ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಜಯ್ ರಶ್ಮಿಕಾ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ದೇಶದಲ್ಲೇ ಮನೆ ಮಾಡಿದೆ. ಅಭಿಮಾನಿಗಳು ನವ ಜೋಡಿಗಳಿಗೆ ಶುಭಹಾರೈಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ನವ ಜೋಡಿಗಳಿಗೆ ಪ್ರೀತಿಯಿಂದ ಹಾರೈಸುತ್ತಿದ್ದಾರೆ. ಇನ್ನು ವಿರೋಶ್ ಜೋಡಿ ಇದೀಗ ಹೈದರಾಬಾದ್‌ನಲ್ಲಿ ಆಯೋಜಿಸಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ತಯಾರಿಯಲ್ಲಿದ್ದಾರೆ. ಇದೇ ವೇಳೆ ಹೈದರಾಬಾದ್ ಆರತಕ್ಷತೆ ಕಾರ್ಯಕ್ರಮ ಕುರಿತು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿಶೇಷ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಮಾರ್ಚ್ 4ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮದುವೆಗೆ ಪ್ರೀತಿ ತೋರಿದ ದೇಶಾದ್ಯಂತ ಅಭಿಮಾನಿ ಬಳಗಕ್ಕೆ ವಿರೋಶ್ ಜೋಡಿ ಕೈಜೋಡಿಸಿ ಮನವಿ ಮಾಡಿದೆ. ಪೊಲೀಸರ ಸೂಚನೆ, ಭದ್ರತಾ ಕಾರಣದಿಂದ ಮದುವೆ ಆಮಂತ್ರಣ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಅಭಿಮಾನಿಗಳು ನಮ್ಮ ಮದುವೆಯನ್ನು ಸಂಭ್ರಮಿಸಿದ್ದೀರಿ, ಶುಭಹಾರೈಸಿದ್ದೀರಿ. ಆದರೆ ಹಲವು ಗಣ್ಯರು ಆಗಮಿಸುತ್ತಿರುವ ಕಾರಣ ಸುರಕ್ಷತಾ ಕಾರಣದಿಂದ ಎಲ್ಲರಿಗೂ ಆರತಕ್ಷತೆಯಲ್ಲಿ ಭಾಗವಹಿಸಲು ಅವಕಾಶ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಅಭಿಮಾನಿಗಳು ಸಹಕರಿಸಬೇಕು. ವಿರೋಶ್ ರೆಸೆಪ್ಶೆನ್ ಆಮಂತ್ರ ಪತ್ರಿಕೆ ಇದ್ದವರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.ಪ್ರತಿಷ್ಠಿತ ರಾಜಕಾರಣಿಗಳು, ಗಣ್ಯರು, ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಹಿಂದಿ ಸೇರಿದಂತೆ ಸಿನಿಮಾ ಕ್ಷೇತ್ರದ ಗಣ್ಯರು, ಸೆಲೆಬ್ರೆಟಿಗಳು ಪಾಲ್ಗೊಳ್ಳುತ್ತಿದ್ದಾರೆ. ಕಠಿಣ ಸೂಚನೆ ಮೇರೆಗೆ ಅತಿಥಿಗಳ ಪಟ್ಟಿಯಲ್ಲಿ ಮತ್ತಷ್ಟು ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ಸಹಕರಿಸಬೇಕು. ನಿಮ್ಮ ಪ್ರೀತಿ, ಆಶೀರ್ವಾದ ಹೀಗೆ ಇರಲಿ ಎಂದು ವಿರೋಶ್ ಜೋಡಿ ಮನವಿ ಮಾಡಿದ್ದಾರೆ.

ಆಮಂತ್ರಣವಿಲ್ಲದ ಅತಿಥಿಗಳು ಕಾರ್ಯಕ್ರಮದ ಸ್ಥಳದತ್ತ ಧಾವಿಸಬೇಡಿ, ಭೇಟಿ ನೀಡಬೇಡಿ, ಇದು ಸುರಕ್ಷತಾ ದೃಷ್ಟಿಯಿಂದ ಕೈಗೊಂಡಿರುವ ಕ್ರಮಗಳಾಗಿದೆ. ಪೊಲೀಸರು, ಸ್ಥಳೀಯ ಭದ್ರತಾ ಪಡೆಗಳು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಕಾರ್ಯಕ್ರಮವನ್ನು ಯಾವುದೇ ಗೊಂದಲವಿಲ್ಲದೆ, ಸುಸೂತ್ರವಾಗಿ ನಡೆಸಲು ನಾವು ಬದ್ಧರಾಗಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ವಿರೋಶ್ ಜೋಡಿ ಮನವಿ ಮಾಡಿದೆ.

ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಜನ ಸೇರುವ ನಿರೀಕ್ಷೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ. ಜೊತೆಗೆ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಕಾರ್ಯಕ್ರಮ ಸೂಸೂತ್ರವಾಗಿ ಆಯೋಜಿಸಲು ನಿರ್ಬಂಧ ಅನಿವಾರ್ಯವಾಗಿದೆ ಎಂದು ವಿರೋಶ್ ಜೋಡಿ ಹೇಳಿದೆ. ಇದೇ ವೇಳೆ ಅಭಿಮಾನಿಗಳು, ಬೆಂಬಲಿಗರ ಪ್ರೀತಿ, ಹಾರೈಕೆ, ಶುಭ ಸಂದೇಶಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಅಭಿಮಾನಿಗಳು, ಬೆಂಬಲಿಗರಿಗೆ ಕೃತಜ್ಞತೆ

Source link
ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ