ಆಧಾರ್ ಕಾರ್ಡ್ (ಆಧಾರ್) ಭಾರತದಲ್ಲಿ ಈಗ ಬಹಳ ಮುಖ್ಯ ದಾಖಲೆಯಾಗಿದೆ. ಸಾಕಷ್ಟು ಸೇವೆಗಳಿಗೆ ಆಧಾರ್ ಪ್ರಮುಖ ದಾಖಲೆಯಾಗಿ ಪರಿಗಣಿತವಾಗುತ್ತದೆ. ಇದು ವ್ಯಕ್ತಿಯ ಗುರುತಿನ ದಾಖಲೆ. ಇದರಲ್ಲಿ ವ್ಯಕ್ತಿಯ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್, ಭಾವಚಿತ್ರ, ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ವಿವರ ಇರುತ್ತದೆ. ಬಯೋಮೆಟ್ರಿಕ್ ಮಾಹಿತಿಯಾದ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಡಾಟಾ ಬಹಳ ಮುಖ್ಯವಾದುದು. ಇವು ಆಧಾರ್ ದೃಢೀಕರಣಕ್ಕೆ ಬಹಳ ಮುಖ್ಯ.
ಹಾಗೆಯೇ, ಮೊಬೈಲ್ ನಂಬರ್ ಮೂಲಕ ಆಧಾರ್ ಅಥೆಂಟಿಕೇಶನ್ ಮಾಡಲು ಸಾಧ್ಯವಿಲ್ಲ. ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದರೆ ಅದು ಸಾಧ್ಯ. ಈಗ ಹೆಚ್ಚಿನ ಆಧಾರ್ ದೃಢೀಕರಣಗಳು ಮೊಬೈಲ್ ನಂಬರ್ ಬರುವ ಒಟಿಪಿ ಮೂಲಕವೇ ಹೋಗುತ್ತವೆ.
ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದೇ?
ಒಂದು ಕುಟುಂಬದಲ್ಲಿ ಎಲ್ಲಾ ಸದಸ್ಯರಿಗೂ ಆಧಾರ್ ಕಾರ್ಡ್ ಮಾಡಿಸಲಾಗಿರುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಮೊಬೈಲ್ ನಂಬರ್ ಜೋಡಿಸಿರುವ ಸಾಧ್ಯತೆ ಕಡಿಮೆ. ಇರುವ ನಂಬರ್‌ಗಳನ್ನು ಬೇರೆ ಬೇರೆ ಆಧಾರ್‌ಗೆ ಕೊಟ್ಟಿರಬಹುದು. ಕೆಲವೊಮ್ಮೆ ಯಾವ ಆಧಾರ್ ಕಾರ್ಡ್‌ಗೆ ಯಾವ ನಂಬರ್ ಕೊಟ್ಟಿದ್ದೇವೆ ಎಂದು ಮರೆತುಹೋಗಬಹುದು. ಯಾರ ಆಧಾರ್‌ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ ಎಂದು ಗೊಂದಲದಲ್ಲಿತ್ತು, ಅಥವಾ ಆಧಾರ್‌ಗೆ ಲಿಂಕ್ ಆದ ಮೊಬೈಲ್ ನಂಬರ್ ಅನ್ನು ವೆರಿಫೈ ಮಾಡಬೇಕಾದರೆ ಈ ಕೆಳಗಿನ ವಿಧಾನವನ್ನು ಅನುಸರಿಸಬಹುದು.
ಆಧಾರ್‌ಗೆ ಲಿಂಕ್ ಆದ ಮೊಬೈಲ್ ನಂಬರ್ ಪರಿಶೀಲಿಸುವ ಕ್ರಮ
- ಯುಐಡಿಐ ವೆಬ್ ಸೈಟ್‌ಗೆ ಹೋಗಿ. ಅದರ ವಿಳಾಸ ಇದೆ: uidai.gov.in/en/
- ಇಲ್ಲಿ ‘ಮೈ ಆಧಾರ್’ ಸೆಕ್ಷನ್ ಅಡಿಯಲ್ಲಿ ಆಧಾರ್ ಸರ್ವೀಸ್ ಮೆನು ಅಡಿಯಲ್ಲಿ ‘ವೆರಿಫೈ ಇಮೇಲ್/ ಮೊಬೈಲ್ ನಂಬರ್’ ಮೇಲೆ ಕ್ಲಿಕ್ ಮಾಡಿ.
- 12 ಅಂಕಿ ಆಧಾರ್ ನಂಬರ್ ನಮೂದಿಸಿ
- ಮೊಬೈಲ್ ನಂಬರ್ ಅನ್ನು ನಮೂದಿಸಿ.
- ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಆ ನಂಬರ್ ಗೆ ಒಟಿಪಿ ಬರುತ್ತದೆ. ಆ ಒಟಿಪಿ ಹಾಕಿ ವೆರಿಫೈ ಮಾಡಬಹುದು.
- ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದೇ ಇದ್ದರೆ ಅದರ ಮಾಹಿತಿಯಿದೆ.
ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ
ಇದೇ ರೀತಿ ಇಮೇಲ್ ಅನ್ನು ಕೂಡ ವೆರಿಪೈ ಮಾಡಬಹುದು. ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಅಪ್‌ಟುಡೇಟ್ ಮಾಡಿರುವುದು ಆಧಾರ್ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ