Headlines

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ: ಅಸಲಿಗೆ ಏನಾಯ್ತು? ಪೊಲೀಸರು ಹೇಳಿದ್ದೇನು? ಇಲ್ಲಿದೆ ಮಾಹಿತಿ

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ: ಅಸಲಿಗೆ ಏನಾಯ್ತು? ಪೊಲೀಸರು ಹೇಳಿದ್ದೇನು? ಇಲ್ಲಿದೆ ಮಾಹಿತಿ


ಬೆಂಗಳೂರು, ಜನವರಿ 5: ‘ಓಂ ಶಕ್ತಿಯೇ, ಪರಾಶಕ್ತಿಯೇ, ಒಮ್ ಶಕ್ತಿ, ಜಯ’ ಎನ್ನುತ್ತಾ ಒಮ್ಮೊಮ್ಮೆ ಶಕ್ತಿ ಮಾಲಾಧಾರಿಗಳು ಶಕ್ತಿ ದೇವಿಯ ಜಪ ಮಾಡ್ತಾ ತಮಟೆಗೆ ಹೆಜ್ಜೆ ಹಾಕುತ್ತಾ ಮೆರವಣಿಗೆಯಲ್ಲಿ ಭಕ್ತಿಯಲ್ಲಿ ಪರವಶರಾಗಿದ್ದಾರೆ. ಕ್ಷಣಾರ್ಧದಲ್ಲೇ ಇಡೀ ಪ್ರದೇಶದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಭಕ್ತರು ದಿಕ್ಕಾಪಾಲಾದರು. ಭಾನುವಾರ ರಾತ್ರಿ 8-30 ಗಂಟೆ ಸುಮಾರಿಗೆ ವಿಎಸ್ ಎಸ್ ಗಾರ್ಡನ್ ಬಳಿ ಮಾಲಾಧಾರಿಗಳು ಬರುತ್ತಿದ್ದಂತೆಯೇ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೇಟು ಓಮ್ ಶಕ್ತಿ ಮಾಲಾಧಾರಿ ಯುವತಿಯರ ತಲೆಗೆ ಬಡಿದು ನೆತ್ತರು ಹರಿದಿದೆ.

ಕಲ್ಲು ತೂರಾಟದ ಬೆನ್ನಲ್ಲೇ, ಕೆರಳಿದ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡು ಪ್ರತಿಭಟನೆ. ಅನ್ಯ ಕೋಮಿನವರು ಬೇಕಂದೇ ಕಲ್ಲೆಸೆದಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸಿ. ದಿನ ಪ್ರತಿ ಭಯದಲ್ಲೇ ಜೀವನ ನಡೆಸುತ್ತಿದ್ದರು. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು ಎಂದು ಹೇಳಿದ್ದಾರೆ.

‘ಕತ್ತಲೆಯಲ್ಲಿ ಕಲ್ಲು ತೂರಿದ್ದಾರೆ’

ಓಮ್ ಶಕ್ತಿ ಮಾಲಾಧಾರಿಗಳು ಮೆರವಣಿಗೆ ನಡೆಸುತ್ತಿದ್ದಾರೆ, ರಾತ್ರಿ 8.10 ರ ಸುಮಾರಿಗೆ ಕತ್ತಲೆಯಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಗಾಯಾಳು ಯುವತಿ ಹೇಳಿದ್ದಾರೆ. ‘ಟಿವಿ9’ ಜೊತೆ ಮಾತನಾಡಿದ ವರದರಾಜ್, ನಮ್ಮ ಮಗಳ ತಲೆ ಮೇಲೆ ಕಲ್ಲು ಬಿದ್ದಿದ್ದಾಳೆ. ಅನ್ಯಕೋಮಿನವರ ಏರಿಯಾದಿಂದ ಕಲ್ಲುಗಳು ಬಂದು ನಮ್ಮ ಮೇಲೆ ಬಿದ್ದಿವೆ. ಕತ್ತಲೆಯಾದ್ದರಿಂದ ಯಾರು ಕಲ್ಲು ತೂರಿದ್ದಾರೆ ಎಂಬುದು ನಮಗೆ ಗೊತ್ತಾಗಿಲ್ಲ.

ಎಫ್‌ಐಆರ್ ದಾಖಲು, ಆರೋಪಿಗಳ ಬಂಧನಕ್ಕೆ ಬಲೆ

ಕಲ್ಲು ತೂರಾಟಕ್ಕೆ, ಓಮ್ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ದೂರಿನನ್ವಯ ಎಫ್ ಐಆರ್ ದಾಖಲಾಗಿದೆ. ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನಾಕಾರರನ್ನು ಮನವೊಲಿಸಲು ಹರಸಾಹಸ ಪಟ್ಟರು. ಆರೋಪಿಗಳನ್ನು ಬಂಧಿಸುವ ಭರವಸೆ ಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂದು ಸಂಸದ ಪಿಸಿ ಮೋಹನ್ ಭೇಟಿ ನೀಡಿದರು. ಈ ಕ್ಷೇತ್ರದಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ಇದೆ. ತೇರು ತಗೊಂಡು ಹೋಗಬಾರದಾ? ಮಾಲೆ ಹಾಕಬಾರದಾ? ಎಂದು ಅವರು ಕಿಡಿಕಾರಿದ್ದಾರೆ.

ತನಿಖೆ ಹೇಳಿದ್ದೇನು?

ಕಲ್ಲೆಸೆತದಲ್ಲಿ ಇಬ್ಬರು ಯುವತಿಯರ ತಲೆಗೆ ಗಾಯ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಮೂದಿಸಿ ತರಿಸಿಕೊಳ್ಳಲಾಗಿದೆ, ಎಫ್ ಐ ವರದಿ ಆರ್ ದಾಖಲಿಸಲಾಗಿದೆ. ಇಬ್ಬರು ಇನ್ಸ್ ಪೆಕ್ಟರ್ ಗಳ ತಂಡ ಪ್ರಕರಣದ ತನಿಖೆ ಮಾಡುತ್ತೆ. ಆರೋಪಿಗಳನ್ನು ಬಂಧಿಸುವ ಕೆಲಸ ಆಗುತ್ತದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್.

ಇದನ್ನೂ ಓದಿ: ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು

ಕಲ್ಲುತೂರಾಟದ ಬಳಿಕ ಜೆಜೆ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಏರಿಯಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ನಿನ್ನೆ ರಾತ್ರಿಯಿಂದಲೇ 2 ಕೆಎಸ್ ಆರ್ ಪಿ ತುಕಡಿ ನಡೆಸಿದ್ದು, ಹೆಜ್ಜೆ ಹೆಜ್ಜೆಗೂ ಗಸ್ತು ತಿರುಗುತ್ತಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *