ಇಂಗ್ಲೆಂಡ್ ವಿರುದ್ಧ ಪ್ರತಿಷ್ಠಿತ ಆಯಶಸ್ ಸರಣಿಯ ಮೊದಲ ಪ್ರದರ್ಶನ ಸ್ಟೀವ್ ಸ್ಮಿತ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆ ನೋವಿನಿಂದ ಬಳಲುತ್ತಿದ್ದರು, ಹೀಗಾಗಿ ನವೆಂಬರ್ 21 ರಂದು ಆರಂಭಗೊಂಡ ಮೊದಲ ಪಂದ್ಯಕ್ಕೆ ಅಲಭ್ಯವಾಗಿದೆ.
ಇತ್ತ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮೊದಲ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಇನ್ನು ಉಳಿದ ಪಂದ್ಯಗಳಿಂದಲೂ ಕಮಿನ್ಸ್ ಹೊರಗುಳಿದರೆ ಸ್ಮಿತ್ ನಾಯಕನಾಗಿ ಮುಂದುವರಿಯಲಿದ್ದಾರೆ.
ಅಂದಹಾಗೆ ಸ್ಟೀವ್ ಸ್ಮಿತ್ ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ವೇಳೆ 40 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಅವರು 23 ಜಯ ತಂದುಕೊಟ್ಟಿದ್ದರು. ಇನ್ನು ಸ್ಮಿತ್ ನಾಯಕತ್ವದಲ್ಲಿ ಆಸೀಸ್ ಪಡೆ ಸೋತಿರುವುದು ಕೇವಲ 10 ಮ್ಯಾಚ್‌ಗಳಲ್ಲಿ ಮಾತ್ರ. ಇನ್ನುಳಿದ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರು.
ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಸ್ಟೀವ್ ಸ್ಮಿತ್ ಇದೀಗ ಆಯಶಸ್ ಸರಣಿಯಲ್ಲಿ ಮತ್ತೆ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇತ್ತ ನಾಯಕತ್ವದೊಂದಿಗೆ ಅದ್ಭುತ ಫಾರ್ಮ್ ಪ್ರದರ್ಶಿಸುವಲ್ಲಿ ನಿಸ್ಸೀಮರಾಗಿರುವ ಸ್ಮಿತ್ ಕಡೆಯಿಂದ ಈ ಬಾರಿ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.
ಆಶ್ಯಸ್ ಸರಣಿಗೆ ಆಸ್ಟ್ರೇಲಿಯಾ ಸಂಭಾವ್ಯ ತಂಡ: ಸ್ಟೀವ್ ಸ್ಮಿತ್ (ನಾಯಕ), ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕೋನ್ ಸ್ಟಾಸ್, ಮಾರ್ನಸ್ ಲಾಬುಶೇನ್, ಮೈಕೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಶ್‌ಮೊದಲ ಹ್ಯಾಝ್‌ವುಡ್, ನಾಥನ್ ಲಿಯಾನ್, ಸ್ಕಾಟ್ ಕಮಿನ್ಸ್ ಬೋಲ್ಯಾಂಡ್ ().
ಆಶ್ಯಸ್ ಸರಣಿಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗ್ಯಾಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪಾಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಮಾರ್ಕ್.
ಇದನ್ನೂ ಓದಿ: IPL 2026: KKR ತಂಡಕ್ಕೆ ಕೆಎಲ್ ರಾಹುಲ್?
ಆಯಶಸ್ ಸರಣಿ ಕಾರ್ಯಕ್ರಮ:
- ಮೊದಲ ಪರೀಕ್ಷೆ: ಶುಕ್ರವಾರ ನವೆಂಬರ್ 21 – ನವೆಂಬರ್ 25 (ಬೆಳಿಗ್ಗೆ 2.30) – ಆಪ್ಟಸ್ ಕ್ರೀಡಾಂಗಣ, ಪರ್ತ್
- ಎರಡನೇ ಟೆಸ್ಟ್: ಗುರುವಾರ ಡಿಸೆಂಬರ್ 4 – ಡಿಸೆಂಬರ್ 8 (ಬೆಳಿಗ್ಗೆ 4.30) – ದಿ ಗಬ್ಬಾ, ಬ್ರಿಸ್ಬೆನ್
- ಮೂರನೇ ಪರೀಕ್ಷೆ: ಬುಧವಾರ ಡಿಸೆಂಬರ್ 17 – ಡಿಸೆಂಬರ್ 21 (ಬೆಳಿಗ್ಗೆ 12) – ಅಡಿಲೇಡ್ ಓವಲ್
- ನಾಲ್ಕನೇ ಟೆಸ್ಟ್: ಗುರುವಾರ ಡಿಸೆಂಬರ್ 25 – ಡಿಸೆಂಬರ್ 29 (ರಾತ್ರಿ 11.30) – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
- ಐದನೇ ಟೆಸ್ಟ್: ಜನವರಿ 3 ಭಾನುವಾರ – 7 (ರಾತ್ರಿ 11.30) – ಸಿಡ್ನಿ ಕ್ರಿಕೆಟ್ ಮೈದಾನ.
ರಂದು ಪ್ರಕಟಿಸಲಾಗಿದೆ – 8:54 am, ಸೋಮ, 27 ಅಕ್ಟೋಬರ್ 25