ಬೆಂಗಳೂರು, ಫೆ.4: ಒಂದು ಕಂಪನಿಯಲ್ಲಿ ದುಡಿಯುವಾಗ ಹಲವು ಕನಸುಗಳನ್ನು ಇಟ್ಟುಕೊಂಡಿರುತ್ತೇವೆ. ಒಳ್ಳೆಯ ವಾತಾವರಣದಲ್ಲಿ ಕೆಲಸ ಮಾಡಿದರೆ ಖುಷಿಯೇ ಬೇರೆ ಇರುತ್ತದೆ. ಆದರೆ ಕಂಪನಿ ಸೇರಿದಾಗ ಇರುವ ಉತ್ಸಾಹ, ನಂತರ ದಿನಗಳಲ್ಲಿ ಆ ಹುಮ್ಮಸ್ಸು, ಕೆಲಸದ ನಿಷ್ಠೆ ಇರುವುದಿಲ್ಲ. ಏಕೆಂದರೆ ಕಂಪನಿಯಲ್ಲಿ ನಡೆಯುವ ರಾಜಕೀಯ, ತಾರತಮ್ಯಗಳು, ಇದರಿಂದ ಬೇಸತ್ತು. ಇದು ನಮ್ಮ ಕಂಪನಿಯ ಸ್ಥಿತಿಗೆ ಬಂದಿರುತ್ತೇವೆ. ಇದರ ಜೊತೆಗೆ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಇಲ್ಲಿ ಬೆಲೆ ಇರಲ್ಲ. ಇದೀಗ ಇಲ್ಲೊಂದು ಹಂಚಿಕೊಂಡಿರುವ ಪೋಸ್ಟ್ ಇಂತಹದೇ ವಿಚಾರದ ಬಗ್ಗೆ ಹೇಳುತ್ತದೆ. ಬೆಂಗಳೂರಿನ ಯುವಕ ಜೀವನ ಎಂಬುವವರು ತಮ್ಮ ಕಂಪನಿಯಲ್ಲಿ ಅನುಭವಿಸಿದ ಕಹಿ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸ್ಟಾರ್ಟ್ ಅಪ್ ಸಂಸ್ಕೃತಿಯ (ಸ್ಟಾರ್ಟಪ್ ಕಲ್ಚರ್) ಕರಾಳ ಮುಖವನ್ನು ಅನಾವರಣಗೊಳಿಸಲಾಗಿದೆ. ಕೆಲಸದ ಮೇಲಿನ ನಿಷ್ಠೆ ಮತ್ತು ಮಾನವೀಯ ಮೌಲ್ಯಗಳ ನಡುವಿನ ಕಂದಕ ಹೇಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಜೀವನ ಆತನ ಕೆಲಸಕ್ಕೆ ಸೇರಿದ 3 ತಿಂಗಳ ಪ್ರೊಬೇಷನ್ ಅವಧಿ ಮುಗಿಯುವ ಕೆಲವೇ ದಿನಗಳಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ. ನಮ್ಮ ತಂಡವನ್ನು ತೆಗೆದು ಹಾಕುವ ಪ್ಲಾನ್ 9 ರಿಂದ 10 ತಿಂಗಳಿನಿಂದ ನಡೆಯುತ್ತಿತ್ತು. ಈ ಬಗ್ಗೆ ನಮ್ಮ ಮುಖ್ಯಸ್ಥರೇ ಹೇಳಿದರು. ನಮ್ಮ ಟಿಮ್ಸ್ ತೆಗೆದು ಹಾಕುವ ಮೊದಲೇ ಹೊಸ ಕೆಲಸಗಾರರನ್ನು ನೇಮಕ ಮಾಡಿದ್ದಾರೆ. ಇದೊಂದು ನೈತಿಕ ದಿವಾಳಿತನ, ಮುಳುಗುತ್ತಿದ್ದ ಕಂಪನಿಗೆ ಮರುಜೀವ ನೀಡಿದ ಜನರನ್ನೇ ತೆಗೆದು ಹಾಕುವ ಸಾಹಸ ಮಾಡಿದ್ದಾರೆ. ಹಾಗಾದರೆ ಸಂದರ್ಶನದ ಸಮಯದಲ್ಲಿ ನೀಡಿದ ಭರವಸೆಗಳು ಮತ್ತು ತೋರಿಸಿದ ದೃಷ್ಟಿಕೋನ ಕೇವಲ ಸುಳ್ಳೇ? 1.5 ತಿಂಗಳು ನೀಡಲಾದ ವೇತನ (ಸೆವೆರೆನ್ಸ್ ಪೇ) ವೃತ್ತಿಜೀವನದಲ್ಲಿ ಉಂಟಾಗುವ ಗ್ಯಾಪ್ ಮತ್ತು ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಬಹುದೇ? ಎಂಬ ಪ್ರಶ್ನೆಯನ್ನು ಜೀವನ ಈ ಪೋಸ್ಟ್‌ನಲ್ಲಿ ಕೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ದಿನಗಳಲ್ಲಿ ನಡೆಯುತ್ತಿರುತ್ತದೆ ಅಪರೂಪದ ವಜ್ರಾಭರಣಗಳ ಜಾತ್ರೆ
ಇಲ್ಲಿದೆ ನೋಡಿ ಪೋಸ್ಟ್:
ತಮ್ಮ ಕಂಪನಿಯ ಈ ನೀತಿಯನ್ನು ಬಳಸಿ ಬಿಸಾಡುವ ನೀತಿ ಎಂದು ಹೇಳಿದ್ದಾರೆ. ಕೆಲಸಗಾರರನ್ನು ಕೇವಲ ಬ್ಯಾಲೆನ್ಸ್ ಶೀಟ್‌ನಲ್ಲಿರುವ ಆಸ್ತಿಗಳಲ್ಲಿ ನೋಡುವ ಬದಲು ಮನುಷ್ಯರಂತೆ ನೋಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾವು ಎಷ್ಟು ಬೇಗ ರಿಪ್ಲೇಸ್ ಆಗುತ್ತೇವೆ ಎಂದು ಯೋಚಿಸಿದರೆ ಭಯವಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಇಂದು ಅವರು ನಿಮ್ಮ ಬೆಲೆ ತಿಳಿಯದೇ ಇರಬಹುದು, ಆದರೆ ಇದು ನಿಮಗೆ ದೊಡ್ಡ ಅವಕಾಶ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ನಿಮ್ಮ ಕೆಲಸದಿಂದ ಸೋತಿಲ್ಲ, ಅವರು ನಿಮ್ಮನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ