ವೆಂಕಿ ಅಟ್ಲೂರಿ ನಿರ್ದೇಶನದಲ್ಲಿ ಸೂರ್ಯ ನಟಿಸುತ್ತಿರುವ ‘ವಿಶ್ವನಾಥ್ & ಸನ್ಸ್’ ಸಿನಿಮಾ ಒಂದು ಮಲಯಾಳಂ ಚಿತ್ರದ ರಿಮೇಕ್ ಎಂಬ ಸುದ್ದಿ ಹಬ್ಬಿತ್ತು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

’ಲಕ್ಕಿ ಭಾಸ್ಕರ್’, ‘ವಾತಿ’ ಚಿತ್ರಗಳ ನಿರ್ದೇಶಕ ವೆಂಕಿ ಅಟ್ಲೂರಿ, ಈಗ ಸೂರ್ಯ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದು ಸೂರ್ಯ ಅವರ 46ನೇ ಚಿತ್ರ. ಈ ತಿಂಗಳ 2ನೇ ತಾರೀಕಿನಂದು ‘ವಿಶ್ವನಾಥ್ & ಸನ್ಸ್’ ಎಂದು ಶೀರ್ಷಿಕೆ ಘೋಷಿಸಲಾಯಿತು. ಸತತ ಸೋಲುಗಳಿಂದ ಕಂಗೆಟ್ಟಿರುವ ಸೂರ್ಯಗೆ ಈ ಸಿನಿಮಾ ಕಮ್‌ಬ್ಯಾಕ್ ನೀಡುವ ನಿರೀಕ್ಷೆಯಿದೆ. ಹೀಗಾಗಿ ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ.

ಆದರೆ, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದ ತಕ್ಷಣವೇ, ಇದು ಹಳೆಯ ಸಿನಿಮಾದ ರಿಮೇಕ್ ಇರಬಹುದೇ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಯಿತು. 2007ರಲ್ಲಿ ಪೃಥ್ವಿರಾಜ್ ನಟನೆಯ ಮಲಯಾಳಂ ಚಿತ್ರ ‘ಕಂಗಾರು’ವಿನ ರಿಮೇಕ್ ‘ವಿಶ್ವನಾಥ್ & ಸನ್ಸ್’ ಎಂದು ನೆಟ್ಟಿಗರು ವಾದಿಸತೊಡಗಿದರು. ಇದಕ್ಕೆ ಕಾರಣವಾಗಿದ್ದು ಸೂರ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್.

ಈ ಪೋಸ್ಟರ್‌ನಲ್ಲಿ ಸೂರ್ಯ ಒಂದು ಮಗುವನ್ನು ಬೇಬಿ ಹಗ್ ಕ್ಯಾರಿಯರ್‌ನಲ್ಲಿ ಹೊತ್ತುಕೊಂಡು ನಿಂತಿದ್ದಾರೆ. ‘ಕಂಗಾರು’ ಚಿತ್ರದಲ್ಲೂ ಪೃಥ್ವಿರಾಜ್ ಇದೇ ರೀತಿ ಮಗುವನ್ನು ಹೊತ್ತಿದ್ದರು. ‘ಕಂಗಾರು’ ಚಿತ್ರದ ಪೋಸ್ಟರ್‌ನಲ್ಲೂ ಇದೇ ಫೋಟೋ ಇತ್ತು. ಆದರೆ, ಎರಡೂ ಚಿತ್ರಗಳ ನಡುವಿನ ಸಾಮ್ಯತೆ ಕೇವಲ ಪೋಸ್ಟರ್‌ಗೆ ಸೀಮಿತ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಸೂರ್ಯ ಅವರ ಚಿತ್ರಕ್ಕೂ ‘ಕಂಗಾರು’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿವೆ.

ಈ ಚಿತ್ರವು ವೆಂಕಿ ಅಟ್ಲೂರಿ ಅವರದ್ದೇ ಸ್ವಂತ ಕಥೆಯಾಗಿದ್ದು, ಉಳಿದಂತೆ ಹಬ್ಬಿರುವ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿಗಳು ಹೇಳಿವೆ. ಈ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ಮಮಿತಾ ಬೈಜು ನಟಿಸುತ್ತಿದ್ದಾರೆ. ರವೀನಾ ಟಂಡನ್ ಮತ್ತು ರಾಧಿಕಾ ಶರತ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳ ಅಡಿಯಲ್ಲಿ ನಾಗ ವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Source link
ರೋಲೆಕ್ಸ್ ಸೂರ್ಯನ 'ವಿಶ್ವನಾಥ್ & ಸನ್ಸ್' ರಿಮೇಕ್ ಸಿನಿಮಾನಾ? ಹೊಸ ವಿವಾದದ ಹಿಂದಿನ ಸತ್ಯವೇನು?