ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈಗ ಮದುವೆಯಾಗುತ್ತಿಲ್ಲ, ಬೇರೆ ಮದುವೆಯಾಗಿದ್ದಾನೆ ಎಂದು ದೂರು ದಾಖಲಿಸುವ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಲೀವ್ ಇನ್ ರಿಲೇಶನ್ಶಿಪ್ ವ್ಯಾಪಕವಾಗಿ ಹರಡಿದೆ. ಇನ್ನು ಪ್ರೀತಿ, ಸಂಬಂಧ, ಡೇಟಿಂಗ್ ಸರಿದಂತೆ ಹಲವು ಆಯಾಮಗಳಲ್ಲಿ ರಿಲೇಶನ್ಶಿಪ್ ಗಾಢವಾಗುತ್ತಿದೆ. ಆದರೆ ಮದುವೆ, ವೈವಾಹಿಕ ಜೀವನ ಎಂದು ಬಂದಾಗ ಹಲವರು ನನಗೆ ಆತ ಅಥವಾ ಆಕೆ ಮೋಸ ಮಾಡಿದಳು, ಮದುವೆಯಾಗುತ್ತೇನೆ ಎಂದು ಭರವಸೆಯಲ್ಲಿ ದೈಹಿಕ ಸಂಪರ್ಕ ಬಳಿಕ ಮೋಸ, ಅತ್ಯಾ**ರ ಆರೋಪ, ದೂರು ನೀಡಿ ಪ್ರಕರಣ ಕೋರ್ಟ್ ಮೆಟ್ಟಿಲೇರಿರುವುದು ಹೊಸದೇನಲ್ಲ. ಇದೀಗ ಈ ರೀತಿ ಅರ್ಜಿ ಹಿಡಿದು ಕೋರ್ಟ್ ಮೆಟ್ಟಿಲೇರುವ ಮಂದಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾಗಿ ಮದುವೆ ಹೆಸರಿನಲ್ಲಿ ದೈಹಿಕ ಸಂಪರ್ಕ ಬೆಳೆಸಿದ ಬಳಿಕ ಆತನಿಗೆ ಮೊದಲೇ ಮದುವೆಯಾಗಿತ್ತು ಅನ್ನೋದು ಗೊತ್ತಾಗಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ, ಉಜ್ವಲ್ ಭಯಾನ್ ಅವರಿದ್ದ ಪೀಠ ಕೆಲ ವಿಚಾರಗಳನ್ನು ಉಲ್ಲೇಖಿಸಿದೆ. ಈ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಆದರೆ ಸುಪ್ರೀಂ ಕೋರ್ಟ್ ನೀಡಿದ ಎಚ್ಚರಿಕೆ ಇದೀಗ ಹಲವರಿಗೆ ಮುಂಜಾಗ್ರತಾ ಕೈಪಿಡಿಯಾಗಿದೆ.

ಅಧಿಕೃತ, ಕಾನೂನು ಬದ್ಧ ಮದುವೆಗೂ ಮೊದಲಿನ ಪ್ರೀತಿ, ಲೀವ್ ಇನ್ ರಿಲೇಶನ್ಶಿಪ್, ಅಥವಾ ಇತರ ಯಾವುದೇ ಸಂಬಂಧಗಳು ಕಾನೂನು ದೃಷ್ಟಿಯಲ್ಲ ಮಾನ್ಯವಲ್ಲ. ಹೆಣ್ಣು ಗಂಡಿನ ಸಂಬಂಧ ಮದುವೆಗೂ ಮೊದಲು ಎಷ್ಟೇ ಗಾಢವಾಗಿದ್ದರೂ ಕಾನೂನು ದೃಷ್ಟಿಯಲ್ಲಿ, ಸಮಾಜಿಕ ದೃಷ್ಟಿಯಲ್ಲಿ ಅವರು ಅಪರಿಚಿತರು ಎಂದು ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ.

ಪ್ರೀತಿ ಅಥವಾ ಯಾವುದೇ ರಿಲೇಶನ್ಶಿಪ್ನಲ್ಲಿ ದೈಹಿಕ ಸಂಬಂಧಕ್ಕೆ ಮುಂದಾಗಬಾರದು. ಮದುವೆಗೂ ಮೊದಲು ಯಾರನ್ನು ಅತೀಯಾಗಿ ನಂಬುವುದು, ಅದೇ ಭರವಸೆ ಮೇಲೆ ದೈಹಿಕ ಸಂಪರ್ಕ ಬೆಳೆಸುವುದು ಉತ್ತಮವಲ್ಲ. ಮದುವೆಯಲ್ಲಿ ನಂಬಿಕೆ, ಪಾವಿತ್ರ್ಯತೆ ಬಗ್ಗೆ ನಂಬಿಕೆ ಇಟ್ಟವರು ಮದುವೆ ವರೆಗೆ ದೈಹಿಕ ಸಂಪರ್ಕ ಬೆಳೆಸುವುದರಿಂದ ದೂರ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಿತನಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾನೆ. ಆದರೆ ಆತನಿಗೆ ಮೊದಲೇ ಮದುವೆಯಾಗಿತ್ತು. ತನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.

ಈ ರೀತಿಯ ಪ್ರಕರಣಗಳಲ್ಲಿ ಕ್ರಿಮಿನಲ್ ಶಿಕ್ಷೆ, ಅಥವಾ ಇತರ ಶಿಕ್ಷೆಗಳಿಗಿಂತ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಹೇಳಿದೆ. ಮ್ಯಾಟ್ರಿಮೋನಿ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 18ಕ್ಕೆ ಮಂದೂಡಿದೆ.

ಇಂತಹ ಪ್ರಕರಣಗಲ್ಲಿ ಏನು ಮಾಡಬೇಕು

Source link
ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ