೆ ಮುಂಚೆಯೇ ಹಲವಾರು ತಿಂಗಳುಗಳ ಕಾಲ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆದಿತ್ತು. ಇಂದು ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಲಿದೆ. ಅಂದಹಾಗೆ ಈ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿಯಲಿದೆ. 2027ರ ಮಾರ್ಚ್ 25ರಂದು ‘ಗ್ಲೋಬ್ ಟ್ರೋಟರ್’ ಸಿನಿಮಾ ತೆರೆಗೆ ಬರಲಿದೆ.

ಸಿನಿಮಾದ ಅರ್ಧಕ್ಕೂ ಹೆಚ್ಚು ಭಾಗಗಳ ಚಿತ್ರೀಕರಣ ಪೂರ್ಣವಾಗಿದೆ. ಹೈದರಾಬಾದ್, ರಾಜಸ್ಥಾನ, ಕೀನ್ಯಾ, ನೈರೋಬಿ ಇನ್ನೂ ಕೆಲವೆಡೆ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಆದರೆ ಇನ್ನೂ ಸಾಕಷ್ಟು ಚಿತ್ರ ಬಾಕಿ ಇದೆಯಂತೆ. ಅಮೆಜಾನ್ ಕಾಡುಗಳಲ್ಲಿ ಕೆಲ ಆಕ್ಷನ್ ದೃಶ್ಯಗಳ ಚಿತ್ರಗಳನ್ನು ಚಿತ್ರತಂಡ ಮಾಡಲಿದೆ. ಇದರ ಜೊತೆಗೆ ಇಸ್ತಾಂಬುಲ್, ಪ್ಯಾರಿಸ್ ಅಂಥಾ ದೊಡ್ಡ ನಗರಗಳಲ್ಲಿಯೂ ಚಿತ್ರೀಕರಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *