ಕೊಪ್ಪಳ, ಜನವರಿ 26: ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಭಾನುವಾರ ನಡೆದ ಜನಸಂಪರ್ಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಕಲ್ಲೆಸೆಯಲಾಗಿದೆ. ಗ್ರಾಮದ ಅನ್ನದಾನೇಶ್ವರ ಮಠದ ಜನಗಳ ಸಮಸ್ಯೆ ಆಲಿಸಲು ಶಾಸಕರು ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ್ ರಾಯರೆಡ್ಡಿ ಭಾಷಣ ಮಾಡುತ್ತಿದ್ದಾಗ ಅವರ ಮುಂದೆಯೇ ಒಂದು ಕಲ್ಲು ಬಿದ್ದಿದೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ಶಾಸಕ ಬಸವರಾಜ್ ರಾಯ ಕೆಲಕಾಲ ಗಾಬರಿಗೊಂಡರು. ಅಲ್ಲಿದ್ದ ಜನರೂ ಕೂಡ ಆತಂಕಗೊಂಡರು. ತಕ್ಷಣದ ಪರಿಶೀಲನೆಯ ನಂತರ, ಕಲ್ಲೆಸೆದ ವ್ಯಕ್ತಿ ಮಾನಸಿಕ ಅಸ್ವಸ್ಥನೆಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಶಾಸಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಈ ಘಟನೆಯಿಂದಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನಸಂಪರ್ಕ ಕಾರ್ಯಕ್ರಮ ಸಸೂತ್ರವಾಗಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ