‘45’ ಮತ್ತು ‘ಮಾರ್ಕ್’ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು?

‘45’ ಮತ್ತು ‘ಮಾರ್ಕ್’ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು?


ಕನ್ನಡದ ಎರಡು ದೊಡ್ಡ ಸಿನಿಮಾಗಳು ಈ ವಾರ ಬಿಡುಗಡೆ ಆಗಿವೆ. ಶಿವರಾಜ್ ಕುಮಾರ್ (ಶಿವ ರಾಜ್ ಕುಮಾರ್), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ’45’ ಮತ್ತು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಿದೆ. ಎರಡೂ ಸಹ ಬಹಳ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಮತ್ತು ಪರಸ್ಪರ ಸ್ಪರ್ಧೆಯ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಎರಡೂ ಸಿನಿಮಾಗಳ ಕಲೆಕ್ಷನ್ ಮೇಲೆ ಖಂಡಿತವಾಗಿ ಕಣ್ಣಿದೆ. ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿರುವ ಈ ಸಿನಿಮಾಗಳು ಎರಡನೇ ದಿನ ಅಂದರೆ ಶುಕ್ರವಾರ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು?

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಗುರುವಾರ ಸುಮಾರು 7.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಸಿನಿಮಾದ ಕಲೆಕ್ಷನ್ ಕುಸಿದಿದೆ. ಮೊದಲ ದಿನ ಗುರುವಾರ ಕ್ರಿಸ್ ಮಮಸ್ ರಜೆ ಇದ್ದ ಕಾರಣ ಸಹಜವಾಗಿಯೇ ಸಿನಿಮಾದ ಕಲೆಕ್ಷನ್ ಹೆಚ್ಚಾಗಿತ್ತು. ಆದರೆ ಶುಕ್ರವಾರ 3.50 ಕೋಟಿ ರೂಪಾಯಿಗಳಿಗೆ ಬಂದಿದೆ. ವೀಕ್ ಡೇನಲ್ಲಿ ಇದು ಸಾಮಾನ್ಯ ಕಲೆಕ್ಷನ್ ಏನಲ್ಲ. ಶನಿವಾರ ಮತ್ತು ಭಾನುವಾರ ಕಲೆಕ್ಷನ್ ಮತ್ತೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ’45’ ಸಿನಿಮಾ ಬಿಡುಗಡೆ ಆದ ದಿನ ಅಂದರೆ ಗುರುವಾರ 5.50 ಸಿನಿಮಾ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಎರಡನೇ ದಿನ ಅಂದರೆ ಶುಕ್ರವಾರ ’45’ ಸಿನಿಮಾ 2.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶುಕ್ರವಾರ ವಾರದ ದಿನವಾದುದರಿಂದ ಈ ಕಲೆಕ್ಷನ್ ಕಡಿಮೆಯೇನಲ್ಲ. ಶನಿವಾರ ಮತ್ತು ಭಾನುವಾರ ಮತ್ತೆ ರಜೆ ದಿನಗಳು ಕಲೆಕ್ಷನ್ ಸಾಧ್ಯತೆ ಇದೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಭೇಟಿಯಾದ ದರ್ಶನ್ ಪುತ್ರ ವಿನೀಶ್: ವಿಡಿಯೋ ನೋಡಿ

ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದು, ಒಂದರ ಕಲೆಕ್ಷನ್ ಮೇಲೆ ಇನ್ನೊಂದು ಸಿನಿಮಾ ಪ್ರಭಾವ ಬೀರುವುದು ಸಾಮಾನ್ಯ. ಆದರೆ ಈಗ ಹೋಗುತ್ತಿರುವ ರೀತಿ ನೋಡಿದರೆ ಎರಡೂ ಸಿನಿಮಾಗಳು ಒಂದು ಉತ್ತಮ ಗಳಿಕೆ ಮಾಡುವ ಭರವಸೆ ಮೂಡಿಸಿವೆ. ಎರಡೂ ಸಿನಿಮಾಗಳ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎರಡೂ ಸಿನಿಮಾಗಳು ಉತ್ತಮ ಗಳಿಕೆ ಮಾಡುವ ದಟ್ಟ ಸಾಧ್ಯತೆ ಇದೆ.

‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದು, ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಅವರ ಸಂಗೀತವಿದೆ. ಪರಭಾಷೆಯ ಜನಪ್ರಿಯ ಕಲಾವಿದರಾದ ಯೋಗಿ ಬಾಬು, ಶೈನ್ ಟಾಮ್ ಚಾಕೊ ಇನ್ನೂ ಕೆಲವರು ನಟಿಸಿದ್ದಾರೆ. ಇನ್ನು ’45’ ಸಿನಿಮಾವನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಮೊದಲ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *