ಜುಲೈ, ಡಿಸೆಂಬರ್ 14: 2026ರ ವರ್ಷದ ರಜಾ ದಿನಗಳ ಕ್ಯಾಲೆಂಡರ್ ಬಿಡುಗಡೆಯಾಗಿದೆ. ಇದರ ಪ್ರಕಾರ, ಮುಂದಿನ ವರ್ಷ 15 ದಿನ ರಜೆಗಳನ್ನು ಪ್ರಕಟಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಕೂಡ ಇದೆ ರಜಾ ದಿನಗಳನ್ನು (ಸ್ಟಾಕ್ ಮಾರುಕಟ್ಟೆ ರಜಾದಿನಗಳು) ಹೊಂದಿದೆ. ಪ್ರತೀ ವಾರಾಂತ್ಯದ ಎರಡು ದಿನಗಳನ್ನು ಹಬ್ಬದ ರಜಾದಿನಗಳು ಇವು. ಹೆಚ್ಚಿನ ಸಾರ್ವತ್ರಿಕ ರಜೆಗಳು ಮಾರುಕಟ್ಟೆಗೂ ಅನ್ವಯಿಸುತ್ತವೆ.
ಮಾರ್ಚ್ ತಿಂಗಳಲ್ಲಿ 3 ರಜಾ ದಿನಗಳಿವೆ. ಅತಿಹೆಚ್ಚು ರಜೆಗಳಿರುವ ತಿಂಗಳು ಅದು. ಫೆಬ್ರುವರಿ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಜೆಗಳಿಲ್ಲ. ಷೇರು ಮಾರುಕಟ್ಟೆಗೆ ರಜೆ ಇರುವ ದಿನ ಯಾವುದೇ ಟ್ರೇಡಿಂಗ್ ನಡೆಯುವುದಿಲ್ಲ. ಬಿಎಸ್ಇ ಮತ್ತು ಎನ್ಎಸ್ಇ ಕಚೇರಿಗಳು ಬಂದ್ ಆಗಿವೆ. ಈಕ್ವಿಟಿ, ಡಿರೈವೇಟಿವ್, ಕರೆನ್ಸಿ, ಬುಲಿಯನ್ ಮಾರುಕಟ್ಟೆಗಳು ಬಂದ್ ಆಗಿವೆ.
2026 ರಲ್ಲಿ ಷೇರು ಮಾರುಕಟ್ಟೆಗೆ ರಜಾದಿನಗಳು
- ಜನವರಿ 26, ಸೋಮವಾರ: ಗಣರಾಜ್ಯೋತ್ಸವ
- ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ
- ಮಾರ್ಚ್ 26, ಗುರುವಾರ: ಶ್ರೀರಾಮನವಮಿ
- ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ
- ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ
- ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
- ಮೇ 1, ಶುಕ್ರವಾರ: ಮಹಾರಾಷ್ಟ್ರ ದಿನ
- ಮೇ 28, ಗುರುವಾರ: ಬಕ್ರೀದ್
- ಜೂನ್ 26, ಶುಕ್ರವಾರ: ಮುಹರಂ
- ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ
- ಅಕ್ಟೋಬರ್ 2, ಶುಕ್ರವಾರ: ಗಾಂಧಿ ಜಯಂತಿ
- ಅಕ್ಟೋಬರ್ 20, ಮಂಗಳವಾರ: ದಸರಾ
- ನವೆಂಬರ್ 10, ಮಂಗಳವಾರ: ದೀಪಾವಳಿ
- ನವೆಂಬರ್ 24, ಮಂಗಳವಾರ: ಗುರುನಾನಕ್ ಜಯಂತಿ
- 25, ಡಿಸೆಂಬರ್ ಶುಕ್ರವಾರ: ಕ್ರಿಸ್ಮಸ್
ಇದನ್ನೂ ಓದಿ: ಮಲ್ಟಿಬ್ಯಾಗರ್ ಷೇರುಗಳನ್ನು ಗುರುತಿಸಲು ಪಳಗಿರುವ ರಾಮದೇವ್ ಅಗರ್ವಾಲ್ ಅವರ ಟ್ರಿಕ್ಸ್ಗಳು…
ಮೇಲಿನ ರಜಾದಿನಗಳಲ್ಲದೇ, ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕೂಡ ಮಾರುಕಟ್ಟೆ ಬಂದ್ ಆಗಿರುತ್ತದೆ. ಎನ್ಎಸ್ಐ ಮತ್ತು ಬಿಎಸ್ಇ ಕಚೇರಿಗಳು ಮುಂಬೈನಲ್ಲಿರುವುದರಿಂದ ಅಲ್ಲಿ ಸ್ಥಳೀಯ ರಜೆಗಳು ಲಭ್ಯವಿರುತ್ತವೆ. ಹೀಗಾಗಿ, ಮಹಾರಾಷ್ಟ್ರ ದಿನದಂದು ಮಾರುಕಟ್ಟೆ ಬಾಗಿಲು ಹಾಕುತ್ತದೆ. ಮುಂಬೈ ಮಹಾನಗರಪಾಲಿಕೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಇದ್ದ ದಿನವೂ ಷೇರುಪೇಟೆಗೆ ರಜೆ ಇರುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ