ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ಲೈಂಗಿಕ ಸಂಪರ್ಕಕ್ಕೂ ಮೊದಲೇ ಅಲರ್ಟ್ ನೀಡುವ ಈ ಕಾ0ಡೋಮ್ ಆವಿಷ್ಕಾರ ಮಾಡಿದ್ದು 14ರ ಹರೆಯದ ವಿದ್ಯಾರ್ಥಿಗಳು ಅನ್ನೋದೇ ವಿಶೇಷ. ಯಾವ ಲೈಂಗಿಕ ರೋಗಕ್ಕೆ ಯಾವ ಬಣ್ಣ?

ಸುರಕ್ಷಿಕ ಲೈಂಗಿಕ ಕ್ರಿಯೆಗೆ ಕಾ0ಡೋಮ್ ಬಳಕೆಗೆ ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆದರೂ ಹೆಚ್‌ಐವಿ ಸೇರಿದಂತೆ ಹಲವು ಲೈಂಗಿಕ ರೋಗಗಳು ಹರಡುವ ಆತಂಕ ಇದ್ದೇ ಇದೆ. ಇದಕ್ಕೆ ಪರಿಹಾರ ಎಂಬಂತೆ ಬಣ್ಣ ಬದಲಿಸುವ ಕಾ0ಡೋಮ್ ಆವಿಷ್ಕಾರ ಮಾಡಲಾಗಿದೆ. ಈ ಕಾ0ಡೋಮ್ ಲೈಂಗಿಕ ರೋಗ ಸಮಸ್ಯೆಗಳಿದ್ದರೆ ತಕ್ಷಣ ಬಣ್ಣ ಬದಲಿಸುತ್ತೆ. ಈ ಮೂಲಕ ಅಲರ್ಟ್ ಸೂಚನೆ ನೀಡುತ್ತದೆ.

ಕಾಂಡೋಮ್‌ನ ಮೇಲ್ಬಾಗದಲ್ಲಿ ವಿಶೇಷ ಪದರ ಒಂದನ್ನು ನಿರ್ಮಾಣ ಮಾಡಲಾಗಿದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಸ್ ಸಂಪರ್ಕಕ್ಕೆ ಬಂದಾಗ ಕಾಂಡೋಮ್ ಬಣ್ಣವನ್ನು ಬದಲಿಸಲಿದೆ. ಈ ಮೂಲಕ ಕಾಂಡೋಮ್ ಎಚ್ಚರಿಕೆ ಸಂದೇಶ ರವಾನಿಸಲಿದೆ. ಇಷ್ಟೇ ಅಲ್ಲ ಯಾವ ವೈರಸ್ ಸಮಸ್ಯೆಗೆ ಯಾವ ಬಣ್ಣ ಅನ್ನೋದನ್ನು ಈ ಕಾಂಡೋಮ್ ಪ್ಯಾಕೆಟ್‌ನಲ್ಲೇ ನೀಡಲಾಗಿದೆ.

ಈ ಬಣ್ಣ ಬದಲಿಸುವ ಕಾಂಡೋಮ್ ಹಲವು ರೀತಿಯಲ್ಲಿ ಬಳಕೆದಾರನಿಗೆ ಸೂಚನೆ ನೀಡುತ್ತದೆ. ಈ ಲೈಂಗಿಕ ಕ್ರಿಯೆ ಉತ್ತಮವೇ, ಸುರಕ್ಷಿತವೇ ಅನ್ನೋ ಸೂಚನೆಯನ್ನು ಇದು ನೀಡಲಿದೆ. ಈ ಪೈಕಿ

ಹಸಿರು ಬಣ್ಣಕ್ಕೆ ತಿರುಗಿದರೆ: ಕ್ಲಮೈಡಿಯ (Chlamydia) ಸಮಸ್ಯೆ

ಹಳದಿ ಬಣ್ಣಕ್ಕೆ ತಿರುಗಿದರೆ: ಹರ್ಪೀಸ್ (Herpes) ಸಮಸ್ಯೆ

ನೀಲಿ ಬಣ್ಣಕ್ಕೆ ತಿರುಗಿದರೆ: ಸಿಫಿಲಿಸ್ (Syphilis) ಸಮಸ್ಯೆ

ನೇರಳೆ ಬಣ್ಣಕ್ಕೆ ತಿರುಗಿದರೆ: ಹೂಮನ್ ಪ್ಯಾಪಿಲೋಮವೈರಸ್ (HPV) ಸಮಸ್ಯೆ

ಈ ಕಾಂಡೋಮ್ ಪ್ರಮುಖ ಉದ್ದೇಶ, ಲೈಂಗಿಕ ಸಂಪರ್ಕ ಬೆಳೆಸುವಾಗ ಕಾಂಡೋಮ್ ಸುರಕ್ಷತೆ ಮಾತ್ರವಲ್ಲ, ಸುರಕ್ಷಿತ ಅಂದರೆ ಲೈಂಗಿಕ ರೋಗ ರಹಿತ ವ್ಯಕ್ತಿಗಳ ಜೊತೆ ಮಾಡಿ ಅನ್ನೋ ಉದ್ದೇಶದಿಂದ ಈ ಬಣ್ಣ ಬದಲಿಸುವ ಕಾಂಡೋಮ್ ಅಭಿವೃದ್ಧಿಪಡಿಸಲಾಗಿದೆ. ತಕ್ಷಣಕ್ಕೆ ಲೈಂಹಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಂಡೋಮ್ ಮಾಹಿತಿ ನೀಡಲಿದೆ.

ಈ ಬಣ್ಣ ಬದಲಿಸುವ ಕಾಂಡೋಮ್‌ನ್ನು ಲಂಡನ್ ನ್ಯೂಟನ್ ಅಕಾಡೆಮಿ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಚಿರಾಗ್ ಶಾ, ಧಾನ್ಯಾಲ್ ಆಲಿ ಹಾಗೂ ಮುವಾಜ್ ನವಾಜ್ ಎಂಬ ಮೂವರು 14ರ ಹರೆಯದ ವಿದ್ಯಾರ್ಥಿಗಳು ಅಭಿವೃದ್ಧಿಪಿಡಿಸಿದ್ದಾರೆ. ಈ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಕೆಲ ಪ್ರಶಸ್ತಿ ಗೌರವ ನೀಡಲಾಗಿದೆ.

ಈ ಬಣ್ಣ ಬದಲಿಸುವ ಕಾಂಡೋಮ್ ಅಬಿವೃದ್ಧಿಪಡಿಸಿದ್ದು 2015ರಲ್ಲಿ. ಬಳಿಕ ಹಲವು ಸಂಶೋಧನೆಗಳು ನಡೆದಿದೆ. ಸುರಕ್ಷತೆ ಪರಿಕಲ್ಪನೆ ಅಡಿಯಲ್ಲಿ ತಯಾರಾದ ಈ ಕಾಂಡೋಮ್ ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಇಷ್ಟೇ ಅಲ್ಲ ಈ ಕಾಂಡೋಮ್ ಅಡ್ಡ ಪರಿಣಾಮಗಳನ್ನು ಬೀರುತ್ತದೆ ಅನ್ನೋ ಕುರಿತು ಸಂಶೋಧನೆಗಳು ಮುಂದುವರಿದಿದೆ. ಸದ್ಯ ಕಾನ್ಸೆಪ್ಟ್ ಕಾಂಡೋಮ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

ಮಾರುಕಟ್ಟೆಯಲ್ಲಿ ಲಭ್ಯವಿದೆಯಾ

Source link
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು