ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು

ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು


ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ ಎಸ್.ಎಸ್.ಎಲ್.ಸಿ

ಕೊಡಗು, ಮಾರ್ಚ್ 18: ಇಬ್ಬರು ಬಾಲಕರು ಒಂದು ವರ್ಷ ಕಷ್ಟಪಟ್ಟು ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ (SSLC ಪರೀಕ್ಷೆ) ತಯಾರಿ. ಇನ್ನೇನು ಇಂದು ಬೆಳಗ್ಗೆ ನಾವು ಪರೀಕ್ಷೆ ಬರೆಯುತ್ತೇವೆ ಅಂತ ಖುಷಿಯಾಗಿದ್ದರು. ಆದರೆ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಬಂದ ಸುದ್ದಿ ಅವರಿಬ್ಬರನ್ನ ಪರೀಕ್ಷೆಗೆ ಕೂರದೇ ಇರುವ ಹಾಗೆ ಮಾಡಿದೆ. ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರು ಮತ್ತು ಪೋಷಕರ ಕಣ್ಣೀರಿಟ್ಟ ಘಟನೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಶಾಲಾ ಕಾರ್ಯಕ್ರಮ ನಡೆಯಿತು.

ಹಾಲ್ ಟಿಕೆಟ್ ಇಲ್ಲದೆ ವಿದ್ಯಾರ್ಥಿಗಳು ಪರದಾಟ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪಬ್ಲಿಕ್ ಶಾಲೆಯಲ್ಲಿ 17 ಮಕ್ಕಳು ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ನಿನ್ನೆ ಸಂಜೆ ಎಲ್ಲರಿಗೂ ಹಾಲ್ ಟಿಕೆಟ್ ಬಂದಿದ್ದು, ಇಬ್ಬರು ಬಾಲಕರಿಗೆ ಮಾತ್ರ ಬಂದಿಲ್ಲ. ತಮೀಮ್ ಮತ್ತು ಪ್ರಥಮ್ ಪೋಷಕರಿಗೆ ಸಂಜೆ ಕರೆಮಾಡಿದ ಶಾಲಾ ಪ್ರಾಂಶುಲಾರು, ಏನೋ ತಾಂತ್ರಿಕ ಸಮಸ್ಯೆಯಿಂದ ಇಬ್ಬರಿಗೆ ಹಾಲ್ ಟಿಕೆಟ್ ಬಂದಿಲ್ಲ ಅಂತ ಹೇಳಿದ್ದಾರೆ. ಈ ಸುದ್ದಿ ಕೇಳಿ ಮತ್ತು ಮಕ್ಕಳಿ ಶಾಕ್ ಆಗಿದೆ. ಆದರೂ ಇಂದು ಬೆಳಗ್ಗೆ ಶಾಲೆಯ ಬಳಿ ಬಂದು ಹಾಲ್ ಟಿಕೆಟ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ: ಆಂಬ್ಯುಲೆನ್ಸ್ ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ

ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಮತ್ತು ಗ್ರಾಮಸ್ಥರು ಶಾಲೆಯ ಬಳಿ ಪ್ರತಿಭಟನೆ ನಡೆಸಿದರು. ಶಾಲೆಯ ಪ್ರಾಂಶುಪಾಲ ಹೇಮಂತ್ ರನ್ನ ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಶಾಲಾ ಆಡಳಿತವನ್ನು ಕೇಳಿದರೆ ಅವರು ಶಿಕ್ಷಣ ಮಂಡಳಿ ಅಧಿಕಾರಿಗಳು ಬೊಟ್ಟು ಮಾಡುತ್ತಿದ್ದಾರೆ. ಬಿಐಒ ರಿಜೆಕ್ಟ್ ಮಾಡಿರೋದ್ರಿಂದ ಈ ರೀತಿ ಆಗಿದೆ ಎನ್ನುತ್ತಾರೆ. ಆದರೆ ಇದನ್ನೇ ಬಿಇಒ ಮಹೇಶ್ ತಳ್ಳಿ ಹಾಕಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವುದೇನು?

ಶಾಲಾ ಸಿಬ್ಬಂದಿ ಸರಿಯಾಗಿ ಲಾಗಿನ್ ಆಗಿ ವಿದ್ಯಾರ್ಥಿಗಳ ವಿವರವನ್ನು ಭರ್ತಿ ಮಾಡದೆ ಈ ಎಡವಟ್ಟು ಆಗಿದೆ ಎನ್ನೋದು ಶಿಕ್ಷಣ ಇಲಾಖೆ ಅಧಿಕಾರಿಗಳು. ಬಾಲಕ ತಮೀಮ್‌ಗೆ ಶಾಲೆಯಿಂದ ವರ್ಗಾವಣೆ ಪತ್ರ ಕಳುಹಿಸಲಾಗಿದೆ ಎಂಬಂತೆ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಆತನಿಗೆ ಹಾಲ್ ಟಿಕೆಟ್ ಬಂದಿಲ್ಲ ಎಂಬುದು ಅಧಿಕಾರಿಗಳ ವಾದ. ಆದರೆ ಇತ್ತ ತಮೀಮ್ 10ನೇ ತರಗತಿಯ ಸಂಪೂರ್ಣ ಶುಲ್ಕವನ್ನು ಪಾವತಿಸಿ ಇಡೀ ಒಂದು ವರ್ಷ ಓದಿದ್ದಾನೆ.

ಅಷ್ಟೇ ಅಲ್ಲದೆ ಈ ಶಾಲೆಗೆ ಕೇವಲ 8 ನೇ ತರಗತಿಗೆ ಮಾತ್ರ ಅನುಮತಿ ಇದೆ ಇಲ್ಲಿ 9 ಮತ್ತು 10 ನೇ ತರಗತಿಯನ್ನ ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿದರೂ ಅವರಿಗೆ ಅರ್ಥ ಆಗಿಲ್ಲ ಅನ್ನೋದು ಅವರ ವಾದ. ಇಷ್ಟೆಲ್ಲಾ ಆದರೂ ಶಾಲಾ ಆಡಳಿತ ಮಂಡಳಿಯ ಒಬ್ಬನೇ ಒಬ್ಬ ಸದಸ್ಯ ಶಾಲೆಯತ್ತ ಸುಳಿಯಲಿಲ್ಲ. ಪ್ರಾಂಶುಪಾಲರನ್ನ ಮುಂದೆ ಬಿಟ್ಟು ಅವರು ನಾಪತ್ತೆಯಾಗಿದ್ದರು. ಇದು ಹಲವಾರು ಅನುಮಾನಗಳಿಗೆ.

ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್ ಮನ, ವಿಡಿಯೋ ವೈರಲ್

ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರ ಒಂದು ವರ್ಷದ ಶಿಕ್ಷಣ ಬಲಿಯಾಗಿದೆ. ಈ ವರ್ಷ ನಡೆಯುವ ಮತ್ತು ಎರಡನೇ ಮೂರನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶ ದೊರೆಯುವ ಸಾಧ್ಯತೆ ಕಡಿಮೆ ಇದೆ. ಯಾವುದೇ ಅಮಾಯಕ ಮಕ್ಕಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಕಾಣುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *