ತಮಿಳುನಾಡಿನಲ್ಲಿ ಮತ್ತೆ ಸಿನಿಮಾ (ಸಿನಿಮಾ) ರಾಜಕೀಯ ಭುಗಿಲೆದ್ದಿದೆ. ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿರುವುದು ಸಾಮಾನ್ಯರ ಕಣ್ಣಿಗೆ ಕಾಣುತ್ತಿದೆ. ಸಾಮಾನ್ಯ ಕಮರ್ಷಿಯಲ್ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡದೆ ಸಿಬಿಎಫ್ ಸಿ ಸತಾಯಿಸಿದೆ, ಪ್ರಕರಣ ಈಗ ಮೆಟ್ಟಿಲೇರಿದೆ. ‘ಜನ ನಾಯಕನ್’ ಜೊತೆಗೆ ಸ್ಪರ್ಧೆಗೆ ಬಿದ್ದಿದ್ದ ‘ಪರಾಶಕ್ತಿ’ ಸಿನಿಮಾ ನಿಗದಿತ ದಿನಾಂಕಕ್ಕೆ ಬಿಡುಗಡೆ ಆಗಿದೆ. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟ್ ಗಳು ಹರಿದಾಡುತ್ತಿವೆ. ಆದರೆ ಇದಕ್ಕೆ ವಿಜಯ್ ಫ್ಯಾನ್ಸ್ ಕಾರಣ ಎಂದು ಸಿನಿಮಾ ತಂಡ ಆರೋಪ ಮಾಡುತ್ತಿದೆ.
‘ಜನ ನಾಯಕನ್’ ತೆಲುಗು ಸಿನಿಮಾದ ರಿಮೇಕ್ ಸಿನಿಮಾ ಆಗಿದೆ. ಆದರೆ ಅದರ ಬಿಡುಗಡೆಗೆ ಅವಕಾಶ ನೀಡಿಲ್ಲ. ಆದರೆ ‘ಪರಾಶಕ್ತಿ’ ಸಿನಿಮಾ ಪಕ್ಕಾ ರಾಜಕೀಯ ವಿಷಯ ವಸ್ತುವುಳ್ಳ ಸಿನಿಮಾ ಆಗಿದೆ. ‘ಪರಾಶಕ್ತಿ’ ಸಿನಿಮಾ, ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ಕಥೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಈಗಿನ ಆಡಳಿತ ಪಕ್ಷ ಡಿಎಂಕೆಗೆ ಪೂರಕವಾದ ಹಲವು ಅಂಶಗಳು, ಆಗಿರುವ ಕಾಂಗ್ರೆಸ್ ಮತ್ತು ಈ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳೂ ಇವೆ.
ಸುಧಾ ಕೊಂಗರ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಚಿತ್ರಕತೆ ಬಿಗಿಯಾಗಿ ಇಲ್ಲದ ಕಾರಣ ಸಿನಿಮಾ ನಿರೀಕ್ಷಿತ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಆದರೆ ತಮ್ಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಳಪೆ ಪ್ರದರ್ಶನ ಕಾಣಲು ವಿಜಯ್ ಅಭಿಮಾನಿಗಳು ಕಾರಣ ಎಂದು ಪರೋಕ್ಷವಾಗಿ ಸಿನಿಮಾದ ನಿರ್ದೇಶಕಿಯೇ ಆಗಿರುವ ಸುಧಾ ಕೊಂಗರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಇದೆ ಸಿನಿಮಾದ ಕ್ರಿಯೇಟಿವ್ ಡೈರೆಕ್ಟರ್ ಸಹ ವಿಜಯ್ ಅಭಿಮಾನಿಗಳನ್ನು ದೂಷಣೆ ಮಾಡಿದ್ದರು. ಈಗ ಹೊರಗೆ ಸುಧಾ ಕೊಂಗರ ದೂಷಣೆಗೆ ಇಳಿದಿದ್ದಾರೆ.
ಇದನ್ನೂ ಓದಿ:’ಪರಾಶಕ್ತಿ’ ಸಿನಿಮಾ ಬ್ಯಾನ್ ಮಾಡಿ: ಕಾಂಗ್ರೆಸ್ ಆಗ್ರಹ, ಕಾರಣವೇನು?
‘ಅಪರಿಚಿತ ಐಡಿಯ ಹಿಂದೆ ಅಡಗಿಕೊಂಡು ಕೆಟ್ಟ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಅದನ್ನು ಎದುರಿಸಬೇಕಾಗಿದೆ. ಅದು ಎಲ್ಲಿಂದ ಬರುತ್ತಿದೆ ಎಂದು ಮೊದಲು ಆಶ್ಚರ್ಯ ಪಟ್ಟೆವು ಮತ್ತು ಅದು ಎಲ್ಲಿಂದ ಬರುತ್ತಿದೆ ಎಂದು ನಿಮಗೆ ತಿಳಿದಿದೆ. ವಿಜಯ್ ಅಭಿಮಾನಿಗಳು ಹಾಕಿರವ ಒಂದು ಪೋಸ್ಟ್ ಹೇಗಿದೆ ಎಂದರೆ, ‘ಸಿಬಿಎಫ್ ಸಿ ಸರ್ಟಿಫಿಕೇಟ್ ಪಡೆಯುವುದು ದೊಡ್ಡ ಕಷ್ಟ ಏನಲ್ಲ, ನೀವು ವಿಜಯ್ ಸಿನಿಮಾದ ಜೊತೆಗೆ ಕಾಂಪಿಟೇಶನ್ ಗೆ ಬರಲು ಯತ್ನಿಸಿದಿರಿ, ಮೊದಲು ವಿಜಯ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿ ಆ ನಂತರ ನಿಮ್ಮ ‘ಪರಾಶಕ್ತಿ’ ಸಿಗುತ್ತದೆ’ ಎಂದು ಸುಧಾ ಕೊಂಗರ ಹೇಳಿದ್ದಾರೆ. ಜೊತೆಗೆ ಇಂತಹ ಬೆದರಿಕೆಗಳನ್ನು ಖಂಡಿಸಬೇಕು ಎಂದು ಸಹ ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ