ಸಿನಿಮಾಗಳ ರೀತಿಯೇ ಬಿಗ್‌ಬಾಸ್ ಸಹ ಸುದೀಪ್ (ಸುದೀಪ್) ಅವರ ವೃತ್ತಿ ಜೀವನದ ಭಾಗವಾಗಿದೆ. ಸುದೀಪ್ ಅವರು ಸಿನಿಮಾ ಪ್ರಚಾರಕ್ಕೆ ಹೋದರೂ ಸಹ ಬಿಗ್ಬಾಸ್ ಬಗ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ಆಡಿದ ಮಾತುಗಳ ಬಗ್ಗೆ ನಡೆಯುತ್ತಿರುತ್ತವೆ. ಸುದೀಪ್ ಮಾತನಾಡಿದ್ದು ಸರಿ, ತಪ್ಪು ಹೀಗೆ ವಿಶ್ಲೇಷಣೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸುದೀಪ್ ಅವರು, ಈ ಸೀಸನ್ ನ ಬಿಗ್ ಬಾಸ್ ನಲ್ಲಿ ಸ್ಪರ್ಧಿಯೊಬ್ಬರು ಆಡಿದ ಮಾತೊಂದರ ಬಗ್ಗೆ ಏಕೆ ವಿಶ್ಲೇಷಣೆ ಮಾಡಿಲ್ಲ ಎಂದು ವಿವರಿಸಿದ್ದಾರೆ.
ಬಿಗ್ಬಾಸ್ ಆರಂಭವಾದ ಕೆಲ ವಾರದ ಬಳಿಕ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಯ ಜೊತೆ ಜಗಳ ಆಡುತ್ತಾ, ‘ನಿನ್ನ ಬಟ್ಟೆ, ನಿನ್ನ ಅವತಾರ ನೋಡಿದರೆ ನೀನು ಎಲ್ಲಿಂದ ಬಂದವಳು, ನೀನೊಬ್ಬ ‘ಎಸ್’ ಎಂದಿದ್ದರು. ಅಶ್ವಿನಿಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ರಕ್ಷಿತಾ ವಿರುದ್ಧ ಜಾತಿ ನಿಂದಕ ಪದ ಬಳಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ರಕ್ಷಿತಾರನ್ನು ‘ಸ್ಲಂ’ ಎಂದು ಕರೆಯಲಾಗಿದೆ. ಅಸಲಿಗೆ ಅಶ್ವಿನಿ ಅವರು ರಕ್ಷಿತಾ ಅವರ ಬಗ್ಗೆ ಅವಮಾನಕರ, ಕೀಳು ಪದವನ್ನೇ ಬಳಸಿದ್ದಾರೆಂದು ನೋಡುಗರಿಗೆ ಖಾತ್ರಿಯಾಗಿದೆ.
ಅಶ್ವಿನಿ ಅವರು ರಕ್ಷಿತಾರ ಮೇಲೆ ಜಗಳ ಮಾಡಿದ್ದು, ನಿಂದಿಸಿರುವುದನ್ನು ಖಂಡಿಸಿ, ಸುದೀಪ್ ಮಾತನಾಡಿದ್ದರು. ಆದರೆ ‘ಎಸ್’ ಪದದ ಬಗ್ಗೆ ಹೆಚ್ಚಾಗಿ ಚರ್ಚೆ ಆಗಲಿಲ್ಲ. ಈ ಬಗ್ಗೆ ಕೆಲವು ಆಕ್ಷೇಪ ಇದೆ. ಅಂದ್ಹಾಗೆ ‘ಮಾರ್ಕ್’ ಸಿನಿಮಾ ಪ್ರಚಾರದಲ್ಲಿರುವ ಸುದೀಪ್, ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಒಂದೊಮ್ಮೆ ನಾನು ‘ಎಸ್’ ಎಂದು ಏಕೆ ಹೇಳಿದ್ದೀರಿ ಎಂದು ಕೇಳಿದೆ ಎಂದುಕೊಳ್ಳಿ, ಆಗ ಆ ಸ್ಪರ್ಧಿ, ‘ಇಲ್ಲ ಅಣ್ಣ, ಎಸ್ ಎಂದರೆ ಸಿಲ್ಲಿ, ಆ ಹುಡುಗಿ ರಕ್ಷಿತಾ ತುಂಬ ಸಿಲ್ಲಿ, ನಾನು ‘ಎಸ್’ ಅಂದೆ’ ಅಂದೆ. ಆಗ ನಾನೇನು ಮಾಡಬೇಕು, ಇಲ್ಲ, ಇಲ್ಲ, ‘ಎಸ್’ ಎಂದರೆ ನನ್ನ ತಲೆಯಲ್ಲಿ ಬೇರೆ ಏನೋ ಅರ್ಥವಿದೆ, ನನ್ನ ತಲೆಯಲ್ಲಿ ಇರುವ ಆ ಕೆಟ್ಟ ಅರ್ಥವನ್ನೇ ನೀವು ಬಳಸಿದರೆ ನೀವು ಹೇಳಲು ಸಾಧ್ಯವೇ? ಏಕೆಂದರೆ ಹೇಳಿದವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ನೋಡುಗರಿಗೆ ನಮಗೆ ಗೊತ್ತಿದೆ ಅದು ಏನೆಂಬುದು’ ಸುದೀಪ್.
ಇದನ್ನೂ ಓದಿ:ಬಿಗ್ಬಾಸ್ ಗೌತಮಿ, ರಿಷಿ ನಟನೆಯ ಹೊಸ ಸಿನಿಮಾ ಮುಹೂರ್ತ: ವಿಡಿಯೋ
‘ಆ ‘ಟಿ ಗಾಂಚಾಲಿ’ ವಿಷಯದಲ್ಲಿಯೂ ಆಯ್ತು. ‘ಟಿ ಗಾಂಚಲಿ’ ಎಂದರೆ ಏನೆಂದು ನಮಗೆಲ್ಲ ಗೊತ್ತು, ಆದರೆ ನಾನು ಪ್ರಶ್ನೆ ಮಾಡಿದರೆ ಆ ವ್ಯಕ್ತಿ ‘ಟಿ ಗಾಂಚಲಿ’ ಎಂದರೆ ತಲೆ ಗಾಂಚಲಿ ಎಂದು ಹೇಳಿದರು. ಏನು ಮಾಡೋಣ, ಇಲ್ಲ ನೀವು ಇದೆ ಅರ್ಥದಲ್ಲಿಯೇ ಹೇಳಿದರೆ ಅದು ಆಗುತ್ತದೆಯೇ? ಆದರೆ ನಾನು ಅದನ್ನು ಅವರಿಗೆ ಹೇಗೆ ಅರ್ಥ ಮಾಡಿಸಬೇಕೋ ಹಾಗೆ ಮಾಡಿಸಿದ್ದೀನಿ’ ಎಂದು ಸುದೀಪ್. ಮುಂದುವರೆದು, ‘ಜನ ಮಾತನಾಡುತ್ತಾರೆ, ಆದರೆ ಅಲ್ಲಿ ವೇದಿಕೆ ಮೇಲೆ ನಿಂತು ಸ್ಪರ್ಧಿಗಳೊಟ್ಟಿಗೆ ವಾದ ಮಾಡುವುದು ಸುಲಭವಾಗಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದಾಗಿರುತ್ತದೆ’ ಎಂದು ಕಿಚ್ಚ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:17 pm, ಗುರು, 18 ಡಿಸೆಂಬರ್ 25