‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗೆಲ್ಲುವ ಕುದುರೆಯಾಗಿ ಗಿಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಅವರು ರೇಸ್‌ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅವರು ಇಷ್ಟು ದಿನಗಳ ಕಾಲ ಸುದೀಪ್ ಅವರಿಂದ ಭೇಷ್ ಎನಿಸಿಕೊಳ್ಳುವಂತೆ. ಅವರಿಗೆ ಕಿಚ್ಚನ ಚಪ್ಪಾಳೆಯೂ ಸಿಕ್ಕಿದೆ. ಆದರೆ, ಈ ವಾರ ಅವರು ಸುದೀಪ್ ಕೈಯಿಂದ ಪಾಠ ಹೇಳಿಸಿಕೊಂಡಿದ್ದಾರೆ. ಈ ಮಧ್ಯೆ ಆಟ ಹೀಗೆ ಮುಂದುವರಿದರೆ ನೀವು ಮನೆಯಿಂದ ಹೊರ ಹೋಗೋದು ಪಕ್ಕಾ ಎಂಬ ಎಚ್ಚರಿಕೆಯೂ ಅವರಿಗೆ ಸಿಕ್ಕಿದೆ.
ಆಟದಲ್ಲಿ ಇಲ್ಲ ಗಂಭೀರತೆ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಯಾವಾಗಲೂ ಫನ್ ಮಾಡುತ್ತಾ ಇರುತ್ತಾರೆ. ಟಾಸ್ಕ್ ಆಡುವಾಗ ಕೆಲವು ನಿಯಮಗಳು ಮುರಿದು ಫನ್ ಮಾಡಲು ಹೋಗಿದ್ದರು ಗಿಲ್ಲಿ. ಜೊತೆಗೆ, ಅವರ ತಪ್ಪಿನಿಂದ ಇಡೀ ತಂಡ ತೊಂದರೆ ಅನುಭವಿಸಿದೆ. ಹೀಗಾಗಿ, ಸುದೀಪ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದರು. ಈ ತಪ್ಪು ಮುಂದುವರಿದರೆ ನೀವು ಶೀಘ್ರವೇ ವೇದಿಕೆ ಮೇಲೆ ಇರ್ತೀರಾ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಟಾಸ್ಕ್ ಗಂಭೀರವಾಗಿ ಆಡುವಂತೆ ಸೂಚಿಸಿದರು.
ಬಟ್ಟೆ ಮುಟ್ಟಿದ್ದಕ್ಕೆ ಎಚ್ಚರಿಕೆ
ಹೆಣ್ಣುಮಕ್ಕಳ ಬಟ್ಟೆ ಮುಟ್ಟಿದ ವಿಚಾರದಲ್ಲೂ ಸುದೀಪ್ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಗಿಲ್ಲಿ ನಟ ಅವರು ರಿಷಾ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವರ ಬಟ್ಟೆಯನ್ನು ತೆಗೆದುಕೊಂಡು ಹೋಗಿ ಬಾತ್ ರೂ ಹೊರಭಾಗದಲ್ಲಿ ಇಟ್ಟಿದ್ದರು. ಇದರಿಂದ ಸಿಟ್ಟಾದ ರಿಷಾ ಅವರು ಗಿಲ್ಲಿಗೆ ಹೊಡೆದಿದ್ದರು. ರಿಷಾ ಮಾಡಿದ್ದು ಹೇಗೆ ತಪ್ಪೋ, ಗಿಲ್ಲಿ ಮಾಡಿದ್ದು ಕೂಡ ತಪ್ಪೇ ಎಂದರು ಸುದೀಪ್.
ಇದನ್ನೂ ಓದಿ: ನಾನು ಹೇಳಿದ್ದೆ ಹೌದಾದ್ರೆ ಬಿಗ್ ಬಾಸ್ ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್
‘ನಮ್ಮ ಮನೆಯಲ್ಲಿ ನಾವು ಹೆಣ್ಣುಮಕ್ಕಳ ಬಟ್ಟೆ ಮುಟ್ಟೋಕೆ ಹೋಗೋದಿಲ್ಲ. ಅದು ಅವರ ಖಾಸಗಿ ವಿಚಾರ. ಅದನ್ನು ಮುಟ್ಟುವ ಅಧಿಕಾರ ನಮಗೆ ಇರೋದಿಲ್ಲ’ ಎಂದು ಸುದೀಪ್ ಅವರು ಗಿಲ್ಲಿಗೆ ಹೇಳಿದ್ದಾರೆ. ಇದು ಕಾಳಜಿಯಿಂದ ನಿಮಗೆ ಹೇಳುತ್ತಿರುತ್ತದೆ ಎಂದು ಕಿಚ್ಚ. ಆ ಬಳಿಕ ಗಿಲ್ಲಿ ಅವರು ಈ ವಿಚಾರವನ್ನು ತಿದ್ದಿಕೊಳ್ಳೋದಾಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.