Headlines

ಕೃಷ್ಣನೂರಿನಲ್ಲಿ ಸನ್ನಿ ಲಿಯೋನಿ ಶೋಗೆ ವಿರೋಧ: ಕಾರ್ಯಕ್ರಮ ರದ್ದು

ಕೃಷ್ಣನೂರಿನಲ್ಲಿ ಸನ್ನಿ ಲಿಯೋನಿ ಶೋಗೆ ವಿರೋಧ: ಕಾರ್ಯಕ್ರಮ ರದ್ದು


ಸನ್ನಿ ಲಿಯೋನಿ (ಸನ್ನಿ ಲಿಯೋನ್), ನೀಲಿ ಚಿತ್ರಗಳ ಲೋಕಕ್ಕೆ ವಿದಾಯ ಹೇಳಿ ವರ್ಷಗಳೇ ಆಗಿವೆ. ಅವರು ಈಗ ಚಿತ್ರರಂಗದಲ್ಲಿ ಸೆಟಲ್ ಆಗಿದ್ದಾರೆ ಆದರೂ ಸಹ ಅನೇಕ ಬಾರಿ ಅವರ ಇತಿಹಾಸದ ಕಾರಣಕ್ಕೆ ಹಲವಾರು ಬಾರಿ ಮುಜುಗರಕ್ಕೆ, ನಿಂದನೆಗೆ ಒಳಗಾಗುತ್ತಿದ್ದಾರೆ. ಸನ್ನಿ ಲಿಯೋ, ನೀಲಿ ಚಿತ್ರಜಗತ್ತಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದರೂ ಸಹ, ಅವನ ಗ್ಲಾಮರ್ ಕ್ವೀನ್ ಆಗಿ, ಪಾರ್ಟಿ ಗರ್ಲ್ ಆಗಿಯೇ ನೋಡುವುದಿಲ್ಲ. ಇದೇ ಕಾರಣಕ್ಕೆ ಹಲವು ಪಾರ್ಟಿಗಳಿಗೆ ವಿಶೇಷ ಅತಿಥಿಯಾಗಿ, ವಿಶೇಷ ಗ್ಲಾಮರಸ್ ಲೈವ್ ಶೋಗೆ ಆಹ್ವಾನಿಸಲಾಗಿದೆ. ಇಂಥಹುದೇ ಒಂದು ಶೋ ಇತ್ತೀಚೆಗೆ ರದ್ದಾಗಿದೆ.

ಹೊಸ ವರ್ಷಾಚರಣೆಗೆಂದು ಸನ್ನಿ ಲಿಯೋನಿ ಅವರ ಲೈವ್ ಶೋ ಕೃಷ್ಣನ ಜನ್ಮಭೂಮಿ ಎಂದು ಖ್ಯಾತ ಮಥುರಾನಲ್ಲಿ ಆಯೋಜನೆಯಾಗಿದೆ. ಮಥುರಾದ ಐಶಾರಾಮಿ ಖಾಸಗಿ ಹೋಟೆಲ್ ಒಂದು ಹೊಸ ವರ್ಷಾಚರಣೆಗೆಂದು ಡಿಜಿ ಪಾರ್ಟಿ ಆಯೋಜಿಸಿತ್ತು, ಕಾರ್ಯಕ್ರಮದಲ್ಲಿ ಸನ್ನಿ ಲಿಯೋನಿ ವಿಶೇಷ ಅತಿಥಿ ಆಗಿದ್ದರು. ಗ್ಲಾಮರಸ್ ನೃತ್ಯ ಪ್ರದರ್ಶನವನ್ನೂ ಸಹ ಅವರು ಅಲ್ಲಿ ನೀಡಲಿದ್ದರು. ಹೋಟೆಲ್‌ನವರು ಮುಂಚಿತವಾಗಿಯೇ ಸ್ಥಳೀಯ ಮತ್ತು ಪೊಲೀಸರಿಂದ ಅನುಮತಿಯನ್ನು ಸಹ ಪಡೆಯಲಾಗಿದೆ. ಆದರೆ ಕೆಲ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮುಖಂಡರ ಆಕ್ಷೇಪಣೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ:ಕೊಲ್ಕತ್ತನಲ್ಲಿ ಮಿಂಚು ಹರಿಸಿದ ಸನ್ನಿ ಲಿಯೋನಿ: ವಿಡಿಯೋ ನೋಡಿ

ಸನ್ನಿಯೋನಿ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಹೋಟೆಲ್ ನವರು ಘೋಷಣೆ ಆದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳವರು ಪ್ರತಿಭಟನೆ ಆರಂಭಿಸಿದ್ದರು. ಸ್ಥಳೀಯ ಧಾರ್ಮಿಕ ಪ್ರಮುಖರು, ಮಠದ ಗುರುಗಳು ಸಹ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೋಟೆಲ್‌ಗೆ ಮುತ್ತಿಗೆ ಹಾಕುವುದಾಗಿಯೂ ಸಹ ಕೆಲ ಧಾರ್ಮಿಕ ಸಂಘಟನೆಗಳ ಸದಸ್ಯರು ಎಚ್ಚರಿಕೆ ನೀಡಿದ್ದರು. ಇದೆಲ್ಲದರ ಬೆನ್ನಲ್ಲೇ ಇದೀಗ ಹೋಟೆಲ್ ನವರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

‘ಸನ್ನಿ ಲಿಯೋನಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು, ಅವರು ನಮ್ಮ ಹೋಟೆಲ್ ಕಾರ್ಯಕ್ರಮಕ್ಕೆ ಬರುವುದು ವಿಶೇಷವಾಗಿತ್ತು. ಅದಕ್ಕೆ ಬೇಕಾದ ಎಲ್ಲ ಅನುಮತಿಗಳನ್ನೂ ಸಹ ನಾವು ತೆಗೆದುಕೊಂಡಿದ್ದೆವು. ಕಾರ್ಯಕ್ರಮವನ್ನು ನಾವು ಕಾನೂನು ನಿಯಮದ ಅಡಿಯಲ್ಲಿ ನಡೆಸಿದ್ದೆವು ಆದರೆ ಇದೀಗ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ’ ಎಂದಿದೆ ಹೋಟೆಲ್ ಆಡಳಿತ ಮಂಡಳಿ.

ಸನ್ನಿ ಲಿಯೋನಿಗೆ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಅವರ ಕೆಲವು ಕಾರ್ಯಕ್ರಮಗಳು ಪ್ರತಿಭಟನೆಗೆ ಕಾರಣಗಳಿಗಾಗಿ ರದ್ದಾಗಿದ್ದು ಇದೆ. ಇದೀಗ ಮತ್ತೊಮ್ಮೆ ಸನ್ನಿ ಲಿಯೋನಿಯ ಕಾರ್ಯಕ್ರಮ ಧಾರ್ಮಿಕ ಮುಖಂಡರ ಒತ್ತಾಯದ ಕಾರಣಕ್ಕೆ ರದ್ದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *