ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ದಿ ಸ್ಕೀಮ್ (ಸುಕನ್ಯಾ ಸಮೃದ್ಧಿ ಯೋಜನೆ) ಒಂದು. ಮಹಿಳೆಯರಿಗೆಂದು ಇರುವ ಕೆಲವೇ ಸ್ಕೀಮ್‌ಗಳಲ್ಲಿ ಇದೂ ಒಂದು. ಹಾಗೆಯೇ, ಸ್ಮಾಲ್ ಸೇವಿಂಗ್ಸ್ ಸ್ಕೀಮ್‌ಗಳ ಮೇಲಕ್ಕೆ ಅತಿಹೆಚ್ಚು ಬಡ್ಡಿ ನೀಡುವ ಯೋಜನೆ ಇದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡುವ ಹೂಡಿಕೆ ಮೆಚ್ಯೂರಿಟಿ ಆಗಲು ಕನಿಷ್ಠ 15 ವರ್ಷ ಆಗುವುದರಿಂದ, ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ ಸ್ಕೀಮ್ ಇದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಸುಕನ್ಯಾ ಸಮೃದ್ಧಿ ಯೋಜನೆಯ ಸ್ಕೀಮ್ ಯಾವುದಾದರೂ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಪಡೆಯಬಹುದು. ನಿಮಗೆ ಹೆಣ್ಮಗು ಇದ್ದು ಅವಳ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇದ್ದರೆ, ಆಕೆಯ ಹೆಸರಿನಲ್ಲಿ ಇದರ ಅಕೌಂಟ್ ತೆರೆಯಬಹುದು.
ಇದನ್ನೂ ಓದಿ: ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್ ಗೂ ಸೈ, ಹೆಲ್ತ್ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ವರ್ಷಕ್ಕೆ ಕನಿಷ್ಠ ಹೂಡಿಕೆ 250 ರೂ ಮಾತ್ರ ಇರುವುದು. ಗರಿಷ್ಠ ಹೂಡಿಕೆ ವರ್ಷಕ್ಕೆ 1.5 ಲಕ್ಷ ರೂಗೆ ಸೀಮಿತವಾಗಿದೆ. ಹೂಡಿಕೆ ಅವಧಿ 15 ವರ್ಷ ಇರುತ್ತದೆ. ಬಾಲಕಿಯ ವಯಸ್ಸು 21 ವರ್ಷ ದಾಟಿದಾಗ ಹೂಡಿಕೆ ಮೆಚ್ಯೂರಿಟಿಗೆ ಬರುತ್ತದೆ. ಉದಾಹರಣೆಗೆ, ಬಾಲಕಿ ವಯಸ್ಸು 1 ವರ್ಷ ಇದ್ದಾಗ ನೀವು ಈ ಅಕೌಂಟ್ ತೆರೆದು 15 ವರ್ಷ ಹಣ ಕಟ್ಟುತ್ತೀರಿ. ನಂತರ ಕಟ್ಟಬೇಕಿಲ್ಲ. 21 ವರ್ಷ ಪೂರ್ಣಗೊಳ್ಳುವವರೆಗೂ ಅಕೌಂಟ್‌ನಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ಮುಂದುವರಿಯುತ್ತಾ ಇರುತ್ತದೆ. 21 ವಯಸ್ಸಿನ ನಂತರ ಅಕೌಂಟ್ನಿಂದ ಹಣ ಪೂರ್ಣ ಹಿಂಪಡೆಯಬಹುದು.
18 ವರ್ಷ ಬಾಲಕಿಯ ವಯಸ್ಸು ಆಕೆಯ ಶಿಕ್ಷಣ ಅಥವಾ ಮದುವೆ ವೆಚ್ಚಕ್ಕೆ ಶೇ. 50ರಷ್ಟು ಹಣವನ್ನು ವಿಟ್ಡ್ರಾ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಮಾರುಕಟ್ಟೆ ಟ್ರೆಂಡ್, ಎಕ್ಸ್‌ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು
ತಿಂಗಳಿಗೆ 1,000 ರೂ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್?
ಸುಕನ್ಯಾ ಸಮೃದ್ಧ ಯೋಜನೆ ಅಕೌಂಟ್‌ಗೆ ನೀವು ತಿಂಗಳಿಗೆ 1,000 ರೂಗಳಂತೆ ಠೇವಣಿ ಇಡುತ್ತಾ ಹೋದರೆ, ಅಂದರೆ ವರ್ಷಕ್ಕೆ 12,000 ರೂ ಹೂಡಿಕೆ ಮಾಡುತ್ತಾ ಹೋದರೆ, ಆಗ 15 ವರ್ಷಕ್ಕೆ ನೀವು ಪಾವತಿಸುವ ಹಣ 1.8 ಲಕ್ಷ ರೂ. ಸದ್ಯ ಇರುವ ಶೇ. 8.2 ಬಡ್ಡಿಯೇ ಮುಂದುವರಿಯುತ್ತದೆ ಎಂದು ಪರಿಗಣಿಸಿದರೆ 21 ವರ್ಷದ ಬಳಿಕ 3.74 ಲಕ್ಷ ರೂ ಬಡ್ಡಿ ಸೇರಿ ಒಟ್ಟು ಸಿಗುವ ರಿಟರ್ನ್ 5,54,206 ರೂ ಆಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ