ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ Su From So ಭಾನು: ಬೇಬಿ ಬಂಪ್​ ಕ್ಯೂಟ್​ ಫೋಟೋಶೂಟ್​

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ Su From So ಭಾನು: ಬೇಬಿ ಬಂಪ್​ ಕ್ಯೂಟ್​ ಫೋಟೋಶೂಟ್​

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ Su From So ಭಾನು: ಬೇಬಿ ಬಂಪ್​ ಕ್ಯೂಟ್​ ಫೋಟೋಶೂಟ್​

’ಸು ಫ್ರಂ ಸೋ’ ಸಿನಿಮಾದ ಭಾನು ಪಾತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಸಂಧ್ಯಾ ಅರಕೆರೆ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

2025ರಲ್ಲಿ ಬ್ಲಾಕ್​ ಬಸ್ಟರ್​ ಸಿನಿಮಾ ಸು ಫ್ರಂ ಸೋ (Su From So)ದಲ್ಲಿ ಭಾನು ಪಾತ್ರಧಾರಿಯಾಗಿ ಮಿಂಚಿರೋ ನಟಿ ಸಂಧ್ಯಾ ಅರಕೆರೆ. ಸುಲೋಚನ ಮಗಳು ಭಾನು ಪಾತ್ರದಲ್ಲಿ ಅಭಿನಯಿಸಿದ್ದ ಸಂಧ್ಯಾ ಅವರ ನಟನೆಗೆ ಮನಸೋಲದವರೇ ಇಲ್ಲ. ಇದಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಪ್ಯಾನ್​ ಇಂಡಿಯಾ ದಾಟಿ ವಿದೇಶಗಳಲ್ಲಿ ಸದ್ದು ಮಾಡಿದ್ದ ಈ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ ನಟಿ.

ನಟಿ ಸಂಧ್ಯಾ ಅರಕೆರೆ (Sandhya Arakere) ಅವರು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಚೆಗೆ ಅವರು ಅದ್ಧೂರಿಯಾಗಿ ಸೀಮಂತ ಮಾಡಿಕೊಂಡು ಅದರ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಇದೀಗ ಅವರು ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

ಕಪ್ಪು ಬಣ್ಣದ ದಿರಿಸಿನಲ್ಲಿ ನಟಿ ಕ್ಯೂಟ್​ ಆಗಿ ಕಾಣಿಸುತ್ತಿದ್ದಾರೆ. ತಮ್ಮ ಪತಿಯ ಜೊತೆ ಇವರು ಫೋಟೋಶೂಟ್​ ಮಾಡಿಸಿಕೊಂಡಿದ್ದು, ಅಭಿಮಾನಿಗಳಿಂದ ಶುಭ ಹಾರೈಕೆಗಳ ಸುರಿಮಳೆಯಾಗುತ್ತಿದೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ರಂಗಭೂಮಿ ಕಲಾವಿದೆಯಾಗಿರುವ ಸಂಧ್ಯಾ ಅರಕೆರೆ (Sandhya Arakere) ಕನ್ನಡದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದರು. ಆದರೆ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ಸು ಫ್ರಮ್ ಸೋ ಸಿನಿಮಾ. ಈ ಸಿನಿಮಾದಲ್ಲಿ ಭಾವುಕ ಪಾತ್ರದ ಮೂಲಕ ಗಮನ ಸೆಳೆದ ಸಂಧ್ಯಾ ಅವರ ನಟನೆ ಹಾಗೂ ಭಾನು ಮತ್ತು ರವಿಯಣ್ಣನ ಕಾಂಬಿನೇಶನ್ ಜನ ಇಷ್ಟ ಪಟ್ಟಿದ್ದರು.

ಸು ಫ್ರಮ್ ಸೋ ರಾಜ್ ಬಿ ಶೆಟ್ಟಿ (Raj B Shetty) ಅವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಇದೀಗ ಅವರ ಲೈಟರ್ ಬುದ್ಧ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಲಿರುವ ಮತ್ತೊಂದು ಕಿರುಚಿತ್ರದಲ್ಲಿ ಸಂಧ್ಯಾ ಅರಕೆರೆ ನಟಿಸಿದ್ದಾರೆ. ರಘು ಆರವ್ ನಿರ್ದೇಶನ ಮಾಡಲಿರುವ ಹಿಂದೆ ಗಾಳಿ ಮುಂದೆ ಮತ್ತೆ ಕಿರುಚಿತ್ರ ಯೂಟ್ಯೂಬಲ್ಲಿ ರಿಲೀಸ್ ಆಗಿತ್ತು.

Source link

Leave a Reply

Your email address will not be published. Required fields are marked *