ಜನವರಿ 16: ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರು ಬಹಳ ಮುತುವರ್ಜಿಯಿಂದ ಪ್ರಾರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ (ಸ್ಟಾರ್ಟಪ್ ಇಂಡಿಯಾ ಪ್ರೋಗ್ರಾಂ) 10 ವರ್ಷದ ಸಂಭ್ರಮ ಇಂದು. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜನ ನೀಡಲು ಸಣ್ಣದಾಗಿ ಶುರುವಾದ ಸ್ಟಾರ್ಟಪ್ ಇಂಡಿಯಾ ಇದೀಗ ಬಹಳ ವ್ಯಾಪಕವಾದ ಇಕೋಸಿಸ್ಟಂ ಆಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ತಲುಪಲು ದೇಶದ ಪ್ರಗತಿಯ ಎಂಜಿನ್ ಆಗಿ ಮಾರ್ಪಾಡುಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಿದೆ. ಮಹಿಳೆಯರ ನೇತೃತ್ವದ ಸ್ಟಾರ್ಟಪ್ಗಳಿಗೆ ಉತ್ತೇಜನ ಸಿಕ್ಕಿದೆ. ಸಮತೋಲಿತ ಸಮಾಜ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಇದು ಪುಷ್ಟಿ ಕೊಟ್ಟಿದೆ.
2025ರ ಡಿಸೆಂಬರ್ನಲ್ಲಿ ಡಿಪಿಐಐಟಿ ಮಾನ್ಯತೆ ಪಡೆದಿರುವ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್ಗಳಿವೆ. ವಿಶ್ವದಲ್ಲೇ ಅತಿದೊಡ್ಡ ಸ್ಟಾರ್ಪಟ್ ಇಕೋಸಿಸ್ಟಂ ಹೊಂದಿದ ದೇಶಗಳಲ್ಲಿ ಭಾರತವೂ ಇದೆ. ಅರ್ಧದಷ್ಟು ಸ್ಟಾರ್ಟಪ್ಗಳು ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲಿ ಹುಟ್ಟಿರುವುದು ವಿಶೇಷ. ಎಸ್ವಿಐಪಿ, ಆಸ್ಪೈರ್, ಎಸ್ಎಂಇಜಿಪಿ ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಡುತ್ತಿರುವುದು ಗಮನಾರ್ಹ. ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ ಹಲವಾರು ಯೋಜನೆಗಳು, ಸ್ಕೀಮ್ಗಳನ್ನು ತರಲಾಗಿದೆ. ಅದರ ವಿವರ ಇಲ್ಲಿದೆ:
ಸ್ಟಾರ್ಟಪ್ಗಳಿಗೆ ಫಂಡ್ (ಎಫ್ಎಫ್ಎಫ್ಎಸ್): ಡಿಪಿಐಟಿ ಅಡಿಯಲ್ಲಿ ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ಸ್ ಸ್ಕೀಮ್ (ಎಫ್ಎಫ್ಎಸ್- ಸ್ಟಾರ್ಟ್ಅಪ್ಗಳಿಗಾಗಿ ಫಂಡ್ಗಳ ನಿಧಿ) ರಚಿಸಲಾಗಿದೆ. ಇದು ಸೆಬಿ ನೊಂದಾಯಿತ ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ಗಳಿಗೆ ನೆರವು ನೀಡುತ್ತದೆ. ಈ 140ಕ್ಕೂ ಅಧಿಕ ಎಐಎಫ್ಗಳು 1,370ಕ್ಕೂ ಅಧಿಕ ಸ್ಟಾರ್ಟಪ್ಗಳಿಗೆ 25,500 ಕೋಟಿ ರೂ.
ಕ್ರೆಡಿಟ್ ಗ್ಯಾರಂಟಿ ಸ್ಕೀಮ್: ಈ ಸಿಜಿಎಸ್ ಎಸ್ ಸ್ಕೀಮ್ನಲ್ಲಿ (ಸ್ಟಾರ್ಟಪ್ಗಳಿಗೆ ಕ್ರೆಡಿಟ್ ಗ್ಯಾರಂಟಿ ಸ್ಕೀಮ್) 800 ಕೋಟಿ ರೂಗೂ ಹೆಚ್ಚು ಮೊತ್ತದ 330ಕ್ಕೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ.
ಸೀಡ್ ಫಂಡ್ ಸ್ಕೀಮ್: ಸ್ಟಾರ್ಟಪ್ಗಳ ಆರಂಭಿಕ ಹಂತದಲ್ಲಿ ಉತ್ತೇಜನ ನೀಡಲು ಈ ಸ್ಕೀಮ್ (SISFS- ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್) ರಚಿಸಲಾಗಿದೆ. ಇನ್ಕುಬೇಟರ್ಗಳ ಮೂಲಕ ಸ್ಟಾರ್ಟಪ್ಗಳಿಗೆ ಸೀಡ್ ಫಂಡಿಂಗ್ ಕೊಡಡಿಂಗ್.
ಸ್ಟಾರ್ಟಪ್ ಇಂಡಿಯಾ ಹಬ್: ಸ್ಟಾರ್ಟಪ್ ಇಕೋಸಿಸ್ಟನ್ನ ಮುಖ್ಯಧಾರಿಗಳನ್ನು ಹೂಡಿಕೆದಾರರು, ಮೆಂಟರ್ಗಳು, ಇನ್ಕುಬೇಟರ್ಗಳು, ಉದ್ದಿಮೆದಾರರು ಎಲ್ಲರೂ ಒಂದೇ ಕಡೆ ಸಿಗುವವರಿಗೆ ಒಂದು ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ರಚಿಸಲಾಗಿದೆ.
ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ ಫ್ರೇಮ್ ವರ್ಕ್: ಸ್ಟಾರ್ಟಪ್ಗಳ ಆರಂಭ ಮತ್ತು ಬೆಳವಣಿಗೆಗೆ ಉತ್ತೇಜನಕಾರಿಯಾದಂತಹ ಅತ್ಯುತ್ತಮ ನೀತಿ ಮತ್ತು ವಾತಾವರಣ ಹೊಂದಿರುವಂತಹ ರಾಜ್ಯಗಳನ್ನು ಗುರುತಿಸಲು ಈ ಯೋಜನೆಯನ್ನು ಆಯೋಜಿಸಲಾಗಿದೆ.
ಅನುಭವ ಮೆಂಟರ್ಶಿಪ್ ಪೋರ್ಟಲ್ (ಮಾರ್ಗ್): ಉದ್ದಿಮೆದಾರರಿಗೆ ಮೆಂಟರ್ಗಳನ್ನು (ಮಾರ್ಗದರ್ಶಕರು) ಒದಗಿಸಿಕೊಡುವಂತಹ ಒಂದು ವ್ಯವಸ್ಥೆ ಯೋಜನೆ ಮೂಲಕ ಮಾಡಲಾಗುತ್ತಿದೆ.
ಸ್ಟಾರ್ಟಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್: ಉದ್ದಿಮೆದಾರರು ಒಂದೇ ಅರ್ಜಿಯ ಮೂಲಕ ಹಲವು ಹೂಡಿಕೆದಾರರನ್ನು ತಲಪಲು ಅಥವಾ ಆಕರ್ಷಿಸಲು ವಿಶೇಷ ಡಿಜಿಟಲ್ ಪ್ಲಾಟ್ಫಾರ್ಮ್ ರಚಿಸಲಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್ಗಳು ಮತ್ತು ಹೂಡಿಕೆದಾರರನ್ನು ಈ ಪೋರ್ಟಲ್ ಮೂಲಕ ಸಂಪರ್ಕಿಸಲು ಸಾಧ್ಯವಿದೆ.
ಇದನ್ನೂ ಓದಿ: G-RAM-G: ಜಿ ರಾಮ್ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ
ಸ್ಟಾರ್ಟಪ್ ಇಕೋಸಿಸ್ಟಂ ಗಟ್ಟಿಗೊಳಿಸಲು ವಿವಿಧ ಉಪಕ್ರಮಗಳು…
ಅಟಲ್ ಇನ್ನೋವೇಶನ್ ಮಿಷನ್: ಅಟಲ್ ಟಿಂಕರಿಂಗ್ ಲ್ಯಾಬ್, ಕಮ್ಯೂನಿಟಿ ಇನ್ನೋವೇಟರ್ ಫೆಲೋಶಿಪ್, ಯೂತ್ ಕೋ ಲ್ಯಾಬ್ ಪ್ರೋಗ್ರಾಮ್, ಡೀಪ್ಟೆಕ್ ರಿಯಾಕ್ಟರ್, ಲಿಪಿ ಇತ್ಯಾದಿ ಯೋಜನೆಗಳನ್ನು ಈ ಮಿಷನ್ನಲ್ಲಿ ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಲ್ಲಿ ಯುವಕರು ನಾವೀನ್ಯತೆ ತೋರಲು ಉತ್ತೇಜಿಸುವುದು, ತಳಮಟ್ಟದಿಂದ ಉದ್ದಿಮೆಗಾರಿಕೆಗೆ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಈ ಮಿಷನ್ನಲ್ಲಿ ಮಾಡಲಾಗುತ್ತಿದೆ.
ಜೆನೆಸಿಸ್ ಯೋಜನೆ: ಡೀಪ್ ಟೆಕ್ ಕ್ಷೇತ್ರದಲ್ಲಿ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಲು ಜನರೇಶನ್ ನೆಕ್ಸ್ಟ್ ಸಪೋರ್ಟ್ ಫಾರ್ ಇನ್ನೋವೇಟಿವ್ ಸ್ಟಾರ್ಟ್ಯಾಪ್ಸ್ (ಜೆನೆಸಿಸ್) ಎಂಬ ಒಂದು ಪ್ಲಾಟ್ಫಾರ್ಮ್ ಅನ್ನು ರಚಿಸಲಾಗಿದೆ.
ಎಂಎಸ್ಎಸ್ಎಚ್ ಯೋಜನೆ: ಐಟಿ ಮತ್ತು ವಿದೇಶ ಸಚಿವಾಲಯದಡಿ ಸ್ಟಾರ್ಟ್ ಹಬ್ ಎಂಬ ಉಪಕ್ರಮ 2016ರಲ್ಲಿ ಜಾರಿಯಲ್ಲಿದೆ. ಸಚಿವಾಲಯದಿಂದ ಮಾನ್ಯತೆ ಪಡೆದ ಇನ್ಕುಬೇಶನ್ ಸೆಂಟರ್ಗಳು, ಹೊಸ ತಂತ್ರಜ್ಞಾನಗಳ ಕೇಂದ್ರಗಳು ಪ್ರಾಯೋಗಿಕ ವೇದಿಕೆ ಪ್ಲಾಟ್ಫಾರ್ಮ್ಗಳನ್ನು ಒಂದೇ ಹಂತದಲ್ಲಿ ಕಲೆಹಾಕಿ ತಂತ್ರಜ್ಞಾನ ಆಧಾರಿತ ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶ.
ಟೈಡ್ 2.0 ಸ್ಕೀಮ್: MSH ರೀತಿಯಲ್ಲಿ ಇದೂ ಕೂಡ ಕೌಶಲೀಕರಣ ಸಚಿವಾಲಯದಿಂದ ನಡೆಸಲ್ಪಡುತ್ತಿದೆ. ಎಐ, ಬ್ಲಾಕ್ಚೇನ್, ರೋಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಸ್ಟಾರ್ಟ್ಪ್ಗಳನ್ನು ಉತ್ತೇಜಿಸುವ ಗುರಿ.
ನಿಧಿ ಸ್ಕೀಮ್: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2016 ರಲ್ಲಿ ಪ್ರಾರಂಭವಾದ ಇತ್ತೀಚಿನ ಇನಿಶಿಯೇಟಿವ್ ಫಾರ್ ಡೆವಲಪಿಂಗ್ ಮತ್ತು ಹಾರ್ನೆಸಿಂಗ್ ಇನ್ನೋವೇಶನ್ಸ್ (ನಿಧಿ) ಉಪಕ್ರಮ ಇದು. ಯಶಸ್ವಿ ಸ್ಟಾರ್ಟಪ್ಗಳಿಗೆ ಉಪಯುಕ್ತ ಐಡಿಯಾಗಳು ಮತ್ತು ನಾವೀನ್ಯತೆಗಳನ್ನು ಬೆಳೆಸಲು ಇರುವ ಒಂದು ಪ್ಲಾಟ್ಫಾರ್ಮ್ ಇದು. ಈ ಅದ್ಭುತ ಉಪಕ್ರಮದಿಂದ 1,100ಕ್ಕೂ ಅಧಿಕ ಐಟಿ ಪೇಟೆಗಳು ಸಿಕ್ಕಿವೆ. 12 ಸಾವಿರಕ್ಕೂ ಅಧಿಕ ಸ್ಟಾರ್ಟಪ್ಗಳಿಗೆ ಬಲ ಸಿಕ್ಕಿದೆ. 1.3 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಿದೆ.
ಗ್ರಾಮೀಣ ಉದ್ದಿಮೆಗಾರಿಕೆ ಯೋಜನೆ (ಎಸ್ವಿಐಪಿ): ದೀನದಯಾಳ್ ಅಂತ್ಯೋದಯ ಯೋಜನೆ ರೂರಲ್ ಲೈವ್ ಲಿಹುಡ್ ಮಿಷನ್ ಯೋಜನೆ ಅಡಿ ಸ್ಟಾರ್ಟಪ್ ವಿಲೇಜ್ ಆಂಟ್ರಪ್ರನ್ಯೂರ್ಶಿಪ್ ಕಾರ್ಯಕ್ರಮ ಒಂದು ಉಪಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆಗಾರಿಕೆಗೆ ಉತ್ತೇಜಿಸುವುದು ಇದರ ಉದ್ದೇಶ. ಹತ್ತಿರಹತ್ತಿರ 4 ಲಕ್ಷ ಉದ್ದಿಮೆಗಳಿಗೆ ಈ ಸ್ಕೀಮ್ ಮೂಲಕ ಸಹಾಯ ಮಾಡಲಾಗಿದೆ.
ಆಸ್ಪೈರ್ ಯೋಜನೆ: ಎಂಎಸ್ಎಂಇ ಸಚಿವಾಲಯ 2015 ರಲ್ಲಿ ಪ್ರಾರಂಭವಾಯಿತು ಇದು ಹೊಸತನ, ಗ್ರಾಮೀಣ ಕೈಗಾರಿಕೆ ಮತ್ತು ಉದ್ದಿಮೆಗಾರಿಕೆಗೆ ಉತ್ತೇಜಿಸುವ ಯೋಜನೆಯಾಗಿದೆ. ಸಣ್ಣ ಉದ್ದಿಮೆಗಳಿಗೆ ಬೇಕಾದ ಕೌಶಲ್ಯ ಒದಗಿಸುವುದು, ಕೌಶಲ್ಯವಂತ ಕೆಲಸಗಾರರನ್ನು ಒದಗಿಸುವುದು, ತಂತ್ರಜ್ಞಾನ ಮತ್ತು ಹಣಕಾಸು ನೆರವು ನೀಡುವುದು ಇದರ ಉದ್ದೇಶ.
ಪಿಎಂಇಜಿಪಿ ಯೋಜನೆ: ಪಿಎಂ ರೋಜಗಾರ್ ಯೋಜನೆ ಮತ್ತು ಗ್ರಾಮೀಣ ಉದ್ಯೋಗಸೃಷ್ಟಿ ಯೋಜನೆ ಎರಡನ್ನೂ ಸೇರಿಸಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸಲಾಗಿದೆ. ಎಂಎಸ್ಎಂಇ ಸಚಿವಾಲಯದ ಅಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ (ಕೆವಿಐಸಿ) ಮೂಲಕ ಈ ಸ್ಕೀಮ್ ಅನ್ನು ಜಾರಿಗೊಳಿಸಲಾಗುತ್ತಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ