ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ ನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಸಹ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಡಿಸೆಂಬರ್ 25 ರಂದು ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಟ್ರೈಲರ್ ಡಿಸೆಂಬರ್ 7ಕ್ಕೆ ಬಿಡುಗಡೆ ಆಗಲಿದೆ.
ಸುದೀಪ್ (ಸುದೀಪ್) ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸುದೀಪ್ ನಿರತ ಇದ್ದಾರೆ. ಸಿನಿಮಾದಲ್ಲಿ ನಟಿಸಿರುವ ಜೊತೆಗೆ ಸಿನಿಮಾಕ್ಕೆ ಸಹ ನಿರ್ಮಾಪಕರೂ ಆಗಿದ್ದಾರೆ ಕಿಚ್ಚ ಸುದೀಪ್. ಸೂಪರ್ ಹಿಟ್ ‘ಮ್ಯಾಕ್ಸ್’ ಸಿನಿಮಾದ ತಂತ್ರಜ್ಞರ ತಂಡವೇ ‘ಮಾರ್ಕ್’ ಸಿನಿಮಾಕ್ಕೂ ಸಹ ಜೊತೆಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನ ಇರುವಂತೆಯೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಎಂದು ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾರ್ನಿಂಗ್ ಶೋಗಳು ಹೌಸ್ ಫುಲ್ ಆಗುತ್ತಿವೆ.
‘ಮಾರ್ಕ್’ ಸಿನಿಮಾದ ಫ್ಯಾನ್ಸ್ ಶೋ ಟಿಕೆಟ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಬೆಂಗಳೂರು, ಮೈಸೂರು ಈ ಕೆಲವು ಕಡೆಗಳಲ್ಲಿ ‘ಮಾರ್ಕ್’ ಸಿನಿಮಾದ ವಿಶೇಷ ಪ್ರದರ್ಶನ ಬೆಳಿಗ್ಗೆ 6 ಗಂಟೆಯವರೆಗೆ ಪ್ರದರ್ಶನ ನಡೆಯುತ್ತಿದೆ, ಪ್ರಸ್ತುತ ಈ ವಿಶೇಷ ಪ್ರದರ್ಶನದ ಶೋನ ಟಿಕೆಟ್ಗಳು ಮಾತ್ರವೇ ಮುಂಗಡ ಬುಕಿಂಗ್ಗೆ ಲಭ್ಯವಿದೆ. ವೀರೇಶ್, ಸಿದ್ಧೇಶ್ವರ, ನವರಂಗ್, ಸಂತೋಷ್, ಶ್ರೀನಿವಾಸ್, ಸೌಂದರ್ಯ (ದೊಡ್ಡಬಳ್ಳಾಪುರ) ಈ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಮಾರ್ನಿಂಗ್ ಶೋ ಟಿಕೆಟ್ ಸಂಪೂರ್ಣವಾಗಿ ಬುಕ್ ಆಗಿದೆ.
ಇದನ್ನೂ ಓದಿ:ಅಪ್ಪನ ಸಿನಿಮಾ ಮೂಲಕ ವಿತರಕಿ ಆದ ಸುದೀಪ್ ಪುತ್ರಿ
ಬೆಂಗಳೂರಿನಲ್ಲಿ ಮಾತ್ರವೇ ಅಲ್ಲ, ಮೈಸೂರು, ಚಿತ್ರದುರ್ಗ, ತುಮಕೂರು ಇನ್ನೂ ಕೆಲವು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳ ಚಿತ್ರಮಂದಿರಗಳಲ್ಲಿ ‘ಮಾರ್ಕ್’ ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ಬಿಡುಗಡೆಯಾಗಿದೆ, ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಬಿಡುಗಡೆ ಆಗಿವೆ. ಅದರಲ್ಲೂ ಈ ವಿಶೇಷ ಶೋಗೆ ಟಿಕೆಟ್ ದರವನ್ನೂ ಸಹ ಹೆಚ್ಚು ಮಾಡಲಾಗಿದೆ. ವಿಶೇಷ ಶೋಗೆ 400 ರೂಪಾಯಿ, ಕೆಲವು ಚಿತ್ರಮಂದಿರಗಳಲ್ಲಿ 500 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ, ಅದೇ ದಿನ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ’45’ ಸಿನಿಮಾ ಸಹ ಬಿಡುಗಡೆಯಾಗುತ್ತಿದೆ. ಆದರೆ ಸುದೀಪ್ ಹಾಗೂ ತಂಡ ಜಾಣತನದಿಂದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು ಬೆಳಿಗ್ಗೆ 6 ಗಂಟೆಯ ವಿಶೇಷ ಪ್ರದರ್ಶನವನ್ನು ಸಹ ಮಾಡುವುದರ ಮೂಲಕ ಹೆಚ್ಚಿನ ಪ್ರದರ್ಶನದ ಭರವಸೆ ಮೂಡಿಸಿದ್ದಾರೆ. ‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:22 pm, ಶನಿ, 20 ಡಿಸೆಂಬರ್ 25