ಸಾಮಾನ್ಯವಾಗಿ ಕೆಲವರಿಗೆ ಸಿಹಿ ತಿಂಡಿ ಸೇವನೆ ಮಾಡುವುದು ಎಂದರೆ ಬಲು ಇಷ್ಟ. ಅವರು ತಮ್ಮ ಒತ್ತಡವನ್ನು ನಿವಾರಿಸಲು, ಸಂತೋಷವನ್ನು ಹಂಚಿಕೊಳ್ಳಲು ಹೀಗೆ ನಾನಾ ಕಾರಣಗಳಿಗೆ ಸಿಹಿ ತಿಂದು ಖುಷಿ ಪಡುತ್ತಾರೆ. ಆದರೆ ಇನ್ನು ಕೆಲವು ಊಟ, ತಿಂಡಿ ಆದ ನಂತರ ಸಿಹಿತಿಂಡಿ ತಿನ್ನುವ ಅಭ್ಯಾಸ (ಸಿಹಿ ಕಡುಬಯಕೆಗಳು) ಇಟ್ಟುಕೊಂಡಿರುತ್ತಾರೆ. ಕೆಲವು ಮನೆಗಳಲ್ಲಿ ಸಂಪ್ರದಾಯದಂತೆ ಮುಂದುವರೆದಿದೆ. ಆದರೆ ಊಟವಾದ ನಂತರ ಯಾಕೆ ಸಿಹಿ ತಿಂಡಿ ಸೇವನೆ ಮಾಡುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ… ಇದಕ್ಕೆ ಕಾರಣಗಳು ಹಲವಾರಿದ್ದರೂ ಅದನ್ನು ನಿಯಂತ್ರಿಸುವ ಮಾರ್ಗಗಳನ್ನು ಗಮನ ಹರಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಊಟದ ನಂತರ ಸಿಹಿ ತಿನ್ನಲು ಮನಸ್ಸಾಗುವುದಕ್ಕೆ ಕಾರಣವೇನು?
ಕೆಲವರಿಗೆ ಸಿಹಿತಿಂಡಿ ತಿನ್ನಬೇಕು ಎಂಬ ಬಯಕೆ ಹೆಚ್ಚಾಗಿರುತ್ತದೆ. ಇನ್ನು ಹಲವರಿಗೆ ಆರೋಗ್ಯ ಸಮಸ್ಯೆಗಳಿಂದ ಸಿಹಿತಿಂಡಿಗಳನ್ನು ತಿನ್ನುವ ಆಸೆಗಾಗಿ. ಅದರಲ್ಲಿಯೂ ಸಕ್ಕರೆ ಮಟ್ಟದಲ್ಲಿನ ಏರಿಳಿತ ಕೂಡ ಇದಕ್ಕೆ ಒಂದು ಪ್ರಮುಖವಾಗಿದೆ. ಜೊತೆಗೆ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಇದ್ದಾಗ, ಸಕ್ಕರೆ ಮಟ್ಟ ಕಡಿಮೆಯಾಗುತ್ತವೆ. ಆಗ ದೇಹವು ಶಕ್ತಿಗಾಗಿ ಹೆಚ್ಚಿನ ಸಕ್ಕರೆಯನ್ನು ಬಯಸುತ್ತದೆ, ಇದರ ಪರಿಣಾಮವಾಗಿ ಸಿಹಿ ತಿಂಡಿಗಳ ಬಯಕೆ. ಅಷ್ಟೇ, ಈ ರೀತಿ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಪೌಷ್ಟಿಕಾಂಶದ ಕೊರತೆಯಾಗಿದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಾದಾಗ ಸಿಹಿತಿಂಡಿ ತಿನ್ನಬೇಕು ಎಂಬ ಹಂಬಲ.
ಇದನ್ನೂ ಓದಿ: ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು!
ಕೆಲವರಿಗೆ ಪದೇ ಪದೇ ಬಾಯಾರಿಕೆಯಾಗುತ್ತದೆ ಎಂದರೆ ಅವರು ಅದನ್ನು ಹಸಿವು ಎಂದು ತಪ್ಪಾಗಿ ತಿಳಿಯುತ್ತಾರೆ. ಈ ರೀತಿಯಾಗುವ ನಿರ್ಜಲೀಕರಣ ಕೂಡ ದೇಹವನ್ನು ಸಿಹಿತಿಂಡಿ ತಿನ್ನಬೇಕು ಎಂಬ ಬಯಕೆಗೆ ಕಾರಣ. ಕೆಲವೊಮ್ಮೆ ದೇಹ ದಣಿದಿದ್ದಾಗಲೂ ಕೂಡ, ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪಡೆಯಲು ಅಥವಾ ದಣಿವನ್ನು ನಿವಾರಿಸಲು ಸಿಹಿಯಾಗಿರುವ ಆಹಾರವನ್ನು ಸೇವಿಸಲು ದೇಹವನ್ನು ಬಯಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ