ಬೆಂಗಳೂರು (ಸೆ.3): ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಸುಂಕಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಲೆಕ್ಕ ಹಾಕಿದ್ದರು. ಆದರೆ, ಭಾರತವು ಅನಿರೀಕ್ಷಿತ ಹೆಜ್ಜೆಗಳನ್ನು ಇಡುವ ಮೂಲಕ ಅಮೆರಿಕದ ಸುಂಕ ಸಮರಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.

ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!

ಈ ಮೂಲಕ ಭಾರತವು "ಬೇಟೆಗಾರನೇ ಈಗ ಬೇಟೆಯಾಗಿದ್ದಾನೆ" ಎಂಬಂತಹ ಪರಿಸ್ಥಿತಿ ಸೃಷ್ಟಿಸಿದೆ. ಭಾರತದ ಈ ರಾಜತಾಂತ್ರಿಕ ನಡೆಗಳು ಅಮೆರಿಕಾವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಸುಂಕ ಯುದ್ಧವನ್ನು ಕೊನೆಗೊಳಿಸುವ ಅನಿವಾರ್ಯತೆಯನ್ನು ಸೃಷ್ಟಿಸಿವೆ.

ಟ್ರಂಪ್ ಅವರ ಸುಂಕ ನೀತಿಯು ಅಮೆರಿಕಕ್ಕೆ ಅನಿರೀಕ್ಷಿತ ಸಂಕಷ್ಟ ತಂದಿದೆ. ಭಾರತವು ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ಟ್ರಂಪ್ ಅವರ ಸುಂಕ ಸಮರಕ್ಕೆ ಪ್ರತ್ಯುತ್ತರ ನೀಡುತ್ತಿದೆ. ಈ ಮೂರು ದೇಶಗಳ ನಡುವಿನ ಒಗ್ಗಟ್ಟು ಅಮೆರಿಕಾದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

Source link
ಮೋದಿ ರಣವ್ಯೂಹದಲ್ಲಿ ಸೆರೆಯಾದ ಸುಂಕಾಧ್ಯಕ್ಷ! ಟ್ರಂಫ್ ಟ್ಯಾರಿಫ್.. ಟಾರ್ಗೆಟ್ ಭಾರತ.. ಕೆಣಕಿ ಕೆಟ್ಟ ಅಮೆರಿಕಾ..!