2026 ರ ಐಪಿಎಲ್ ಆರಂಭಕ್ಕೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಈ ತಂಡದ ನಾಯಕತ್ವ ಹೊತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಈ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯವಾಗಿದೆ. ಹೀಗಾಗಿ ತಂಡದ ಚುಕ್ಕಾಣಿಯನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ಗೆ ವಹಿಸಲಾಗಿದೆ.
ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗುವುದು ಈ ಮೊದಲೇ ಖಚಿತವಾಗಿತ್ತು. ಅದರಂತೆ ತಂಡದ ಯುವ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾಗೆ ನಾಯಕತ್ವ ಸಿಗಬಹುದು ಎಂದು ಹೇಳಿದರು. ಆದರೆ ಅದೆಲ್ಲವನ್ನು ಸುಳ್ಳು ಮಾಡಿರುವ ಸನ್ರೈಸರ್ಸ್ ಆಡಳಿತ ಮಂಡಳಿ ಇಶಾನ್ ಕಿಶನ್ಗೆ ನಾಯಕತ್ವದ ಪಟ್ಟ ಕಟ್ಟಿದೆ.
ಇಶಾನ್ ಕಿಶನ್ ಗೆ ತಂಡದ ನಾಯಕತ್ವ ವಹಿಸುವುದಕ್ಕೂ ಪ್ರಮುಖ ಕಾರಣವಿದೆ. ಅದೇನೆಂದರೆ, ಇತ್ತಿಚಿಗಷ್ಟೆ ಮುಗಿದ ಟಿ20 ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಅತಿ ಹೆಚ್ಚು ರನ್ ಬಾರಿಸಿದ ಭಾರತದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಹೀಗಾಗಿ ಅವರಿಗೆ ತಂಡದ ನಾಯಕತ್ವ ವಹಿಸಲಾಗಿದೆ.
ಐಪಿಎಲ್ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಇಶಾನ್ ಕಿಶನ್ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಒಂದೆಡೆ ಕಿಶನ್ಗೆ ತಂಡದ ನಾಯಕತ್ವವಹಿಸಿರುವ ಫ್ರಾಂಚೈಸಿ, ಅಭಿಷೇಕ್ ಶರ್ಮಾಗೆ ಉಪನಾಯಕನ ಜವಾಬ್ದಾರಿ ನೀಡಿದೆ. ಈ ಇಬ್ಬರು ಯುವ ಆಟಗಾರರ ಸಾರಥ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಯಾವ ರೀತಿಯ ಪ್ರದರ್ಶನವನ್ನು ಹೊಂದಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಇಶಾನ್ ಕಿಶನ್ ತಮ್ಮ ನಾಯಕತ್ವದಲ್ಲಿ ಮಾರ್ಚ್ 28 ರಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ. ಇತ್ತೀಚಿನ ಟಿ20 ಪ್ರಮುಖನಲ್ಲಿ ಭಾರತದ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಇಶಾನ್ ಅವರಿಗೆ ನಾಯಕತ್ವದ ಅನುಭವ ಹೆಚ್ಚಿಲ್ಲ. ಆದಾಗ್ಯೂ, ಕೆಲವೇ ತಿಂಗಳುಗಳ ಹಿಂದೆ, ಅವರು ಜಾರ್ಖಂಡ್ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿಗೆ ಕೊಂಡೊಯ್ದಿದ್ದರು.




