
‘ಧುರಂಧರ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು.
ಪಾರ್ವತಮ್ಮ ರಾಜ್ ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ವಿಜಯಲಕ್ಷ್ಮೀ, ಶ್ರೀನಾಥ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿ ಮೂರು ದಶಕ ಕಳೆಯುತ್ತಾ ಬಂದಿದೆ. ಈ ಸಿನಿಮಾ ಸಂಪೂರ್ಣವಾಗಿ ಭಯೋತ್ಪಾದನೆಯ ಮೇಲೆ ಇದೆ. ಈ ದೃಶ್ಯವೊಂದು ಈಗ ವೈರಲ್ ಆಗಿದೆ.
ಅಧ್ಯಕ್ಷ (ಶ್ರೀನಾಥ್) ಗುರು (ರಾಘವೇಂದ್ರ ರಾಜ್ ಕುಮಾರ್) ಬಳಿ ಬಂದು ಭಯೋತ್ಪಾದಕ ಜೊತೆ ಸೇರುವಂತೆ ಕೋರಿದರು. ಭಯೋತ್ಪಾದಕರ ಜೊತೆ ಸೇರಿ ಅವರಲ್ಲಿ ಒಬ್ಬರಾಗಿ ಭಯೋತ್ಪಾದಕ ಪ್ಲ್ಯಾನ್ ನಾಶ ಮಾಡುವಂತೆ ಅಧ್ಯಕ್ಷರ ಕೋರಿಕೆ ಇಡುತ್ತಾನೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಅನೇಕರು ‘ಧುರಂಧರ’ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ.
1998 ರಲ್ಲಿ, ಇದು ರಾಷ್ಟ್ರೀಯ ಭದ್ರತೆ, ಒಳನುಸುಳುವಿಕೆ ಮತ್ತು terr0r!sts ಗೆ ಸಂಬಂಧಿಸಿದ ಮೊದಲ ಚಲನಚಿತ್ರ ಎಂದು ನಾನು ಭಾವಿಸುತ್ತೇನೆ. ಕಥೆಯ ಕಥಾವಸ್ತುವು ತುಂಬಾ ಆಕರ್ಷಕವಾಗಿತ್ತು ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರೂ ಆಘಾತಕ್ಕೊಳಗಾದರು #ಧುರಂಧರ್2’ದಿ ರಿವೆಂಜ್
ಸ್ವಸ್ತಿಕ್ ಕೆಎಫ್ಐನ ಕಲ್ಟ್ ಚಲನಚಿತ್ರಗಳಲ್ಲಿ ಒಂದಾಗಿ ಉಳಿದಿದೆ. ಇದು IH ಸ್ಥಿತಿಗೆ ಅರ್ಹವಾಗಿದೆ https://t.co/wPFML6hOoT
— ಮಿಸ್ಟರ್ ಸಿ (@misterc_speaks) ಮಾರ್ಚ್ 26, 2026
ಧುರಂಧರ ಸಿನಿಮಾದಲ್ಲೂ ರಣವೀರ್ ಸಿಂಗ್ ಬಳಿ ಬರುವ ಆರ್ ಮಾಧವನ್ ಇದೇ ರೀತಿಯ ಬೇಡಿಕೆ ಇಡುತ್ತಾರೆ. ಈ ದೃಶ್ಯಕ್ಕೆ ಹೋಲಿಕೆ ಅನೇಕರು ‘ಸ್ವಸ್ತಿಕ್’ ಚಿತ್ರವನ್ನು ‘ಧುರಂಧರ’ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ‘ಸ್ವಸ್ತಿಕ್’ ಚಿತ್ರದ ಸೇನಾ ಮುಖ್ಯಸ್ಥನೇ ವಿಲನ್ ಆಗಿದ್ದಾನೆ. ಉಗ್ರರ ಜೊತೆ ಸೇರಿ ಆತನೇ ಕೆಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಆದರೆ,’ಧುರಂಧರ 2′ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ.
ಇದನ್ನೂ ಓದಿ: ‘ಧುರಂಧರ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್
ಈಗ ಧುರಂಧರ ರಿಲೀಸ್ ಬೆನ್ನಲ್ಲೇ ಈ ಸಿನಿಮಾದ ಕ್ಲಿಪ್ ವೈರಲ್ ಆಗುತ್ತಿದೆ. ಸುಮಾರು 30 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಬ್ರಿಲಿಯಂಟ್ ಆಗಿ ಸಿನಿಮಾ ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.