ಫ್ಯಾನ್ಸ್‌ ನಡುವೆ ಸ್ಟಾರ್ ವಾರ್: ದಳಪತಿ ವಿಜಯ್ ಅಭಿಮಾನಿಗೆ ಶರ್ಟ್ ಹರಿದು ಹೋಗುವಂತೆ ಥಳಿಸಿದ ಥಲಾ ಫ್ಯಾನ್ಸ್

ಫ್ಯಾನ್ಸ್‌ ನಡುವೆ ಸ್ಟಾರ್ ವಾರ್: ದಳಪತಿ ವಿಜಯ್ ಅಭಿಮಾನಿಗೆ ಶರ್ಟ್ ಹರಿದು ಹೋಗುವಂತೆ ಥಳಿಸಿದ ಥಲಾ ಫ್ಯಾನ್ಸ್

ಫ್ಯಾನ್ಸ್‌ ನಡುವೆ ಸ್ಟಾರ್ ವಾರ್: ದಳಪತಿ ವಿಜಯ್ ಅಭಿಮಾನಿಗೆ ಶರ್ಟ್ ಹರಿದು ಹೋಗುವಂತೆ ಥಳಿಸಿದ ಥಲಾ ಫ್ಯಾನ್ಸ್

ನಟ ಅಜಿತ್ ಅವರ ‘ಮಂಕಥಾ’ ಚಿತ್ರದ ಮರು-ಬಿಡುಗಡೆ ಪ್ರದರ್ಶನದ ವೇಳೆ, ದಳಪತಿ ವಿಜಯ್ ಅವರ ಅಭಿಮಾನಿಯೊಬ್ಬರು ಅವರ ಹೊಸ ಪಕ್ಷದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಕೆರಳಿದ ಅಜಿತ್ ಅಭಿಮಾನಿಗಳು ಥಿಯೇಟರ್‌ನಲ್ಲೇ ವಿಜಯ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿ, ಶರ್ಟ್ ಹರಿದು ಹಾಕಿದ್ದಾರೆ.

ತಮಿಳು ನಟ ಅಜಿತ್ ಅವರ 2011ರ ಪ್ರಸಿದ್ಧ ಸಿನಿಮಾ ಮಂಕಥಾ ರಿ-ರಿಲೀಸ್ ವೇಳೆ ಥಿಯೇಟರೊಂದರಲ್ಲಿ ತಮಿಳಿನ ಮತ್ತೊಬ್ಬ ನಟ ವಿಜಯ್ ಅಭಿಮಾನಿಗಳು ಅವರ ಇತ್ತಿಚಿನ ಹೊಸ ಪಕ್ಷ ಟಿವಿಕೆಯ(ತಮಿಳು ವೆಟ್ರಿ ಕಾಳಗಂ) ನ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಥಲಾ ಅಜಿತ್ ಕುಮಾರ್ ಅಭಿಮಾನಿಗಳು ಥಿಯೇಟರ್‌ನಲ್ಲಿಯೇ ವಿಜಯ್ ಅಭಿಮಾನಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಶರ್ಟ್ ಹರಿದು ಹಾಕಿದ ಘಟನೆ ನಡೆದಿದೆ.

ನಿನ್ನೆ ತಮಿಳುನಾಡಿನ ಕಾರೈಕುಡಿಯಲ್ಲಿರುವ ಸಿನಿಮಾ ಥಿಯೇಟರೊಂದರಲ್ಲಿ ಈ ಘಟನೆ ನಡೆದಿದ್ದು, ತಮಿಳಿನ ಸ್ಟಾರ್ ನಟರಿಬ್ಬರ ಅಭಿಮಾನಿಗಳ ನಡುವಿನ ಸ್ಟಾರ್ ವಾರೊಂದುತೀವ್ರ ಸ್ವರೂಪಕ್ಕೆ ತಿರುಗಿತು. ಆನ್‌ಲೈನ್‌ನಲ್ಲಿ ವೈರಲ್ ಆದ ವೀಡಿಯೋದಲ್ಲಿ ಆ ಟಿವಿಕೆ ಧ್ವಜ ತೋರಿಸಿದ ವಿಜಯ್ ಅಭಿಮಾನಿಯನ್ನು ಥಲಾ ಅಜಿತ್ ಅವರ ಅಭಿಮಾನಿಗಳು ಥಿಯೇಟರ್‌ನಿಂದ ಹೊರಗೆ ಹಾಕುವುದನ್ನು ಕಾಣಬಹುದಾಗಿದೆ.

ತಮಿಳುನಾಡಿನ ಕಾರೈಕುಡಿಯಲ್ಲಿರುವ ಪಾಂಡಿಯನ್ ಸಿನಿಮಾಸ್‌ನಲ್ಲಿ ಈ ಅಭಿಮಾನಿಗಳ ನಡುವಿನ ಹೋಯ್ ಕೈ ನಡೆದಿದೆ. ಈ ಮಂಕಥಾ ಸಿನಿಮಾವೂ ಥಲಾ ಅಜಿತ್ ಅವರ 2011ರ ಸೂಪರ್ ಥ್ರಿಲ್ಲರ್ ಸಿನಿಮಾವಾಗಿದ್ದು, ಬರೋಬ್ಬರಿ 15 ವರ್ಷದ ನಂತರ ಅಭಿಮಾನಿಗಳಿಗಾಗಿ ಮತ್ತೆ ರಿಲೀಸ್ ಆಗಿದೆ. ಹೀಗಾಗಿ ಅಜಿತ್ ಅವರ ಅಭಿಮಾನಿಗಳಿಗೆ ಇದು ಸಹಜವಾಗಿ ಖುಷಿ ನೀಡಿದೆ.

ಇದನ್ನೂ ಓದಿ: ತನ್ನ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ ಬಿಗ್ಬಾಸ್ ರಕ್ಷಿತಾ ಶೆಟ್ಟಿ

ಥಲಾ ಅಜಿತ್ ಅವರು ಸಿನಿಮಾ ಥಿಯೇಟರ್‌ಗಳ ಒಳಗೂ ಬ್ಯಾನರ್ ಬಂಟಿಂಗ್ಸ್ ಹಿಡಿದು ಘೋಷಣೆ ಕೂಗುತ್ತಾ ಖುಷಿ ಪಟ್ಟಿದ್ದಾರೆ. ಇದರ ನಡುವೆ ತಮಿಳಿನ ಮತ್ತೊಬ್ಬ ನಟ ದಳಪತಿ ವಿಜಯ್ ಅಭಿಮಾನಿಯೊಬ್ಬ ಈ ಥಲಾ ಅಜಿತ್ ಅಭಿಮಾನಿಗಳನ್ನು ಕೆರಳಿಸುವ ಪ್ರಯತ್ನ ಮಾಡಿದ್ದು, ವಿಜಯ್ ಹೊಸ ಪಕ್ಷವಾದ ಟಿವಿಕೆಯ ಭಾವುಟವನ್ನು ಥಿಯೇಟರ್‌ನಲ್ಲಿ ಪ್ರದರ್ಶಿಸಿದ್ದಾನೆ.

ಇದನ್ನೂ ಓದಿ: ಮಗನ ನಿಭಾಯಿಸಲು ಬಳಸ್ತಿದ್ದ ಆಯುಧದ ಬಗ್ಗೆ ಹೇಳಿದ ರಾಜ್ ಬಿ ಶೆಟ್ಟಿ ತಾಯಿ

ಈ ವೇಳೆ ಸಿಟ್ಟಿಗೆದ್ದ ಥಲಾ ಅಭಿಮಾನಿಗಳು ಆತನಿಗೆ ಥಿಯೇಟರ್ ಒಳಗೆಯೇ ಶರ್ಟ್ ಹರಿದು ಹೋಗುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೀಗೆ ಹಲ್ಲೆಗೊಳಗಾದ ಅಭಿಮಾನಿ ಸಣ್ಣ ಹುಡುಗನಂತೆ ಕಾಣಿಸುತ್ತಿದ್ದು, ಅನೇಕರು ಈ ರೀತಿ ಹಲ್ಲೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ಥಲಾ ಅಭಿನಯದ ಈ ಮಂಕಥಾ ಸಿನಿಮಾವೂ ಜನವರಿ 23ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದು, 2ನೇ ಬಾರಿ ಬಿಡುಗಡೆ ಸಮಯದಲ್ಲೂ ಚೆನ್ನಾಗಿ ಓಡುವ ಮೂಲಕ ದಾಖಲೆ ನಿರ್ಮಾಣ ಮಾಡುವತ್ತ ದಾಪುಗಾಲಿಡುತ್ತಿದೆ.

ಇದನ್ನೂ ಓದಿ: ಯೋಧನ ಚಿತೆಗೆ ಬೆಂಕಿ ಇಟ್ಟ 1 ವರ್ಷದ ಪುತ್ರ: ಜಿಲ್ಲಾಧಿಕಾರಿ ಕಣ್ಣಲ್ಲೂ ನೀರು ತರಿಸಿತು ಭಾವುಕ ಕ್ಷಣ

ಈ ಸಿನಿಮಾದ ಮೊದಲ ದಿನದ ಮುಂಗಡ ಬುಕ್ಕಿಂಗೇ ತಮಿಳುನಾಡಿನಲ್ಲಿ ಸುಮಾರು 2.20 ಕೋಟಿ ರೂ.ಗಳನ್ನು ದಾಟಿದೆ. ಹೀಗಾಗಿ ಈ ಸಿನಿಮಾವೂ ವಿಜಯ್ ಅವರ ಐಕಾನಿಕ್ ಸಿನಿಮಾ ‘ಗಿಲ್ಲಿ’ ರಿ-ರಿಲೀಸ್ ಆಗಿಿ ಗಳಿಸಿದ ಮೊತ್ತಕ್ಕೆ ಹೋಲಿಸಿದರೆ ಅದಕ್ಕಿಂತಲೂ ಹೆಚ್ಚು ಈ ಮಂಕಥಾ ಸಿನಿಮಾ ಗಳಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಬಿಸಿಲಿಗಿಟ್ಟ ಸೋಪಾ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಮಾಯ: ಸಿಸಿಟಿವಿ ನೋಡಿ ಆಘಾತ

ಇತ್ತ ಮಂಕಥಾ ಭಾರತದಾದ್ಯಂತ ತನ್ನ ಮೊದಲ ದಿನದಂದು ಅಂದಾಜು 3.75ರಿಂದ 4.1 ಕೋಟಿ ರೂ.ಗಳನ್ನು ಗಳಿಸಿದ್ದು, ಇದು ಗಿಲ್ಲಿ ಸಿನಿಮಾ ಮಾಡಿದ ದಾಖಲೆಯನ್ನು ಅಳಿಸಿದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮರು ಬಿಡುಗಡೆಯಾದ ತಮಿಳು ಚಿತ್ರವೊಂದಕ್ಕೆ ಸಿಕ್ಕ ಅತ್ಯಂತ ಪ್ರಬಲವಾದ ಸ್ಪಂದನೆ ಎನಿಸಿದೆ.

ಥಿಯೇಟರ್‌ನಲ್ಲಿ ನಡೆದ ಘಟನೆಯ ವೀಡಿಯೋ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *