
ಟೀಮ್ ಇಂಡಿಯಾ ಬ್ಯಾಕ್ಟು ಬ್ಯಾಕ್ ಟಿ20 ಗೆದ್ದುಕೊಂಡಿದೆ. 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತಂಡವು ಇದೀಗ 2026 ರಲ್ಲೂ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತವಾಗಿ ಟಿ20 ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಈ ಅಮೋಘ ಸಾಧನೆಯನ್ನು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟವರ್ಟ್ ಬ್ರಾಡ್ ಅಭಿವೃದ್ಧಿಪಡಿಸಿದೆ, ಈ ವೇಳೆ ನೀಡಿದ ಹೇಳಿಕೆಗಳು ಇದೀಗ ಎಲ್ಲರ ಗಮನ ಸೆಳೆಯುತ್ತವೆ.
ಭಾರತ ತಂಡ ಮತ್ತು ಪ್ರಪಂಚದ ಉಳಿದ ಭಾಗಗಳ ತಂಡಗಳ ನಡುವಿನ ಅಂತರವು ದೊಡ್ಡದಾಗುತ್ತಲೇ ಇದೆ. ಈ ಮೂಲಕ ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಚಾಪು ಹೊತ್ತಿದ್ದಾರೆ. ಈ ಅಂತರ ಬೆಳೆಯುತ್ತಾ ಹೋಗುತ್ತಿರಲು ಸ್ಟವರ್ಟ್ ಬ್ರಾಡ್ ಕೆಲವು ಕಾರಣಗಳನ್ನು ಮುಂದಿಟ್ಟಿದ್ದಾರೆ.
- ತಂಡದ ಆಳ: ಭಾರತದ ಬೆಂಚ್ ಸ್ಟ್ರೆಂಟ್ ಎಷ್ಟು ಪ್ರಬಲವಾಗಿದೆ ಎಂದರೆ, ಭಾರತದ ಯಾವುದೇ ಆಟಗಾರ ವಿಶ್ವದ ಇತರ ಯಾವುದೇ ತಂಡದಲ್ಲಿ ನೇರವಾಗಿ ಸ್ಥಾನ ಪಡೆಯಬಲ್ಲರು ಎಂದು ಸ್ಟವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
- ಐಪಿಎಲ್ ಪ್ರಭಾವ: ಯುವ ಆಟಗಾರರು ಪದಾರ್ಪಣೆ ಮಾಡುವ ಮೊದಲೇ ವಿಶ್ವದ ಶ್ರೇಷ್ಠ ಆಟಗಾರರ ವಿರುದ್ಧ ಆಡಿ ಒತ್ತಡವನ್ನು ಕಲಿಯುತ್ತಿದ್ದಾರೆ. ಇದು ಭಾರತ ಮತ್ತು ಉಳಿದ ದೇಶಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಿಸುತ್ತಿದೆ.
- ಜಸ್ಪ್ರೀತ್ ಬುಮ್ರಾ: ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳು ಕ್ರಿಕೆಟ್‌ನ ಇತಿಹಾಸದಲ್ಲೇ ಶ್ರೇಷ್ಠರು ಎಂದು ಬಣ್ಣಿಸಿದ ಬ್ರಾಡ್, ಭಾರತದ ಬೌಲಿಂಗ್ ಈಗ ಅಭೇದ್ಯ ವಿಭಾಗ.
ಈ ಟೀಮ್ ಇಂಡಿಯಾ ಬಲಿಷ್ಠವಾಗಲು ಐಪಿಎಲ್ ಪ್ರಮುಖ ಕಾರಣ ಎಂದಿರುವ ಸ್ಟವರ್ಟ್ ಬ್ರಾಡ್, ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ನಿಮ್ಮ ಮೇಲೆ ಪ್ರಶ್ನೆಗಳು ಏಳುತ್ತವೆ. ಹೀಗಾಗಿ ನೀವು ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲೇ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಒಗ್ಗಿಕೊಂಡಿರುತ್ತೀರಿ. ಇದಕ್ಕೆಲ್ಲಾ ಮುಖ್ಯ ಕಾರಣ ಐಪಿಎಲ್ ಎಂದು ಭಾವಿಸುತ್ತೇನೆ.
ಬೃಹತ್ ಪ್ರದರ್ಶನ ಮತ್ತು ಹೆಚ್ಚಿನ ನಿರೀಕ್ಷೆಗಳ ನಡುವೆ ಆಡುವ ಈ ಅನುಭವವು ಭಾರತೀಯ ಆಟಗಾರರಿಗೆ ದೊಡ್ಡ ಬಲವಾಗಿದೆ. ಈ ಎಲ್ಲಾ ಅನುಭವಿ ಯುವ ಆಟಗಾರರು ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುತ್ತಿದ್ದಾರೆ. ಇದುವೇ ಇತರ ತಂಡಗಳಿಂದ ಟೀಮ್ ಇಂಡಿಯಾವನ್ನು ಭಿನ್ನವಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ಟಿ20 ಗೆದ್ದ ಭಾರತ ತಂಡವನ್ನೇ ನೋಡಿ, ಆ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಮತ್ತು ಶ್ರೇಷ್ಠ ರಿಷಭ್ ಪಂತ್ ಅವರಂತಹ ಆಟಗಾರರು ಇಲ್ಲ. ಇದು ಟೀಮ್ ಇಂಡಿಯಾದ ಸ್ಟ್ರೆಂಟ್ ಅನ್ನು ಎತ್ತಿ ತೋರಿಸುತ್ತದೆ.
ಯಶಸ್ವಿ ಜೈಸ್ವಾಲ್ ಟೆಸ್ಟ್ ಮತ್ತು ಟಿ 20 ಎರಡರಲ್ಲೂ ಅದ್ಭುತ ದಾಖಲೆಯನ್ನು ಹೊಂದಿದ್ದರೂ ಸಹ ಅವರಿಗೆ ಭಾರತ ಈ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಭಾರತದ ಪ್ರತಿಭೆ ಅಗಾಧತೆಗೆ ಸಾಕ್ಷಿ ಸ್ಟವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅನುಭವಿ ಆಟಗಾರನಾಗಿ ಭಾರತ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ “ಅತ್ಯಂತ ಅಪಾಯಕಾರಿ ಆಟಗಾರ” ಎಂದು ಬಣ್ಣಿಸಿದ್ದಾರೆ. ಪಾಂಡ್ಯ ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಅತಿ ಸುಲಭವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯವು ಯಾವುದೇ ತಂಡಕ್ಕೆ ಕಂಟಕವಾಗಬಲ್ಲದು ಎಂದು ಹೇಳಿದ್ದಾರೆ.
ಮೊದಲೇ ಹೇಳಿದಂತೆ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪಾಲಿನ ಗೇಮ್ ಚೇಂಜರ್. ಅವರಂತಹ ಬೌಲರ್ ತಂಡದಲ್ಲಿರುವುದು ಟೀಮ್ ಇಂಡಿಯಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಹೊಸ ಗರ್ಲ್ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!
ಈ ಕಾರಣಕ್ಕಾಗಿ ಭಾರತ ಮತ್ತು ಪ್ರಪಂಚದ ಇತರ ದೇಶಗಳ ನಡುವಿನ ಅಂತರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವುದು ಇತರ ತಂಡಗಳಿಗೆ ಕಷ್ಟವಾಗುತ್ತದೆ ಎಂಬುದು ಸ್ಟವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದೆ.