ಬೆಳಗಾವಿ, ಜನವರಿ 5: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಭಾರೀ ಅಪಘಾತವೊಂದು ಕೂಡಲೆ ಅಂತರದಲ್ಲಿ ತಪ್ಪಿದೆ. ಪಟ್ಟಣದ ಸಾಯಿಮಂದಿರದ ಸಮೀಪ ಕಬ್ಬು ತುಂಬಿದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಫಾಸ್ಟ್ ಫುಡ್ ಅಂಗಡಿಯೊಂದಕ್ಕೆ ನುಗ್ಗಿದೆ. ಘಟನೆ ನಡೆಯುವ ವೇಳೆ ಅಂಗಡಿಯಲ್ಲಿ ಇದ್ದ ಜನರು ಕ್ಷಣಾರ್ಧದಲ್ಲಿ ಹೊರಗೆ ಓಡಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಟ್ರ್ಯಾಕ್ಟರ್ ಅಂಗಡಿಗೆ ನುಗ್ಗಿದ ಫಾಸ್ಟ್ ಫುಡ್ ಅಂಗಡಿಯೊಳಗಿದ್ದ ವಸ್ತುಗಳು ಹಾಗೂ ಉಪಕರಣಗಳಿಗೆ ಗಣನೀಯ ಹಾನಿಯಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ