Headlines

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿ: ಕನಿಷ್ಠ 101 ಮಂದಿ ಕಣ್ಮರೆ

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿ: ಕನಿಷ್ಠ 101 ಮಂದಿ ಕಣ್ಮರೆ


ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್ಮರೀನ್ ದಾಳಿಚಿತ್ರದ ಕ್ರೆಡಿಟ್ ಮೂಲ: @clashreport

ಕೊಲಂಬೋ, ಮಾರ್ಚ್ 4: ಇರಾನ್ ಮತ್ತು ಇಸ್ರೇಲ್ ಸೇನಾ ಸಂಘರ್ಷ (ಇರಾನ್ ಇಸ್ರೇಲ್ ಸಂಘರ್ಷ) ತೀವ್ರಗೊಂಡಿದ್ದು, ಭಾರತದ ನೆರೆಯ ಶ್ರೀಲಂಕಾ ಕರಾವಳಿಯವರೆಗೂ ಬಿಸಿ ತಟ್ಟಿದೆ. ಶ್ರೀಲಂಕಾ ಸಮುದ್ರ ಗಡಿಯೊಳಗೆ ಇರಾನ್‌ಗೆ ಸೇರಿದ ಹಡಗೊಂದಕ್ಕೆ ಬುಧವಾರ ಸಬ್‌ಮರೀನ್ ಮೂಲಕ ದಾಳಿ ನಡೆಸಲಾಗಿದೆ ಎಂದು ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ‘ರೈಟರ್ಸ್’ ವರದಿ ಮಾಡಿದೆ. ಈ ದಾಳಿಯ ಪರಿಣಾಮ ಕನಿಷ್ಠ 101 ಮಂದಿ ಕಣ್ಮರೆ ಹೊಂದಿದ್ದು, 78 ಮಂದಿ ಕಾಣಿಸಿಕೊಂಡಿದ್ದಾರೆ.

ದಾಳಿಯಿಂದ ಹಡಗಿಗೆ ತೀವ್ರ ಹಾನಿಯಾಗಿ ಮುಳುಗಿದೆ. ಇದಕ್ಕೂ ಮೊದಲು, ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿ, ಮುಳುಗುತ್ತಿರುವ ಇರಾನ್ ಹಡಗಿನಲ್ಲಿ ಇದ್ದ 30 ಮಂದಿಯನ್ನು ಶ್ರೀಲಂಕಾ ಸೇನೆಯ ರಕ್ಷಣೆ ಮಾಡಿದೆ ಎಂದು ತಿಳಿಸಿತ್ತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ದಾಳಿ ಹಿನ್ನಲೆ ಮತ್ತು ಕಾರಣಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ.

(ಸುದ್ದಿ ಅಪ್ಡೇಟ್ ಆಗುತ್ತಿದೆ)

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:13 pm, ಬುಧವಾರ, 4 ಮಾರ್ಚ್ 26



Source link

Leave a Reply

Your email address will not be published. Required fields are marked *