ನಟಿ ಆಲಿಯಾ ಭಟ್ ಅವರ ಹಿರಿಯ ಸೋದರಿ ಶಾಹೀನ್ ಭಟ್, ತಮ್ಮ 37ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ಈಜುಪಟು ಹಾಗೂ ಫಿಟ್‌ನೆಸ್ ಟ್ರೈನರ್ ಆಗಿರುವ ಇಶಾನ್ ಮೆಹ್ರಾ ಅವರೊಂದಿಗೆ ಶಾಹೀನ್ ಎಂಗೇಜ್ ಆಗಿದ್ದಾರೆ.

ಅಲಿಯಾ ಭಟ್ ಸೋದರಿ(ಅಕ್ಕ) ಶಾಹೀನ್ ಭಟ್ ಅವರು ಕಡೆಗೂ ತಮ್ಮ 37ನೇ ವಯಸ್ಸಿನಲ್ಲಿ ಎಂಗೇಜ್ ಆಗಿದ್ದಾರೆ. ತನ್ನ ಅಕ್ಕ ಎಂಗೇಜ್ ಆಗಿರುವ ಕುರಿತು ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಅಳುತ್ತಿದ್ದೇನೆ ಎಂದು ಅಳುವ ಇಮೋಜಿ ಹಂಚಿಕೊಂಡು ಅಕ್ಕ ಶಾಹೀನಾ ಎಂಗೇಜ್‌ಮೆಂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾಹೀನಾ ಭಟ್ ಅಲಿಯಾ ಭಟ್ ಹಿರಿಯ ಸೋದರಿಯಾಗಿದ್ದು, 1988ರ ನವಂಬರ್ 28ರಂದು ಜನಿಸಿದ ಆಲಿಯಾ ಇಶಾನ್ ಮೆಹ್ರಾ ಎಂಬುವವರ ಜೊತೆ ಎಂಗೇಜ್ ಆಗಿದ್ದಾರೆ.

ಶಾಹೀನ್ ಭಟ್ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲಿ ಈ ಫೋಟೋಗಳನ್ನು ಹಂಚಿಕೊಂಡ ಅಲಿಯಾ ಪ್ರಸ್ತುತ ಅಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಶಾಹೀನ್ ಭಟ್ ಹಂಚಿಕೊಂಡಿರುವ ಫೋಟೋಗಳಲ್ಲಿ ಶಾಹೀನ್ ಇಶಾನ್ ಮೆಹ್ರಾ ಅವರನ್ನು ಹಿಡಿದುಕೊಂಡು ಎಂಗೇಜ್‌ಮೆಂಟ್ ರಿಂಗ್‌ನ ಫೋಟೋಗಳನ್ನು ತೋರಿಸುತ್ತಿದ್ದಾರೆ. ಪಾರ್ಕೊಂದರಲ್ಲಿ ಇಬ್ಬರು ಕೈ ಹಿಡಿದು ನಡೆದಾಡುತ್ತಿರುವ ಹಾಗೂ ಇಬ್ಬರು ಜೊತೆಗೆ ಕುಳಿತಿರುವ ಫೋಟೋಗಳನ್ನು ಶಾಹೀನ್ ಭಟ್ ಹಂಚಿಕೊಂಡಿದ್ದಾರೆ. ನಾವು ಒಬ್ಬರನ್ನೊಬ್ಬರು ಇಷ್ಟಪಡುವುದರಲ್ಲಿ ಇದನ್ನೆಲ್ಲಾ ಅತಿಯಾಗಿ ಮಾಡಿರಬಹುದು ಎಂದು ಅವರು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.

ಕಳೆದ ವರ್ಷ ತನ್ನ ಸೋದರಿ ಶಾಹೀನ್‌ಳ ಬಾಯ್‌ಫ್ರೆಂಡ್ ಜೊತೆ ಆಲಿಯಾ ಭಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಸ್ವಿಮ್ಮಿಂಗ್ ಪೂಲ್‌ನಿಂದ ಇಬ್ಬರು ಫೋಟೋಗಳಿಗೆ ಪೋಸ್ ಕೊಟ್ಟಿದ್ದರು. ಇದಕ್ಕೂ ಮೊದಲು ಶಾಹೀನ್ ಭಟ್ ತನ್ನ ಬಾಯ್‌ಫ್ರೆಂಡ್ ಇಶಾನ್ ಮೆಹ್ರಾ ಅವರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಾರ್ವಜನಿಕರಿಗೆ ತಮ್ಮ ಗೆಳೆಯನನ್ನು ಪರಿಚಯಿಸಿದ್ದರು. ಇಶಾನ್ ಮೆಹ್ರಾ ಅವರ ಹುಟ್ಟುಹಬ್ಬದಂದೇ ಸಾರ್ವಜನಿಕರಿಗೆ ಆತ ತನ್ನ ಬಾಯ್‌ಫ್ರೆಂಡ್ ಎಂದು ಪರಿಚಯಿಸಿದ ಶಾಹೀನ್ ಹ್ಯಾಪಿ ಬರ್ತ್‌ಡೇ ಸನ್‌ಶೈನ್ ಎಂದು ಬರೆದುಕೊಂಡಿದ್ದರು.

ಇಶಾನ್ ಮೆಹ್ರಾ ಅಂತಾರಾಷ್ಟ್ರೀಯ ಮಟ್ಟದ ಮಾಜಿ ಈಜುಪಟ್ಟು ಆಗಿದ್ದು, ಯುವ ಏಷ್ಯನ್ ಗೇಮ್ಸ್‌ನಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ನಂತರದಲ್ಲಿ ಅವರು ಫಿಟ್‌ನೆಸ್ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪ್ರಸ್ತುತ ಫುಲ್ ಟೈಮ್ ಫಿಟ್‌ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಎಟಿಜಿ ಪ್ರಮಾಣಿತ ಕೋಚ್ ಆಗಿದ್ದಾರೆ. ಇತ್ತ ಅಲಿಯಾ ಭಟ್‌ಗೆ ಶಾಹೀನ್ ಭಟ್ ಹಿರಿಯ ಸೋದರಿಯಾಗಿದ್ದಾರೆ. ಇಬ್ಬರಿಗೂ 4 ವರ್ಷ ವಯಸ್ಸಿನ ಅಂತರವಿದೆ. ಅಕ್ಕನಿಂಗಿಂತಲೂ ಮೊದಲೇ ಆಲಿಯಾ ಭಟ್ ಮದುವೆಯಾಗಿದ್ದು, ರಣ್‌ಬೀರ್ ಕಪೂರ್ ಮದುವೆಯಾಗಿರುವ ಆಲಿಯಾಗೆ ರಾಹಾ ಎಂಬ ಒಬ್ಬಳು ಮಗಳಿದ್ದಾಳೆ.

Source link
ಆಲಿಯಾ ಭಟ್ ಅಕ್ಕನ ಲೈಫ್‌ಗೆ ಎಂಟ್ರಿ ಕೊಟ್ಟ ಸನ್‌ಶೈನ್: ಅಂತರಾಷ್ಟ್ರೀಯ ಈಜುಪಟುವಿನ ಜೊತೆ ನಿಶ್ಚಿತಾರ್ಥ!