ಪಾಲಕ್ಕಾಡ್, ಜನವರಿ 9: 5 ವರ್ಷದ ಪುಟ್ಟ ಬಾಲಕಿ ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾಳೆಂಬ ಕಾರಣಕ್ಕೆ ಆಕೆ ಮಲತಾಯಿ ಆ ಮಗುವಿನ ಗುಪ್ತಾಂಗವನ್ನೇ (ಖಾಸಗಿ ಭಾಗ) ಸುಟ್ಟಿದ್ದಾಳೆ. ಕಳೆದ ವಾರ ಉತ್ತರ ಕೇರಳ ಜಿಲ್ಲೆಯ ಕಾಂಜಿಕೋಡ್ ಬಳಿ ಈ ಘಟನೆ ನಡೆದಿದೆ. ಆ ಮಗು ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಕಷ್ಟಪಡುತ್ತಿರುವುದನ್ನು ಗಮನಿಸಿ ಶಿಕ್ಷಕಿ ಏನಾಯಿತು ಎಂದು ವಿಚಾರಿಸಿದಾಗ ಆ ಮಗು ವಿಷಯವನ್ನು ಈ ಕುರಿತು ಹೇಳಿದೆ.
ಬಳಿಕ ಆ ಮಗುವಿನ ಗುಪ್ತಾಂಗವನ್ನು ಪರೀಕ್ಷಿಸಿದ ಅಂಗನವಾಡಿ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಲಾಗಿದೆ. ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ನ್ಯಾಯ ಕಾಯ್ದೆ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಆ ಮಗು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಸೂಚನೆಯಲ್ಲಿದೆ
ಇದನ್ನೂ ಓದಿ: ಅಮ್ಮನ ಎದೆಹಾಲು ಕುಡಿದಾಗ ಮಗು ಸಾವು!
ಆ ಮಹಿಳೆ ಇದಕ್ಕೂ ಮುಂಚೆ ಮಗುವಿನ ಮೇಲೆ ಇದೇ ರೀತಿ ನಡೆಸಿದ್ದಾಳೆ ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಿ, ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ