ವೀಕೆಂಡ್ ಎಂದರೆ ಬಿಗ್ ಬಾಸ್ ಪ್ರಿಯರಲ್ಲಿ ಉತ್ಸಾಹ ಹೆಚ್ಚುತ್ತದೆ. ಏಕೆಂದರೆ ಸುದೀಪ್ ಅವರು ವೀಕೆಂಡ್ ಅಲ್ಲಿ ಬರುತ್ತಾರೆ. ಶೋನ ನಡೆಸಿಕೊಡುತ್ತಾರೆ. ವಾರದಲ್ಲಿ ನಡೆದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಈ ವಾರವೂ ಮುಂದುವರಿಯಲಿದೆ. ವೀಕೆಂಡ್‌ನಲ್ಲಿ ಈ ವಾರ ಚರ್ಚೆ ಮಾಡಬೇಕಾದ ವಿಷಯಗಳು ಸಾಕಷ್ಟಿವೆ. ಅವು ಯಾವವು? ಇಲ್ಲಿದೆ ವಿವರ.
ಅಶ್ವಿನಿ-ರಜತ್ ಫೈಟ್
ಬಿಗ್ ಬಾಸ್ ನಲ್ಲಿ ಈ ವಾರ ನಾಮಿನೇಟ್ ಮಾಡುವಾಗ ಅಶ್ವಿನಿ ಗೌಡ ಹಾಗೂ ರಜತ್ ಕಿತ್ತಾಡಿಕೊಂಡಿದ್ದರು. ಮಾತುಗಳು ಮಿತಿಮೀರಿದ್ದವು. ಅಶ್ವಿನಿ ಗೌಡ ಅವರು ಕಚಡ ಶಬ್ದ ಬಳಕೆ ಮಾಡಿದ್ದರು. ರಜತ್ ಕೂಡ ತಾವು ಕಡಿಮೆ ಇಲ್ಲ ಎಂಬಂತೆ ಬೇಕಾಬಿಟ್ಟಿ ಮಾತನಾಡಿದ್ದರು. ಧ್ರುವಂತ್ಗೂ ಬೈದಿದ್ದರು. ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬರಬಹುದು. ಅಶ್ವಿನಿ ಗೌಡ ಇಷ್ಟು ದಿನ ಸೈಲೆಂಟ್ ಆಗಿದ್ದು, ಈ ವಾರ ನಾಲಿಗೆ ಹರಿಬಿಟ್ಟಿದ್ದರು.
ಟಾಸ್ಕ್ ವಿಷಯ
ಈ ಬಾರಿ ಎಲ್ಲರೂ ಟಾಸ್ಕ್ ಆಡಿದ್ದರು. ಈ ಬಗ್ಗೆ ಕಿಚ್ಚ ಅವರು ಮೆಚ್ಚುಗೆ ಸೂಚಿಸುವ ಸಾಧ್ಯತೆಯಿದೆ. ಆಡಿದ ವಾರ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕ ಅನೇಕ ಇವೆ. ಈ ವಾರವೂ ಅದು ಮುಂದುವರಿಯುವ ಸಾಧ್ಯತೆಯಿದೆ.
ಚೈತ್ರಾ ಉಸ್ತುವಾರಿ
ಚೈತ್ರಾ ಉಸ್ತುವಾರಿಯಲ್ಲಿ ರಜತ್ ಗೆ ಫೇವರಿಸಂ ಎಂಬ ಮಾತು ಕೇಳಿ ಬಂದಿತ್ತು. ಈ ವಿಷಯವನ್ನು ಅಶ್ವಿನಿ ಗೌಡ ಅವರು ಪ್ರಮುಖವಾಗಿ ಚರ್ಚೆಗೆ ಬಂದಿದ್ದರು. ಹೀಗಾಗಿ, ಈ ವಿಷಯ ಪ್ರಸ್ತಾಪ ಆಗಬಹುದು. ಇನ್ನು, ಬಜರ್ ಒತ್ತುವ ಕೊನೆಯ ರೌಡಂಡ್‌ನಲ್ಲಿ ಚೈತ್ರಾ ಎಡವಿದ್ದರು. ಮೊದಲು ಬಜರ್ ಒತ್ತಿದ್ದು ರಜತ್ ಆಗುತ್ತಿದೆ. ಆದರೆ, ಈ ಆಯ್ಕೆಯ ಅವಕಾಶವನ್ನು ಚೈತ್ರಾ ಅಶ್ವಿನಿಗೆ ನೀಡಿದ್ದರು. ಇಲ್ಲಿ ಎಡವಟ್ಟು ಸಂಭವಿಸಿತ್ತು.
ಕಾವ್ಯ ಅಳಿಸೋ ವಿಷಯ
ಕಾವ್ಯಾ ಶೈವ ಅವರನ್ನು ಗಿಲ್ಲಿ ಅಳಿಸಿ, ಟಾಸ್ಕ್ ನ ಪದ ಆಡಿದ್ದರು. ಈ ಬಗ್ಗೆ ಚರ್ಚೆ ಆಗಬಹುದು. ಗಿಲ್ಲಿ ಅವರು ಭಾವನಾತ್ಮಕವಾಗಿ ಎಷ್ಟು ಚಾಲೆಂಜ್ ಅನುಭವಿಸಿದರು ಎಂಬ ಬಗ್ಗೆ ಈ ವಾರ ಚರ್ಚೆ ಆಗಬಹುದು.
ಕ್ಯಾಪ್ಟನ್ಸಿ ರೂಂ
ಕ್ಯಾಪ್ಟನ್ ರೂಂ ಬಾಗಿಲನ್ನು ಸುದೀಪ್ ಅವರು ಮುಚ್ಚಿಸಿದ್ದರು. ಈ ವಾರ ಅದನ್ನು ಡೆವಿಲ್ ತೆಗೆದಿದೆ. ಈ ವಿಷಯ ಚರ್ಚೆ ಆಗಬಹುದು ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದೆ. ಆದರೆ, ಇದು ದೊಡ್ಡ ಆಟದ ಸ್ಟ್ರೆಟಜಿ ಆಗಿರಬಹುದು ಈ ವಿಷಯ ಚರ್ಚೆ ಆಗೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.