ಭಾರತದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಮುಸ್ಲಿಮರಿದ್ದಾರೆ; ಕೇರಳದಲ್ಲಿ ಎಷ್ಟಿದ್ದಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಮುಸ್ಲಿಮರಿದ್ದಾರೆ; ಕೇರಳದಲ್ಲಿ ಎಷ್ಟಿದ್ದಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಮುಸ್ಲಿಮರಿದ್ದಾರೆ; ಕೇರಳದಲ್ಲಿ ಎಷ್ಟಿದ್ದಾರೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಬೆಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದವರು ದೇಶದ ಎಲ್ಲಾ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ನಾವಿಂದು ಯಾವ ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯ ಮುಸ್ಲಿಮರಿದ್ದಾರೆ. ನೆರೆಯ ಕೇರಳದಲ್ಲಿ ಅವರ ಸಂಖ್ಯೆ ಎಷ್ಟು ನೋಡೋಣ ಬನ್ನಿ.

ಭಾರತದಲ್ಲಿ ಹಿಂದುಗಳ ಬಳಿಕ ಅತಿಹೆಚ್ಚು ಸಂಖ್ಯೆಯಲ್ಲಿರುವ ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 14.2% ಮಂದಿ ಮುಸ್ಲಿಮರು ವಾಸವಾಗಿದ್ದಾರೆ. ನಮ್ಮ ದೇಶದ ಯಾವ ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ ಎಂದು ನೋಡೋಣ.

ಭಾರತದಲ್ಲಿ ಅತಿಹೆಚ್ಚು ಮುಸ್ಲಿಮರು ಇರುವ ರಾಜ್ಯವೆಂದರೆ ಅದು ಅಸ್ಸಾಂ. ಈ ರಾಜ್ಯದ ರಾಜಧಾನಿ ಗುವಾಹಟಿ, ಸಿಲ್ಚಾರ್ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಮುಸಲ್ಮಾನರಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯ 34.22% ಮಂದಿ ಮುಸಲ್ಮಾನರಿರುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶದ ಜತೆ ಗಡಿಯನ್ನು ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ಸಮುದಾಯದವರಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ 27% ಮುಸ್ಲಿಮರಿದ್ದಾರೆ. ಅಂದರೆ ವರದಿಯ ಪ್ರಕಾರ ಇಲ್ಲಿ ಎರಡೂವರೆ ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ.

ಇನ್ನು ಅತಿಹೆಚ್ಚು ಮುಸಲ್ಮಾನರು ವಾಸವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ನೆರೆಯ ರಾಜ್ಯವಾದ ಕೇರಳ ಮೂರನೇ ಸ್ಥಾನದಲ್ಲಿದೆ. ಕೇರಳದ ಬಹುತೇಕ ಆಯಕಟ್ಟಿನ ಜಾಗಗಳಾದ ವಯನಾಡ್, ಮಲಪ್ಪುರಂ ಮುಂತಾದ ಕಡೆ ಮುಸಲ್ಮಾನರು ತಮ್ಮ ಪ್ರಾಬಲ್ಯ ಹೊಂದಿದ್ದಾರೆ. ಕೇರಳದಲ್ಲಿ 26.56 ಮಂದಿ ಅಂದರೆ 90 ಲಕ್ಷಕ್ಕೂ ಅಧಿಕ ಮುಸ್ಲಿಮರಿದ್ದಾರೆ.

ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದಲ್ಲಿ ಸುಮಾರು 4 ಕೋಟಿಯಷ್ಟು ಮುಸಲ್ಮಾನರಿದ್ದಾರೆ. ಅಂದರೆ ಯುಪಿಯ ಒಟ್ಟು ಜನಸಂಖ್ಯೆಯ 19.26% ಮಂದಿ ಮುಸಲ್ಮಾನರಿದ್ದಾರೆ.

ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಬಿಹಾರದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 16.9% ಮಂದಿ ಮುಸ್ಲಿಮರಿದ್ದಾರೆ. ಅಂದರೆ ಸುಮಾರು 1.76 ಕೋಟಿಯಷ್ಟು ಮಂದಿ ಮುಸಲ್ಮಾನರಿದ್ದಾರೆ ಎಂದು ವರದಿಯಾಗಿದೆ.

Source link

Leave a Reply

Your email address will not be published. Required fields are marked *