ರಾಜಮೌಳಿ (ರಾಜಮೌಳಿ) ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ಅವರ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಾಗಲೂ ನಟಿಸಲು ದೊಡ್ಡ ದೊಡ್ಡ ನಟರೇ ಸಾಲುಗಟ್ಟಿ ನಿಂತಿದ್ದಾರೆ. ರಾಜಮೌಳಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಸಹ ದೊಡ್ಡ ಸಿನಿಮಾಗಳನ್ನೇ ಕೈಬಿಡಲು ರೆಡಿ ಇದ್ದಾರೆ. ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದೇ ಅದೃಷ್ಟವೆಂದು ಭಾವಿಸಲಾಗುತ್ತಿದೆ. ಹೀಗಿರುವಾಗ ಹಿಂದಿಯ ಜನಪ್ರಿಯ ಹಿರಿಯ ನಟರೊಬ್ಬರಿಗೆ ರಾಜಮೌಳಿ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ಆದರೆ ಈಗ ಸಿನಿಮಾದಿಂದ ತೆಗೆದು ಹಾಕಿದ್ದಾರೆ.
ಹಿಂದಿ ಸಿನಿಮಾ ಮತ್ತು ಟಿವಿ ಎರಡೂ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ರಜತ್ ಕಪೂರ್ ಅವರು ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ರಜತ್ ಕಪೂರ್ ನಟಿಸಲಿದ್ದಾರೆ. ಆದರೆ ಇದೀಗ ರಾಜಮೌಳಿ ಅವರು ರಜತ್ ಕಪೂರ್ ಅವರ ಸಿನಿಮಾದಿಂದ ಕೈಬಿಟ್ಟಿದ್ದಾರಂತೆ. ಇದಕ್ಕೆ ಇಬ್ಬರ ನಡುವೆ ಮೂಡಿರುವ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ:’ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಾಯಕನಿಗೆ ಅವಕಾಶ ಕೊಟ್ಟ ರಾಜಮೌಳಿ
ರಜತ್ ಕಪೂರ್ ನಟರ ಜೊತೆಗೆ ಬಾಲಿವುಡ್ ಜನಪ್ರಿಯ ನಿರ್ದೇಶಕ ಸಹ. ಅವರ ಮೂರು ಸಿನಿಮಾಗಳು ರಾಷ್ಟ್ರಪ್ರಶಸ್ತಿಯನ್ನು ಸಹ ಹೊಂದಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರೂ ಆಗಿರುವ ರಜತ್ ಕಪೂರ್ ಅವರು, ರಾಜಮೌಳಿ ಅವರು ತಮ್ಮ ಪಾತ್ರವನ್ನು ಪ್ರಸ್ತುತಪಡಿಸುತ್ತಿರುವ ರೀತಿಯ ಬಗ್ಗೆ ತಕರಾರು ತೆಗೆದಿದ್ದರಂತೆ. ರಾಜಮೌಳಿ ಹಾಗೂ ರಜತ್ ಕಪೂರ್ ಅವರ ನಡುವೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ಸೆಟ್‌ನಲ್ಲಿ ನಡೆದಿವೆ. ಆದರೆ ಅಂತಿಮವಾಗಿ ರಾಜಮೌಳಿ ಅವರ ಕಠಿಣ ನಿರ್ಧಾರ ತಳೆದಿದ್ದು ರಜತ್ ಕಪೂರ್ ಅವರನ್ನು ಸಿನಿಮಾದಿಂದ ಹೊರಗಿಟ್ಟಿದ್ದಾರೆ.
ತಾವು ಅಂದುಕೊಂಡಂತೆ ಸಿನಿಮಾ ಮೂಡಿಬರಲು ಏನು ಬೇಕಾದರೂ ಮಾಡುವ ರಾಜಮೌಳಿ, ಇದೀಗ ತಾವಂದುಕೊಂಡಂತೆ ಪಾತ್ರ ಮೂಡಿಬರುತ್ತಿಲ್ಲ, ನಟರಿಂದ ನಟನೆ ಹೊಮ್ಮುತ್ತಿಲ್ಲ ಎಂದಾಗ ಖಂಡಿತವಾಗಿಯೂ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಸಹ ಕೆಲವು ಬಾರಿ ಹೀಗೆ ಮಾಡಿದೆ. ‘ಆರ್ ಆರ್ ಆರ್’ ಸಿನಿಮಾದಲ್ಲಿ ಆಲಿಯಾ ಅವರ ನಟನೆಯ ಹಲವು ದೃಶ್ಯಗಳನ್ನು ರಾಜಮೌಳಿ ಚಿತ್ರೀಕರಿಸಿದ್ದಾರೆ, ಆದರೆ ಸಿನಿಮಾದ ವೇಗಕ್ಕೆ ತೊಡಕಾಗುತ್ತಿದ್ದಾರೆ ಎಂದು ಡಿಲೀಟ್ ಮಾಡಿದ್ದಾರೆ. ಅದೇ ಸಿನಿಮಾದಲ್ಲಿ ಮಕರಂದ್ ದೇಶಪಾಂಡೆ ಅವರ ಸಾಕಷ್ಟು ದೃಶ್ಯಗಳನ್ನು ಸಹ ಶೂಟ್ ಮಾಡಲಾಗಿದೆ, ಆದರೆ ಅವನ್ನೂ ಸಹ ಡಿಲೀಟ್ ಮಾಡಿದ್ದರು ರಾಜಮೌಳಿ.
‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕರಾಗಿದ್ದರೆ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಆರ್ ಮಾಧವನ್ ಸಹ ನಟಿಸುತ್ತಿದ್ದಾರೆ. ಇದೇ ಹಾಲಿವುಡ್ನ ಸ್ಟಾರ್ ನಟರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ