Headlines

ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ

ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ


ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಹೆಮ್ಮೆಯಾಗಿರುವ ಸರ್ಕಾರಿ ಮಾಲೀಕತ್ವದ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾ (ತಮನ್ನಾ ಭಾಟಿಯಾ) ಅವರನ್ನು ರಾಯಭಾರಿ ಅನ್ನಾಗಿ ಮಾಡಲಾಗಿದೆ. ಕನ್ನಡದವರ ಬದಲು ಪರಭಾಷಾ ನಟಿಯನ್ನು ರಾಯಭಾರಿ ಮಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ತಮ್ಮ ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಅವರನ್ನು ರಾಯಭಾರಿ ಅನ್ನಾಗಿ ಮಾಡಿದೆ. ಆದರೆ ಇದಕ್ಕೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಲ) ವಿರೋಧ ವ್ಯಕ್ತಪಡಿಸಿದೆ.

ಬಮೂಲ್ ನ ಅಧ್ಯಕ್ಷರಾಗಿರುವ ಡಿಕೆ ಸುರೇಶ್ ಅವರು ಸುಧಾರಾಣಿ ಅವರನ್ನು ಭೇಟಿಯಾಗಿ ಅವರಿಗೆ ಹೂಗುಚ್ಛ ನೀಡಿ ಅವರಿಗೆ ಬಮೂಲ್ ಉತ್ಪನ್ನಗಳ ರಾಯಭಾರಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟಿ ಸುಧಾರಾಣಿ, ‘ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ (BAMUL Nandini) ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿಯಾಗಿದೆ.

‘ಸಂಸ್ಥೆಯಿಂದ ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜವಾಗಿಯೂ ಪ್ರೇರಣಾದಾಯಕವಾಗಿತ್ತು. ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರ ಗುಣಮಟ್ಟದ, ವಿಶ್ವಾಸಾರ್ಹ ತಲುಪಿಸುವುದೇ ಮುಖ್ಯ ಉದ್ದೇಶ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳನ್ನು ಸೇರಿಸಲಾಗಿದೆ. ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಯ ಬೆಂಬಲ ನನಗೆ ಅಪಾರ ಹೆಮ್ಮೆಯಾಗುತ್ತಿದೆ’.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಆದರೆ ಸುಧಾರಾಣಿ ಅವರನ್ನು ಬಮೂಲ್, ರಾಯಭಾರಿ ಆಗಿ ನೇಮಕ ಮಾಡಿಕೊಂಡಿರುವುದಕ್ಕೆ ಮಾತೃಸಂಸ್ಥೆಯಾದ ಕೆಎಂಎಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಮೂಲ್ ಸಂಸ್ಥೆಯು ಬೈಲಾದ ವಿರುದ್ಧವಾಗಿ ರಾಯಭಾರಿ ಅವರನ್ನು ನೇಮಕ ಮಾಡಿದೆ ಎಂದು ಆರೋಪಿಸಿದ್ದು, ಈ ನೇಮಕವು ನಿಯಮ ಬಾಹಿರವಾಗಿದೆ. ಕೆಎಂಎಫ್‌ಗೆ ಮಾಹಿತಿ ಸಹ ನೀಡದೆ ರಾಯಭಾರಿ ನೇಮಕ ಮಾಡಿರುವ ಬಗ್ಗೆ ಬಮೂಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಕೆಎಂಎಫ್ ಅಧಿಕಾರಿಗಳು ಹೇಳಿದ್ದಾರೆ.

ನಂದಿನಿಯ ಉತ್ಪನ್ನಗಳಿಗೆ ಡಾ ರಾಜ್ ಕುಮಾರ್ ಪ್ರಥಮ ರಾಯಭಾರಿ ಆಗಿದ್ದರು. ರಾಜ್‌ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ನೀಡಿದ ಪ್ರಚಾರದಿಂದಾಗಿ ನಂದಿನಿಯ ಉತ್ಪನ್ನಗಳು ರಾಜ್ಯದಾದ್ಯಂತ ಮನೆಮಾತಾದವು. ಬಳಿಕ ಪುನೀತ್ ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆದರು. ಪುನೀತ್ ಅವರೂ ಸಹ ಉಚಿತವಾಗಿ ನಂದಿನಿಗೆ ರಾಯಭಾರಿ ಆಗಿದ್ದರು. ಆದರೆ ಅವರ ನೇಮಕವನ್ನು ಕೆಎಂಎಫ್ ಮಾಡಿತ್ತು, ಇದೀಗ ಬಮೂಲ್ ಸ್ವತಂತ್ರವಾಗಿ ಸುಧಾರಾಣಿ ಅವರನ್ನು ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *