ಶ್ರೀರಂಗಪಟ್ಟಣದ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಹರೀಶ್, ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ. ಹೋಟೆಲ್‌ಗೆ ಬಂದ ಮಹಿಳೆಯೊಬ್ಬರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಖಾಸಗಿ ಹೋಟೆಲ್‌ನ ಸಪ್ಲೈಯರ್ ಶೌಚಾಯಲದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣ ಸಂಬಂಧ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ರಾಜಾಸ್ಥಾನ ಮೂಲದ ಹರೀಶ್ ಪಟ್ಟಣದ ಗಂಜಾಂ ರಸ್ತೆಯ ಹೈವೆ ಸೇತುವೆ ಬಳಿ ಇರುವ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಪುರುಷರು ಮತ್ತು ಮಹಿಳಾ ಶೌಚಾಲಯದ ನಡುವೆ ಇರುವ ಗೋಡೆ ಮೇಲೆ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

ಹೋಟೆಲ್‌ಗೆ ಬಂದ ಮಹಿಳೆಯರು ಶೌಚಾಲಯದ ಒಳಗೆ ಹೋದ ವೇಳೆ ಅವರ ಖಾಸಗಿ ಭಾಗಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಪರಿಶೀಲಿಸಿ ಹೋಟೆಲ್ ಮಾಲೀಕನಿಗೆ ದೂರಿದ್ದಾರೆ.

ಇದನ್ನೂ ಓದಿ: The UP Story: ಅಪ್ರಾಪ್ತ ತಂಗಿಯರು ಕರೆತಂದ ಹಿಂದೂ ಸ್ನೇಹಿತೆಯ ರೇ* ಮಾಡಿ, ಈತ ಏನು ಹೇಳ್ತಿದ್ದಾನೆ ಕೇಳಿ

ಇದನ್ನೂ ಓದಿ: ಬೆಂಗಳೂರಿನ ರಸ್ತೆಬದಿ ಕೇಳಿದ ಆ ಕಂದನ ಕೂಗು! ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ರೋಡಲ್ಲಿ ಬಿಟ್ಟು ಹೋದ ಪೋಷಕರು!

ನಂತರ ಮಾಹಿತಿ ತಿಳಿದ ಪೊಲೀಸರು ಹೋಟೆಲ್‌ಗೆ ಆಗಮಿಸಿ ಶೌಚಾಲಯದ ಬಳಿ ಮೊಬೈಲ್ ಇಟ್ಟ ವ್ಯಕ್ತಿಯನ್ನು ವಿಚಾರಿಸಿದಾಗ ನಿತ್ಯ ಇಂತಹ ಕೆಲಸ ಮಾಡಿರುವುದು ಬಹಿರಂಗವಾಗಿದೆ. ನಂತರ ಪೋಲಿಸರು ಆರೋಪಿ ಸಪ್ಲೈಯರ್ ಹರೀಶ್ ಹಾಗೂ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Source link
Mandya: ಹೋಟೆಲ್ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್: ಸಪ್ಲೈಯರ್ ಬಂಧನ