ಬೀದರ್, ಡಿಸೆಂಬರ್ 25): ಜಿಲ್ಲೆಯ ಔರಾದ್ ತಾಲ್ಲೂಕಿನ ಏಕಂಬ ಗ್ರಾಮ ಪಂಚಾಯಿತಿ (ಎಕ್ಸಾಂಬಾ ಗ್ರಾಮ ಪಂಚಾಯತ್) ಬೀದಿ ನಾಯಿಗಳ ತಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶ್ವಾನವೊಂದು (ಬೀದಿ ನಾಯಿ) ಯಾರ ಭಯವೂ ಇಲ್ಲದೇ ನೇರವಾಗಿ ಪಂಚಾಯತಿಯೊಳಗೆ ಹೋಗಿ ಪಿಡಿಓ ಚೇರ್ ಮೇಲೆ ಆಯಾ ಮಲಗಿದೆ. ಸಿಬ್ಬಂದಿ ಬೆಳಗ್ಗೆ ಕಚೇರಿ ಬಾಗಿಲು ತೆರೆದು ಹೋಗಿದ್ದಾರೆ. ಯಾರು ಇಲ್ಲದ ಶ್ವಾನ, ಯಾರೂ ಭಯ ಇಲ್ಲದೇ ನೇರವಾಗಿ ಪಂಚಾಯ್ತಿ ಕಚೇರಿಯೊಳಗೆ ನುಗ್ಗಿ ಪಿಡಿಓ ಕುರ್ಚಿ ಏರಿ ಮಲಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.